ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗಾನಯೋಗಿ ಸಾಂಸ್ಕೃತಿಕ ಸಂಗೀತ ಕಲಾ ಸಂಘ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದ ಸಂಗೀತ ಹಾಗೂ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜ್ಞಾನದ ಪ್ರಸಾರ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಪರಿಪೂರ್ಣ ಕಲಾ ಮಾಧ್ಯಮಕ್ಕೆ ಭಾರತ ವಿಶ್ವಕ್ಕೆ ತವರೂರು ಭರತನಾಟ್ಯ ಕಲೆಯನ್ನು ಹೆಚ್ಚು ಆಸಕ್ತಿಯಿಂದ ಕಲಿಯುವ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು ಬೆಳೆಸುವಲ್ಲಿ ಸಾಂಸ್ಕೃತಿಕ ಸಂಘ, ಸಂಸ್ಥೆಗಳ ಜೊತೆಗೆ ಮಕ್ಕಳ, ಪಾಲಕ, ಪೋಷಕರು, ತರಬೇತಿದಾರರು ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಥೇಶ್ ಕುಮಾರ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಬಹು ಸಂಸ್ಕೃತಿಯ ಪ್ರತೀಕವಾಗಿವೆ, ಮಕ್ಕಳಲ್ಲಿನ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ತಮ್ಮ ಗಾನಯೋಗಿ ಸಾಂಸ್ಕೃತಿಕ ಸಂಗೀತ ಕಲಾ ಸಂಘ(ರಿ) ಸಾಂಸ್ಕೃತಿಕ, ಸಂಗೀತ ಕಲಾ ಸಂಘ ಯಾದಗಿರಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದೆ ಎಂದು ಮಾಹಿತಿ ಒದಗಿಸಿದರು.
ವೇದಿಕೆಯಲ್ಲಿ ಶರಣಪ್ಪ ಹದನೂರ್, ಶಶಿ ಸುಪರ್ ಬಜಾರ್‌ನ ಮಾಲೀಕ ಮಲ್ಲಿಕಾರ್ಜುನ್ ಶಿರಗೋಳ, ಶ್ರೀರಕ್ಷಾ ಕಾಲೇಜಿನ ಕೃಷ್ಣಮೂರ್ತಿ ಕುಲಕರ್ಣಿ, ಯಾದಗಿರಿ ಟೈಮ್ಸ್ ಪತ್ರಿಕೆ ಸಂಪಾದಕ ವೈಜನಾಥ್ ಹಿರೇಮಠ, ಅಂಜಿನೇಯ ಬೆಳಗೇರಿ, ವೀರಣ್ಣ ಸೌಕಾರ ಕುಂಟೆಮರಿ, ಸಂಗೀತ ಶಿಕ್ಷಕರಾದ ಚಂದ್ರಶೇಖರ್ ಗೋಗಿ, ಶರಣಬಸವ ವಠಾರ, ಅಯ್ಯಣಗೌಡ ಆಲೂರು, ಯೋಗ ಶಿಕ್ಷಕರಾದ ಸೋಮನಾಥ ರೆಡ್ಡಿ ಕಣೇಕಲ್ ವೇದಿಕೆಯಲ್ಲಿ ಇದ್ದರು.