ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಅತಂತ್ರವಾಗಿರುವ ಬದುಕಿಗೆ ಅನ್ಯ ಕಸುಬು ಅನಿವಾರ್ಯವಾಗಿದೆ ಎಂದು ಕುರುಹಿನಶೆಟ್ಟಿ ಸಮಾಜದ ಹಿರಿಯ ಮುಖಂಡ ಕೆ.ವಿ.ಅರುಣ್‌ಕುಮಾರ್ ತಿಳಿಸಿದರು.ಪಟ್ಟಣದ ನೇಕಾರ ಕುರುಹಿನ ಶೆಟ್ಟಿ ಯುವ ಬಳಗ, ಗುರು ಸಿದ್ದಾರೂಡಸ್ವಾಮಿ ಕುರುಹಿನ ಶೆಟ್ಟಿ ಅನ್ನಸಂತರ್ಪಣೆ ಸಮಿತಿ ಹಮ್ಮಿಕೊಂಡಿದ್ದ ರಾಮನವಮಿ ಹಾಗೂ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನಸಂತರ್ಪಣೆಯಲ್ಲಿ ಮಾತನಾಡಿದರು.
ನೇಕಾರಿಕೆ ಕುಲ ಕಸುಬಾದರೂ ಜಾಗತಿಕ ಮಟ್ಟದ ತೀವ್ರ ಸ್ಪರ್ಧೆಯಂತಹ ಹತ್ತಾರು ಹೊಡೆತದಿಂದ ವೃತ್ತಿ ನಂಬಿ ಬದುಕುವ ಕಾಲ ದೂರವಾಗಿದೆ. ನೇಕಾರ ಸಮುದಾಯದಲ್ಲಿ ಪ್ರತಿಭಾನ್ವಿತರಿದ್ದು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿ ಹಿಂದುಳಿಯುವಂತಾಗಿದೆ ಎಂದರು.ನೇಕಾರಿಕೆ ಬದುಕು ದುಸ್ಥರವಾಗಿ ನೇಕಾರಿಕೆ ನಂಬಿದವರು ಬಹುತೇಕರು ಗ್ರಾಮ ಬಿಟ್ಟು ಜೀವನ ಕಟ್ಟಿಕೊಳ್ಳಲು ಉದ್ಯೋಗ ಹರಸಿ ನಗರ ಪ್ರದೇಶಕ್ಕೆ ವಲಸೆ ಹೋಗುವಂತಾಗಿದೆ. ಸಮಾಜದ ಸತ್ಕಾರ್ಯಗಳ ಕುರಿತು ಧನಾತ್ಮಕವಾಗಿ ಚಿಂತಿಸುವುದು ಸಮಾಜದ ಅಭಿವೃದ್ಧಿ ದೃಷ್ಟಿಯಲ್ಲಿ ಆರೋಗ್ಯಕರವಾಗಿದೆ. ಬದುಕಿನ ಹಕ್ಕಾಗಿ ರೂಪಿಸಿಕೊಳ್ಳಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ನುಡಿದರು.
ರಾಮ ಎಂದರೆ ಮಾರ್ಯದೆ ಪುರೋಷೋತ್ತಮ. ಹನುಮ ಎಂದರೆ ಭಕ್ತಿಯ ಮಹಾನ್ ಭಂಟ ಎಂದು ನಮ್ಮ ಸಂಸ್ಕೃತಿಯಲ್ಲಿ ಜಗಜ್ಜಾಹಿರುಆಗಿದ್ದಾರೆ ಎಂದರು. ನಂತರ ನಡೆದ ಅನ್ನ ಸಂತರ್ಪಣೆ, ಪೂಜಾಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿದ್ದರು.ಈ ವೇಳೆ ರಾಜೇಶ್, ಹನುಮಂತಶೆಟ್ಟಿ, ರಘು, ಶ್ರೀನಿವಾಸ್, ದೊರೆ, ಕಿರಣ್, ಗೋವಿಂದ, ಸ್ವಾಮಿ, ಡಿ. ವಾಸು, ರೋಹಿತ್, ವೆಂಕಟೇಶ್, ದೀಪು, ಪ್ರಕಾಶ್, ಮಂಜುನಾಥ್ ಇದ್ದರು.
ಏ.18 ರಿಂದ 20ರವರೆಗೆ ಶ್ರೀ ಪಟ್ಟಲದಮ್ಮ ಜಾತ್ರಾ ಮಹೋತ್ಸವದೇವಲಾಪುರ:
ನಾಗಮಂಗಲ ತಾಲೂಕು ದೇವಲಾಪುರ ಗ್ರಾಮದಲ್ಲಿ ಏ.18 ರಿಂದ 20ರವರೆಗೆ ಶಕ್ತಿ ದೇವತೆ ಶ್ರೀಪಟ್ಟಲದಮ್ಮ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಜರುಗಲಿದೆ.ಶ್ರೀಪಟ್ಟಲದಮ್ಮ ದೇವಿ ಇಷ್ಟಾರ್ಥ ನೆರವೇರಿಸುವ ಶಕ್ತಿ ದೇವತೆಯಾಗಿ ಹೊರಭಕ್ತರನ್ನು ಹಾರೈಸುವ ಕರುಣಾಮಯಾಗಿ ಭಕ್ತರನ್ನು ಬರಮಾಡಿಕೊಳ್ಳುವ ಶಕ್ತಿಯಾಗಿ ಬೆಳೆದಿದೆ. ಅಮ್ಮನ ಜಾತ್ರಾ ಮಹೋತ್ಸವಕ್ಕೆ ಜನಸಾಗರ ಸೇರಲಿದೆ. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಿದ್ಯುತ್ ದೀಪ ಅಲಂಕಾರ ನಡೆಯುತ್ತಿದೆ. ವಿದ್ಯುತ್ ದೀಪಗಳಿಂದ ದೇವರ ಚಿತ್ರಗಳ ಆಕರ್ಷಣೆ ಗಮನ ಸೆಳೆಯುತ್ತಿದೆ.
ಏ.18ರ ಶುಕ್ರವಾರ ರಾತ್ರಿ ಉತ್ಸವ ಮೂರ್ತಿಗಳ ಪಟ್ಟದ ಕುಣಿತ, ಪಲ್ಲಕ್ಕಿ ಉತ್ಸವ, ಮಡೆ ಉತ್ಸವ, ತಾಯಿಯ ಮೆರವಣಿಗೆಯೊಂದಿಗೆ ಮಹಿಳೆಯರು ಸಾಗುವರು. ಶನಿವಾರ ಬೆಳಗಿನ ಜಾವ ಕೊಂಡೊತ್ಸವ, ನಂತರ ಮಧ್ಯಾಹ್ನ ಗ್ರಾಮದ ಮನೆಮನೆಗಳ ಬಳಿ ತಾಯಿ ಪಟ್ಟಲದಮ್ಮ ಮಡಿಲಕ್ಕಿ ನೀಡಿ ಸಂಜೆ ವೇಳೆಗೆ ದೇವಿ ರಥೋತ್ಸವ ನಡೆಯಲಿದೆ. ನಂತರ ಭಾನುವಾರ ಸಂಜೆ ದೇವಸ್ಥಾನದಿಂದ ರಥೋತ್ಸವ ಹಿಂದಿರುಗುತ್ತದೆ. ಏ.18 ರಂದು ತೂಬಿನಕೆರೆ ಗ್ರಾಮದಲ್ಲಿಯೂ ಪಟ್ಟಲದಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಹಬ್ಬದ ಅಂಗವಾಗಿ ದೇವಿಗೆ ಬೆಳಿಕವಚ ಧಾರಣೆಯಾಗಲಿದೆ.ಪಟ್ಟಲದಮ್ಮ ಹಬ್ಬಕ್ಕೆ ಭದ್ರಾವತಿ, ಶಿವಮೊಗ್ಗ, ಬೆಂಗಳೂರು ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಜನರು ಆಗಮಿಸುತ್ತಾರೆ. ಊರಿನ ಸುತ್ತ ವಿದ್ಯುತ್ ದೀಪಾಲಂಕರ ಗಮನ ಸೆಳೆಯುತ್ತಿದೆ. ಏಳೂರು ಹಬ್ಬ ಎಂದು ಪ್ರಸಿದ್ಧಿ ಪಡೆದಿರುವ ತೂಬಿನಕೆರೆ ಪಟ್ಟಲದಮ್ಮ ಅದ್ಧೂರಿ ಜಾತ್ರಾ ಮಹೋತ್ಸವ ಜರುಗಲಿದೆ.