ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಬಸವೇಶ್ವರ ನಗರದ ಸಾರ್ವಜನಿಕ ಮುಕ್ತಿಧಾಮದಲ್ಲಿ ನಿರ್ಮಾಣಗೊಂಡ 25 ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆಯನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಸ್ಮಶಾನದ ಗೇಟ್ ಹತ್ತಿರ ಬಂದರೆ ಭಯಪಡುವ ಸಂದರ್ಭದಲ್ಲಿ ನೀವು ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಬೇಕು. ನಾನು ಒಮ್ಮೆಯೂ ಸ್ಮಶಾನದ ಕಾರ್ಯಕ್ರದ ವೇದಿಕೆ ಹತ್ತಿರಲಿಲ್ಲ. ಇದು ಪ್ರಥಮ ಅನುಭವ.ಮುಂದಿನ ದಿನಗಳಲ್ಲಿಸ್ಮಶಾನದ ಅಭಿವೃದ್ಧಿಗೆ ಹೆಚ್ಚಿನ ಅನುದಾನಳೊದಗಿಸಿ ವ್ಯವಸ್ಥಿತ ಮುಕ್ತಿಧಾಮ ಮಾಡಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಗುರುಸಿದ್ದೇಶ್ವರ ಮಠದ ಗುರುಸಿದ್ದ ಶಿವಾಚಾರ್ಯರ ಶ್ರೀಗಳು ಮಾತನಾಡಿ, ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಅದನ್ನು ನೀವೆಲ್ಲ ಸೇರಿ ನೆರವೇರಿಸಿದ್ದು ಸಂತಸ ತಂದಿದೆ. ಬೇರೆ ಊರುಗಳ ಸ್ಮಶಾನಗಳಿಗೆ ಹೋಲಿಕೆ ಮಾಡಿದರೆ ಇದು ತುಂಬಾ ವಿಭಿನ್ನ ಎನ್ನಿಸುತ್ತದೆ. ಸುತ್ತಲೂ ಗಿಡಗಳು, ಹಕ್ಕಿಗಳ ಕಲರವ, ನೀರಿನ ವ್ಯವಸ್ಥೆ, ಶಿವನ ಪ್ರತಿಮೆ ಮನಸ್ಸಿಗೆ ನೆಮ್ಮದಿ, ಪ್ರಶಾಂತತೆ ನೀಡಿದವು. ಈ ಸ್ಮಶಾನ ಭಯ ತರಿಸುವುದಿಲ್ಲ. ಸುತ್ತಲೂ ಮನೆಗಳಿದ್ದು, ಎಲ್ಲರೂ ನಿರ್ಭಯದಿಂದ ಬದುಕುತ್ತಿದ್ದಾರೆ. ಇದು ಉಳಿದೆಲ್ಲ ಊರುಗಳಿಗೆ ಮಾದರಿಯಾಗಿದೆ ಎಂದರು.ಇದೇ ವೇಳೆ ಸ್ಮಶಾನ ಅಭಿವೃದ್ಧಿಗೆ ಧನ ಸಹಾಯ ಮಾಡಿದ ದಾನಿಗಳಿಗೆ ಶಾಸಕರು ಸನ್ಮಾನಿಸಿದರು. ಸ್ಮಶಾನ ನಿರ್ವಹಣೆ ಮಾಡುವ ಸಿಬ್ಬಂದಿಗೆ ಅಧಿಕೃತವಾದ ನೇಮಕಾತಿ ಆದೇಶಪತ್ರ ಶಾಸಕರು ನೀಡಿದರು.