ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಈ ಸಂಬಂಧ ಗ್ರಾಮದ ಹಲವರು ಮುಜರಾಯಿ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿ ಮೂಲ ವಿಗ್ರಹಗಳನ್ನು ಪತ್ತೆ ಮಾಡಿ ಮತ್ತೆ ಮೂಲ ಸ್ಥಳದಲ್ಲೆ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿದ್ದರು. ಈ ವಿವಾದ ನ್ಯಾಯಾಲಯ ಮೆಟ್ಟಿಲೇರಿತ್ತು. ಮೂಲ ದೇವರ ವಿಗ್ರಹಗಳು ತೀವ್ರ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಹಿಂದಿನ ತಹಸೀಲ್ದಾರ್ ಆಂಧ್ರದ ಕುಪ್ಪಂ ಬಳಿ ಇದ್ದ ಮೂಲ ವಿಗ್ರಹಗಳನ್ನು ಪತ್ತೆ ಮಾಡಿ ತಂದು ದೇವಾಲಯದ ಕೊಠಡಿಯೊಂದರಲ್ಲಿಟ್ಟು ಬೀಗ ಹಾಕಿಸಿದ್ದರು. ಐದು ವರ್ಷವಾದರೂ ಮೂಲ ವಿಗ್ರಹಗಳನ್ನು ಮರು ಸ್ಥಾಪನೆ ಮಾಡಲು ಸಾಧ್ಯವಾಗಿರಲಿಲ್ಲ.ಹಾಗೂ ಕೊಠಡಿಯ ಬೀಗ ಸಹ ಹಿಂದಿನ ತಹಸೀಲ್ದಾರ್ ಬಳಿಯೇ ಇಟ್ಟುಕೊಂಡಿದ್ದರಿಂದ ವಿಗ್ರಹಗಳಿಗೆ ಮೋಕ್ಷ ಸಿಕ್ಕಿರಲಿಲ್ಲ.
ಪ್ರತಿಷ್ಠಾಪನೆಗೆ ಡೀಸಿ ಆದೇಶಫೆಬ್ರವರಿ ೨೮ರಂದು ಹಳೇ ವಿಗ್ರಹಗಳನ್ನು ಪುನರ್ ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು, ಈ ಹಿನ್ನೆಲೆಯಲ್ಲಿ ಕೊಠಡಿಯ ಬೀಗ ಮುರಿದು ವಿಗ್ರಹಗಳನ್ನು ನೂತನ ವಿಗ್ರಹಗಳ ಮುಂದೆ ಇಟ್ಟು ಮರು ಪ್ರತಿಷ್ಠಾಪನೆ ಮಾಡಲಾಯಿತು. ಮೂರು ದಿನಗಳ ಕಾಲ ಮುಜರಾಯಿ ಇಲಾಖೆ ಇಒ ಡಾ.ಸೆಲ್ವಮಣಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.