ವಿಶ್ವದಲ್ಲಿಯೇ ನಮ್ಮ ಭಾರತದ ಸಂವಿಧಾನ ದೊಡ್ಡದು

KannadaprabhaNewsNetwork |  
Published : Nov 27, 2025, 01:15 AM IST
ವಿಶ್ವದಲ್ಲಿಯೇ ನಮ್ಮ ಭಾರತದ ಸಂವಿಧಾನವೇ ಅತಿದೊಡ್ಡದು | Kannada Prabha

ಸಾರಾಂಶ

ಇಡೀ ವಿಶ್ವದಲ್ಲಿಯೇ ಭಾರತದ ಸಂವಿಧಾನವೇ ಅತಿದೊಡ್ಡದು, ಅತಿರಥ-ಮಹಾರಥರ ಚಿಂತನೆಗಳ ಫಲವಾಗಿ ರೂಪುಗೊಂಡ ಮಹಾಗ್ರಂಥ. ರಾಮಾಯಣ, ಮಹಾಭಾರತಗಳಂತೆ ನಮ್ಮ ಜೀವನಕ್ಕೆ ದಿಕ್ಕು ತೋರುವ ಆತ್ಮಗ್ರಂಥವೇ ನಮ್ಮ ಸಂವಿಧಾನ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಇಡೀ ವಿಶ್ವದಲ್ಲಿಯೇ ಭಾರತದ ಸಂವಿಧಾನವೇ ಅತಿದೊಡ್ಡದು, ಅತಿರಥ-ಮಹಾರಥರ ಚಿಂತನೆಗಳ ಫಲವಾಗಿ ರೂಪುಗೊಂಡ ಮಹಾಗ್ರಂಥ. ರಾಮಾಯಣ, ಮಹಾಭಾರತಗಳಂತೆ ನಮ್ಮ ಜೀವನಕ್ಕೆ ದಿಕ್ಕು ತೋರುವ ಆತ್ಮಗ್ರಂಥವೇ ನಮ್ಮ ಸಂವಿಧಾನ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜು ಅವರಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಮಾತನಾಡಿ, ಭಾರತದ ಸಂವಿಧಾನವು ವಿಶ್ವದ ಅನೇಕ ರಾಷ್ಟ್ರಗಳಿಗೆ ಮಾದರಿಯಾಗಿದೆ. ಬಾಬು ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ, ಡಾ. ಅಂಬೇಡ್ಕರ್ ಅವರು ಶ್ರದ್ಧೆಯಿಂದ ರೂಪಿಸಿದ ಈ ಸಂವಿಧಾನವು ಈ ನಾಡಿನ ಪ್ರಜಾಪ್ರಭುತ್ವದ ಉಸಿರಾಗಿದೆ. ಅದರ ವೈಶಿಷ್ಟ್ಯವಾದ ಇಂದು ಜಗತ್ತು ಗುರುತಿಸುತ್ತಿದೆ ಎಂದು ಹೇಳಿದರು. ಜಾಥಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವಾ ಅನಂತರಾಮು, ಸಮಾಜ ಕಲ್ಯಾಣ ಅಧಿಕಾರಿ ಜಮುನಾ, ಸಾಮಾಜಿಕ ಅರಣ್ಯಾಧಿಕಾರಿ ಶಿಲ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅನಂತರಾಜು, ಬಸವರಾಜು, ಮಧುಸೂದನ್, ಪಪಂ ಆರ್‌ಐ ವೇಣುಗೋಪಾಲ್, ಚಿಕ್ಕಣ್ಣಮುಖಂಡರಾದ ನಾಗರಾಜು, ಶಿವರಾಮಣ್ಣ, ಮಂಜುನಾಥ್, ಪವನ್, ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಗೂ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.ಜಾಥಾದಲ್ಲಿ ಸಂವಿಧಾನದ ಪ್ರಸ್ತಾವನೆ, ಮೂಲ ಹಕ್ಕು-ಕರ್ತವ್ಯಗಳ ಮಹತ್ವ, ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ವಿದ್ಯಾರ್ಥಿಗಳು ವಿವಿಧ ನಾರೆಗಳು ಮತ್ತು ಫ್ಲೆಕ್ಸ್‌ಗಳ ಮೂಲಕ ಜಾಗೃತಿ ಮೂಡಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ