ಸಮಸಮಾಜ ನಿರ್ಮಾಣವೇ ನಮ್ಮ ಗುರಿ

KannadaprabhaNewsNetwork |  
Published : Jun 02, 2025, 12:49 AM ISTUpdated : Jun 02, 2025, 12:50 AM IST
01 ಎಚ್‍ಆರ್‍ಆರ್ 01ಹರಿಹರದ ಸಿಪಿಐ ಕಚೇರಿಯ ಕಾಂ, ಎಂ.ಸಿ. ನರಸಿಂಹನ್ ಭವನದಲ್ಲಿ ಸಿಪಿಐ ಮತ್ತು ಎಐಟಿಯುಸಿ  ಹರಿಹರ ತಾಲೂಕು ಸಮಿತಿ ಸಂಯುಕ್ತ ಆಶ್ರಯದಲ್ಲಿ  ನಡೆದ 139 ನೇ ಮೇ ದಿನಾಚರಣೆಯನ್ನು ಅವರಗೆರೆ ಚಂದ್ರು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಮ ಸಮಾಜದ ನಿರ್ಮಾಣ ಮತ್ತು ಕಾರ್ಮಿಕರಲ್ಲಿ ವರ್ಗ ಜಾಗೃತಿ ಮೂಡಿಸುವುದು ನಮ್ಮ ಗುರಿಯಾಗಿದೆ ಎಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಹಾಗೂ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಹೇಳಿದ್ದಾರೆ.

- ಹರಿಹರದಲ್ಲಿ ನಡೆದ ಮೇ ದಿನಾಚರಣೆಯಲ್ಲಿ ಆವರಗೆರೆ ಚಂದ್ರು ಅಭಿಮತ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಮ ಸಮಾಜದ ನಿರ್ಮಾಣ ಮತ್ತು ಕಾರ್ಮಿಕರಲ್ಲಿ ವರ್ಗ ಜಾಗೃತಿ ಮೂಡಿಸುವುದು ನಮ್ಮ ಗುರಿಯಾಗಿದೆ ಎಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಹಾಗೂ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಹೇಳಿದರು.

ನಗರದ ಸಿಪಿಐ ಕಚೇರಿಯ ಕಾಂಮ್ರೆಡ್‌ ಎಂ.ಸಿ. ನರಸಿಂಹನ್ ಭವನದಲ್ಲಿ ಸಿಪಿಐ ಮತ್ತು ಎಐಟಿಯುಸಿಯ ತಾಲೂಕು ಸಮಿತಿ ಆಶ್ರಯದಲ್ಲಿ ಭಾನುವಾರ ನಡೆದ 139ನೇ ಮೇ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರ ಆಳ್ವಿಕೆಯಲ್ಲಿ ಪಡೆದ ಕಾರ್ಮಿಕರ 44 ಕಾನೂನುಗಳನ್ನು ಬಿಜೆಪಿಯ ಕೇಂದ್ರ ಸರ್ಕಾರ ನಾಲ್ಕು ಕೋಡ್‌ಗಳನ್ನಾಗಿ ಬದಲಾಯಿಸಿ, ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದೆ. ಇದನ್ನು ಹಿಮ್ಮೆಟ್ಟಿಸಲು ಜುಲೈ 9ರಂದು ನಡೆಯುವ ಕಾರ್ಮಿಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕೆಂದರು.

ನರೇಗಾ ರಂಗನಾಥ್, ವೀರಣ್ಣ ಅಂಗಡಿ, ಎಐಟಿಯುಸಿ ಮುಖಂಡರಾದ ಚಂದ್ರಪ್ಪ, ಜಾಫರ್ ಸಾಧಿಕ್, ಕೃಷ್ಣಮೂರ್ತಿ ಬಿಲ್ಲವ ಮಾತನಾಡಿದರು. ಹಿರಿಯ ಕಾರ್ಮಿಕ ಮುಖಂಡ ಪರಮೇಶ್ವರಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸುರೇಶ್, ಶೇಖರಪ್ಪ, ಪಂಪಾಪತಿ ಟ್ರಸ್ಟ್‌ ಖಜಾಂಚಿ ಜಿ. ಎಲ್ಲಪ್ಪ, ಸರೋಜಾ ಎಐಟಿಯುಸಿ ಮುಖಂಡರಾದ ಎಚ್.ಸಿ. ಮೈದೂರು, ಬಸಪ್ಪ ರೆಡ್ಡಿ, ಗಂಗಾಧರ ಕೊಟಗಿ, ಪರಮೇಶ್ವರಪ್ಪ ಎಂ.ಎನ್., ಶಿವರಾಜ್, ನಾರಾಯಣ ಜಾಡರ್, ಪ್ರದೀಪ ನಲವಾಗಲು, ಕುಮಾರ ನಾಯಕ ಇತರರು ಉಪಸ್ಥಿತರಿದ್ದರು.

ಸಿಪಿಐ ತಾಲೂಕು ಕಾರ್ಯದರ್ಶಿ ಟಿ.ಎಚ್. ನಾಗರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.

- - -

-01ಎಚ್‍ಆರ್‍ಆರ್01:

ಹರಿಹರ ಸಿಪಿಐ ಕಚೇರಿಯ ಕಾಂಮ್ರೆಡ್‌ ಎಂ.ಸಿ. ನರಸಿಂಹನ್ ಭವನದಲ್ಲಿ ನಡೆದ 139ನೇ ಮೇ ದಿನ ಕಾರ್ಯಕ್ರಮದಲ್ಲಿ ಆವರಗೆರೆ ಚಂದ್ರು ಮಾತನಾಡಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್