ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿದೆ ಎಂಬುದು ಗೊತ್ತಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Jan 11, 2025, 12:46 AM ISTUpdated : Jan 11, 2025, 12:29 PM IST
18 | Kannada Prabha

ಸಾರಾಂಶ

ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳು ಇದೆ. ಮಹಜರ್ ಮಾಡಿ ತೆಗೆದುಕೊಂಡು ಬರುತ್ತಾರೆ. ಶಸ್ತ್ರಾಸ್ತ್ರ ಎಲ್ಲಿದೆ ಎಂಬುದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

  ಮೈಸೂರು : ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳು ಇದೆ. ಮಹಜರ್ ಮಾಡಿ ತೆಗೆದುಕೊಂಡು ಬರುತ್ತಾರೆ. ಶಸ್ತ್ರಾಸ್ತ್ರ ಎಲ್ಲಿದೆ ಎಂಬುದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಕ್ಸಲರು ಸಿಎಂ ಕಚೇರಿಯಲ್ಲಿ ಶರಣಾಗಿರುವುದಕ್ಕೆ ಬಿಜೆಪಿ ವಿರೋಧಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ನಕ್ಸಲಿಸಂ ನಮ್ಮ ರಾಜ್ಯದಲ್ಲಿ ಇರಬಾರದು ಎಂಬುದು ನಮ್ಮ ಉದ್ದೇಶ. ಯಾವುದೇ ಹೋರಾಟ ಶಾಂತಿಯುತವಾಗಿರಬೇಕು. ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ನಡೆಯಬಾರದು ಎಂಬುದು ನಮ್ಮ ಉದ್ದೇಶ. ಅನ್ಯಾಯ, ಶೋಷಣೆಗಳನ್ನ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಎಂದರು.

ಶೃಂಗೇರಿಯಲ್ಲಿ ಇನ್ನೊಬ್ಬ ನಕ್ಸಲ್ ಇದ್ದಾನೋ ಇಲ್ವೊ ನಮಗೆ ಗೊತ್ತಿಲ್ಲ. ಅವನಿಗೂ ನಾನು ಮುಖ್ಯವಾಹಿನಿಗೆ ಮನವಿ ಮಾಡುತ್ತೇನೆ‌ ಎಂದು ಅವರು ಹೇಳಿದರು.

ರೈತರಪರ ಇಲ್ಲದ ಕೇಂದ್ರ ಸರ್ಕಾರ

ದೆಹಲಿಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ರೈತರ ಪರ ಇಲ್ಲದ ಸರ್ಕಾರ. ರೈತರು ಎಂಎಸ್ ಪಿ ಕಾನೂನು ಮಾಡುವಂತೆ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ವೇಳೆ ನೂರಾರು ಜನರು ಸಾವ್ನಪ್ಪಿದ್ದಾರೆ. ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಮಣಿಯುತ್ತಿಲ್ಲ. ಮಾನವೀಯತೆ ಇಲ್ಲದ ಸರ್ಕಾರ. ಸ್ವಲ್ಪನೂ ಬಗ್ಗದೇ ಇರುವ ಸರ್ಕಾರ ಎಂದು ಕಿಡಿಕಾರಿದರು.

ಅಮಿತ್ ಶಾ ಭೀಮಾ ಸಂಗಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಂಬೇಡ್ಕರ್ ಬಗ್ಗೆ ಯಾವ ರೀತಿ ಗೌರವ ಇಟ್ಟಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಎಲ್ಲರಿಗೂ ಗೊತ್ತಾಗಿದೆ. ಇನ್ನೊಂದು ಕಡೆ ಅಂಬೇಡ್ಕರ್ ಪರವಾಗಿ ಅಭಿಯಾನ ಮಾಡುತ್ತಿದ್ದಾರೆ. ಇದು ಹಾಸ್ಯಸ್ಪದ ಎಂದರು.

ಕಾಂಗ್ರೆಸ್ ಸಂವಿಧಾನ ಬರೆಸಿರುವುದು ಅಂಬೇಡ್ಕರ್ ಕೈಯಲ್ಲಿ. ಸಂವಿಧಾನದ ಗೌರವ ಕೊಡುತ್ತಿರುವುದು ಕಾಂಗ್ರೆಸ್ ಪಕ್ಷ‌. ವಾಜಪೇಯಿ ಕಾಲದಲ್ಲಿ ಸಂವಿಧಾನ ಬದಲಾವಣೆ ಮಾಡಲು ಹೊರಟರು. ಆರ್ ಎಸ್ಎಸ್ ನವರು ಸಂವಿಧಾನ ವಿರೋಧ ಮಾಡಿದ್ದಾರೆ. ನಾವು ಅವರ ರೀತಿ ತೋರಿಸಿಕೊಳ್ಳುವ ಅಗತ್ಯ ಇಲ್ಲ. ನಾವು ಸಂವಿಧಾನ ರಕ್ಷಣೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಅವರ ಜೊತೆ ಮಾತನಾಡಿದ್ದೇನೆ. ಪ್ರತಿ ತಿಂಗಳು 10 ಸಾವಿರ ಬರಲು ಮಾಡುತ್ತಿದ್ದೇವೆ‌. ಪ್ರತಿಭಟನೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ ಎಂದರು.

ಪ್ರಿಯಾಂಕ ಖರ್ಗೆ ಆಪ್ತ ರಾಜು ಕಪನೂರು ಶರಣಾಗತಿ ವಿಚಾರ‌ಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದರು. 

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು