ರಾಹುಲ್‌ ಪ್ರಧಾನಿ ಮಾಡುವುದೇ ನಮ್ಮ ಗುರಿ: ಚಲುವರಾಯಸ್ವಾಮಿ

KannadaprabhaNewsNetwork |  
Published : Oct 28, 2026, 01:30 AM IST
27ಕೆಎಂಎನ್‌ಡಿ-8ಮಂಡ್ಯದ ಗಾಂಧಿಭವನದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕುಮಾರ್‌ ಕೊಪ್ಪ ಅವರನ್ನು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಗಣ್ಯರು ಅಭಿನಂದಿಸಿದರು. | Kannada Prabha

ಸಾರಾಂಶ

೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ, ೨೦೨೯ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಅವರನ್ನು ಪ್ರದಾನಮಂತ್ರಿ ಮಾಡುವುದು ನಮ್ಮೆಲ್ಲರ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ. ಪಕ್ಷದ ನಾಯಕರ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅರಿತು ಪಾಲಿಸುವಂತೆ ಸಲಹೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಮ್ಮ ಮುಂದಿರುವ ೨೦೨೯ರ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಅವರನ್ನು ಪ್ರದಾನಮಂತ್ರಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿರುವ ಗಾಂಧಿ ಭವನದಲ್ಲಿ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕುಮಾರ್‌ಕೊಪ್ಪ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ, ೨೦೨೯ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಅವರನ್ನು ಪ್ರದಾನಮಂತ್ರಿ ಮಾಡುವುದು ನಮ್ಮೆಲ್ಲರ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ. ಪಕ್ಷದ ನಾಯಕರ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅರಿತು ಪಾಲಿಸುವಂತೆ ಸಲಹೆ ನೀಡಿದರು.

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ, ಉಪಮುಖ್ಯಮಂತ್ರಿಯಾಗಿ ಡಾ.ಪರಮೇಶ್ವರ್ , ಮಂಡ್ಯದಲ್ಲಿ ಎಸ್ಸಿಎಸ್ಟಿ ಆಯೋಗಕ್ಕೆ ಡಾ.ಎಲ್.ಮೂರ್ತಿ, ಸಣ್ಣ ಕೈಗಾರಿಕೆಗಳ ನಿಗಮಕ್ಕೆ ವಿಜಯಲಕ್ಷ್ಮೀ, ಈಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕುಮಾರ್‌ಕೊಪ್ಪ ಇದ್ದಾರೆ. ಸಾಮಾಜಿಕ ನ್ಯಾಯದಡಿ ಎಲ್ಲವೂ ಸಿಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಶ್ರಮಿಸುವಂತೆ ಕಿವಿಮಾತು ಹೇಳಿದರು.

ಶಾಸಕ ಪಿ.ರವಿಕುಮಾರ್‌ ಮಾತನಾಡಿ, ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ೭ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ. ನಿರೀಕ್ಷೆಯಂತೆ ಪಕ್ಷ ಗೆಲುವು ಸಾಧಿಸಿದರೆ ಕುಮಾರ್ ಕೊಪ್ಪ ಅವರಿಗೆ ನಾವೇ ಬೆಳ್ಳಿಕಿರೀಟ ಹಾಕಿ ಅಭಿನಂದಿಸುತ್ತೇವೆ ಎಂದು ನುಡಿದರು.

ಸಂಘಟನೆಗಳು ಮತ್ತು ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷದ ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ಬಿಟ್ಟು ಫ್ಲೆಕ್ಸ್‌ ಹಾಕಿಸಿಲ್ಲ, ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಾರೆ ಎಂದು ಮೂಗುಮುರಿಯುವ ಮನಸ್ಥಿತಿ ಬೇಡ ಎಂದು ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಮಾರ್ ಕೊಪ್ಪ, ಸಮಾನ ಮನಸ್ಕರ ವೇದಿಕೆಯಿಂದ ನೀಡಿರುವ ಅಭಿನಂದನೆ ಸಾಮಾನ್ಯವಾದುದ್ದಲ್ಲ. ಎಲ್ಲರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಇದು ನನ್ನ ಜವಾಬ್ದಾರಿಯನ್ನು ಗೆಚ್ಚಿಸಿದೆ, ಜಿಲ್ಲಾಧ್ಯಕ್ಷ ಸ್ಥಾನ ನನಗೆ ಕಠಿಣವಲ್ಲ, ನಿಮ್ಮೆಲ್ಲರ ಸಹಕಾರದಿಂದ ಸುಲಭವಾಗಿದೆ, ಹೆಚ್ಚಿನ ಕೆಲಸ ಮಾಡಲು ಸಕ್ರಿಯನಾಗಿದ್ದೇನೆ ಎಂದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಮಾರ್ ಕೊಪ್ಪ ಅವರಿಗೆ ಸಚಿವರು ಶಾಸಕರು ಮತ್ತು ಸಂಘಟಕರು, ಹಿತೈಷಿಗಳು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್‌.ಅಶೋಕ್‌, ನಿವೃತ್ತ ಮುಖ್ಯ ಇಂಜಿನಿಯರ್ ಚಂದ್ರಹಾಸ್, ಕೆ.ಆರ್.ಪೇಟೆ ಪುರಸಭೆ ಮಾಜಿ ಸದಸ್ಯ ಪ್ರೇಮ್‌ಕುಮಾರ್, ನಗರಸಭಾ ಮಾಜಿ ಸದಸ್ಯ ಶ್ರೀಧರ್, ಕಾರ್ಯಕ್ರಮ ಸಂಯೋಜಕ ಚಿಕ್ಕಅರಸಿನಕೆರೆ ಶಿವಲಿಂಗಯ್ಯ, ದೇವರಾಜ್‌ಕೊಪ್ಪ, ಕಾಂಗ್ರೆಸ್ ಮುಖಂಡ ಎಚ್.ಅಪ್ಪಾಜಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನಾಂಬೆಯ ದರ್ಶನಕ್ಕೆ ಸ್ಥಳೀಯರಿಗೆ ಮೊದಲ ಆದ್ಯತೆ ಕೋರಿ ಪ್ರತಿಭಟನೆ
ಕಾನೂನು ಅರಿವು ಪಡೆದು ಹಕ್ಕುಗಳನ್ನು ರಕ್ಷಿಸಿಕೊಳ್ಳಿ: ನ್ಯಾಯಾಧೀಶೆ ಹೇಮಾವತಿ ಕರೆ