ಭಾರತದ ಸತ್ಸಂಪ್ರದಾಯ, ಸಂಸ್ಕಾರಗಳಿಗೆ ನಮ್ಮ ಪೂರ್ವಜರೇ ಕಾರಣ: ಶಶಿ ಸುರೇಶ್

KannadaprabhaNewsNetwork | Published : Jul 22, 2024 1:23 AM

ಸಾರಾಂಶ

ಕಡೂರು, ಜಗತ್ತು ಎಷ್ಟೇ ಆಧುನಿಕವಾಗಿ ಬೆಳೆದಿದ್ದರೂ ಸಹ ಭಾರತದಲ್ಲಿ ಸತ್ಸಂಪ್ರದಾಯ ಮತ್ತು ನಮ್ಮ ಸಂಸ್ಕಾರಗಳು ಅಷ್ಟೇ ಪ್ರಮಾಣದಲ್ಲಿ ಉತ್ತುಂಗದಲ್ಲಿರಲು ನಮ್ಮ ಪೂರ್ವಜರು ಕಾರಣ ಎಂದು ಭಾವಸಾರ ವಿಷನ್ ರಾಷ್ಟ್ರೀಯ ಅಧ್ಯಕ್ಷೆ ಶಶಿ ಸುರೇಶ್ ನವಲೆ ಹೇಳಿದರು.

ಭಾವಸಾರ ವಿಷನ್ ಇಂಡಿಯಾ, ಭಾವಸಾರ ಕ್ಷತ್ರಿಯ ಸಮಾಜದಿಮದ ರಾಜ್ಯಮಟ್ಟದ ವಧು-ವರರ ಪರಿಚಯ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಕಡೂರು

ಜಗತ್ತು ಎಷ್ಟೇ ಆಧುನಿಕವಾಗಿ ಬೆಳೆದಿದ್ದರೂ ಸಹ ಭಾರತದಲ್ಲಿ ಸತ್ಸಂಪ್ರದಾಯ ಮತ್ತು ನಮ್ಮ ಸಂಸ್ಕಾರಗಳು ಅಷ್ಟೇ ಪ್ರಮಾಣದಲ್ಲಿ ಉತ್ತುಂಗದಲ್ಲಿರಲು ನಮ್ಮ ಪೂರ್ವಜರು ಕಾರಣ ಎಂದು ಭಾವಸಾರ ವಿಷನ್ ರಾಷ್ಟ್ರೀಯ ಅಧ್ಯಕ್ಷೆ ಶಶಿ ಸುರೇಶ್ ನವಲೆ ಹೇಳಿದರು.ಪಟ್ಟಣದ ಶ್ರೀ ಪಾಂಡುರಂಗ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಭಾವಸಾರ ವಿಷನ್ ಇಂಡಿಯಾ ಏರಿಯಾ 103 ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ವಧು-ವರರ ಪರಿಚಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಇಂದು ಸತಿಪತಿಯರು ಸಾಮರಸ್ಯರದ ಜೀವನ ನಡೆಸುತ್ತಿದ್ದಾರೆಂದರೆ ಅದಕ್ಕೂ ನಮ್ಮ ಪೂರ್ವಜರು ಅಂದಿನ ಕಾಲದಿಂದಲೂ ಮುಂದುವರಿಸಿಕೊಂಡು ಬಂದಿರುವ ಶಾಸ್ತ್ರ ಸಂಪ್ರದಾಯಗಳೇ ಕಾರಣ. ಕೌಟುಂಬಿಕ ಸಂಬಂಧಗಳು ಗಾಢವಾಗಿ ಬೆಸೆಯಲು, ಮುಂದಿನ ಪೀಳಿಗೆಗೆ ಈ ಸಂಬಂಧಗಳನ್ನು ತಲುಪಿಸುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಮೌಲ್ಯ ಯುತ ಸಂಬಂಧಗಳನ್ನುಪರಸ್ಪರ ಅರಿಯಲು ಮತ್ತು ಗಟ್ಟಿಯಾಗಲು ಇಂತಹ ಪರಿಚಯ ಸಮ್ಮೇಳನಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಈ ನಿಟ್ಟಲ್ಲಿ ಕಡೂರಿನ ಭಾವಸಾರ ಸಮಾಜ ಕಾರ್ಯ ಶ್ಲಾಘನೀಯ ಎಂದರು.

ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗು ಭಾವಸಾರ ವಿಷನ್ನಿನ ಎನ್ ಇಸಿ ಸದಸ್ಯ ಕೆ.ಎನ್. ಮಂಜುನಾಥ್ ರಾವ್ ಬಾಂಗ್ರೆ ಮಾತನಾಡಿ, ಭಾವಸಾರ ಸಮಾಜ ಬಂಧುಗಳು ವಧುವರರು ಪರಸ್ಪರ ಬೆರೆತು ಪರಿಚಯದ ಮೂಲಕ ಸೌಹಾರ್ದಯುತ ವೈವಾಹಿಕ ಜೀವನಕ್ಕೆ ಕಾಲಿಡಲು ಅನುಕೂಲವಾಗುವಂತೆ 4ನೇ ಭಾರಿ ಕಡೂರು ಪಟ್ಟಣದಲ್ಲಿ ರಾಜ್ಯ ಮಟ್ಟದ ವಧು ವರರ ಸಮ್ಮೇಳನ ಆಯೋಜಿಸಲಾಗಿದೆ. ಈ ಬಾರಿ ನಿರೀಕ್ಷೆಗೂ ಮೀರಿ ನೂರಾರು ಸಂಖ್ಯೆಯಲ್ಲಿ ವಧು-ವರರು ಮತ್ತು ಪೋಷಕರು ಭಾಗವಹಿಸುವ ಮೂಲಕ ಈ ಸಮ್ಮೇಳನ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ಮತ್ತಿತರ ಕಾರ್ಯಕ್ರಮ ಆಯೋಜಿಲಾಗುವುದು ಎಂದು ಹೇಳಿ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಕಾರ್ಯಕ್ರಮ ಉದ್ಘಾಟನೆ ಬಳಿಕ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಪರಸ್ಪರ ಪರಿಚಯ, ಶಿಕ್ಷಣ, ವೃತ್ತಿ ಮಾಹಿತಿ ಮತ್ತು ಭಾವಚಿತ್ರಗಳ ಪ್ರದರ್ಶನದ ಮೂಲಕ ವಿವರವನ್ನು ಪರಿಶೀಲಿಸಲು ಅನುಕೂಲ ಮಾಡಿಕೊಡಲಾಯಿತು.ಭಾವಸಾರ ವಿಷನ್ನಿನ ಕಡೂರು ಘಟಕದ ಅದ್ಯಕ್ಷ ಸುರೇಶ್ ಚಿಕ್ಕಲ್ ಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾವಸಾರ ವಿಷನ್ನಿನ ರಾಷ್ಟ್ರೀಯ ಸಲಹೆಗಾರ ಗಜೇಂದ್ರನಾಥ್ ಮಾಳೋದೆ, ಭಾವಸಾರ ಸಮಾಜದ ಅಧ್ಯಕ್ಷ ಮೂರ್ತಿರಾವ್ ಭಾಂಗ್ರೆ, ಭಾವಸಾರ ಇಂಡಿಯಾದ ರಾಷ್ಟ್ರೀಯ ನಿರ್ದೇಶಕ ಸುರೇಶ್ ನವಲೆ, ವಿಷನ್ನಿನ 103ರ ಏರಿಯಾ ಗೌರ್ನರ್ ವಿನಯ್ ಕುಮಾರ್ ಡಿ.ಬಿ.ಮಾತನಾಡಿದರು.

ಭಾವಸಾರ ಕ್ಷತ್ರಿಯ ಸಮಾಜದ ಕಾರ್ಯದರ್ಶಿ ಕೆ.ಎಂ. ರವಿಶಂಕರ್, ವಿಷನ್ನಿನ ಸದಸ್ಯರಾದ ಕೆ ಬಿ ಶಿವಕುಮಾರ್,ಕಡೂರು ದೇವೇಂದ್ರ, ಎಂ.ಎನ್. ಪುಂಡಲೀಕರಾವ್, ಕೆ ಎಂ ಸತೀಶ್, ಸ್ವಪ್ನಾ ಕಿರಣ್, ಎಸ್ ಬಿ ಜ್ಯೋತಿ, ದೀಪ ಭಾವಸಾರ ಘಟಕದ ಯುವ ಮಂಡಳಿ ಸದಸ್ಯರಾದ ಕಿರಣ್, ಮನು, ದೀಪಕ್, ಕೆ.ಏನ್. ಮಂಜುನಾಥ್, ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು 21ಕೆಕೆಡಿಯು1.

ಕಡೂರು ಪಟ್ಟಣದ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ನಡೆದ ವಧು ವರರ ರಾಜ್ಯಮಟ್ಟದ ವಧುವರರ ಪರಿಚಯ ಸಮ್ಮೇಳನವನ್ನು ಶಶಿ ಸುರೇಶ್ ನವಲೆ ಉದ್ಘಾಟಿಸಿದರು.

Share this article