ನಮ್ಮ ಕಲಬುರಗಿ ಬಸ್‌ ಆ್ಯಪ್‌ ಸ್ಥಗಿತರಿಂದ ಸಂಕಷ್ಟ

KannadaprabhaNewsNetwork |  
Published : Aug 27, 2026, 01:30 AM IST
ಫೋಟೋ- ಅರುಣ ಪಾಟೀಲ್‌ ಅಧ್ಯಕ್ಷರು, ಕೆಕೆಆರ್‌ಟಿಸಿ | Kannada Prabha

ಸಾರಾಂಶ

ಕಲಬುರಗಿ ನಗರದ ಜನರ ಸಂಚಾರಕ್ಕೆ ಅನುಕೂಲವಾಗುವಂತೆ 2024ರ ಮೇ 4ರಂದು ಆರಂಭಿಸಲಾಗಿದ್ದ ‘ನಮ್ಮ ಕಲಬುರಗಿ ಬಸ್’ ಆ್ಯಪ್ ಸ್ಥಗಿತಗೊಂಡಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರದ ಜನರ ಸಂಚಾರಕ್ಕೆ ಅನುಕೂಲವಾಗುವಂತೆ 2024ರ ಮೇ 4ರಂದು ಆರಂಭಿಸಲಾಗಿದ್ದ ‘ನಮ್ಮ ಕಲಬುರಗಿ ಬಸ್’ ಆ್ಯಪ್ ಸ್ಥಗಿತಗೊಂಡಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ.ನಮ್ಮ ಕಲಬುರಗಿ ಸಾರಿಗೆ ಆ್ಯಪ್ ಕಾರ್ಯನಿರ್ವಹಿಸುತ್ತಿದ್ದಾಗ ಯಾವ ಬಸ್ ಎಲ್ಲಿದೆ? ನಿಗದಿತ ಸ್ಥಳಕ್ಕೆ ಎಷ್ಟು ಗಂಟೆಗೆ ತಲುಪಲಿದೆ? ಸನಿಹದ ಬಸ್‌ ನಿಲ್ದಾಣಗಳು ಯಾವುದು? ಎಂಬ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಹಾಗೂ ನೌಕರರು ಸಮಯಕ್ಕೆ ಸರಿಯಾಗಿ ಮನೆ ಬಿಟ್ಟು ತೆರಳಲು ಅನುಕೂಲವಾಗಿತ್ತು. ಆದರೆ 2025ರಲ್ಲಿ ಸ್ಥಗಿತಗೊಂಡಿರುವ ಆ್ಯಪ್‌ ಇದುವರೆಗೆ ಮರುಆರಂಭವಾಗಿಲ್ಲ. ಕೆಕೆಆರ್‌ಟಿಸಿಯಿಂದ ಯಾವುದೇ ಸ್ಪಂದನೆಯೂ ಕಾಣುತ್ತಿಲ್ಲ.ಆ್ಯಪ್ ಸ್ಥಗಿತದಿಂದ ಬಸ್‌ಗಳ ಆಗಮನದ ಮಾಹಿತಿ ತಿಳಿಯದೆ ಪ್ರಯಾಣಿಕರು ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುವಂತಾಗಿದೆ. ಇದರಿಂದ ತರಗತಿಗಳಿಗೆ ಹಾಗೂ ಕೆಲಸಕ್ಕೆ ತಡವಾಗುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ. ಆ್ಯಪ್‌ನ್ನು ಆದಷ್ಟು ಬೇಗ ಪುನರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.*ಬಸ್ ನಿಲ್ದಾಣದ ಕೊರತೆ: ನಗರದ ಮುಖ್ಯ ರಸ್ತೆಯ ಜಯದೇವ ಆಸ್ಪತ್ರೆ, ಜಗತ್‌ ವೃತ್ತ, ಜೇವರ್ಗಿ ಕ್ರಾಸ್‌, ಹೀರಾಪರೂ ಕ್ರಾಸ್‌, ಆದರ್ಶ ನಗರ, ಬಸವೇಶ್ವರ ಕಾಲೊನಿ ಸಹಿತ ಹಲವು ಪ್ರದೇಶಗಳಲ್ಲಿ ಸೂಕ್ತ ಬಸ್ ನಿಲ್ದಾಣಗಳಿಲ್ಲ. ಮಳೆ ಬಂದಾಗ ಪ್ರಯಾಣಿಕರು ನಿಲ್ಲಲು ಸ್ಥಳವಿಲ್ಲದೆ ಪರದಾಡುವಂತಾಗಿದೆ. ಅಗತ್ಯವಿರುವ ಕಡೆ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.*ಐಐಐಟಿ ತಾಂತ್ರಿಕ ನೆರವು: ಐಐಐಟಿಯಿಂದ ಯೋಜನೆ ಪಡೆದು ತಾಂತ್ರಿಕ ಬೆಂಬಲವನ್ನೂ ಅವರಿಂದಲೇ ಪಡೆದು ನಾವು ನಮ್ಮ ಕಲಬುರಗಿ ಸಾರಿಗೆ ಆ್ಯಪ್‌ ನಿರ್ವಹಿಸುತ್ತಿದ್ದೇವೆ. ಮಾಸಿಕ 50 ಸಾವಿರ ರು. ನಂತೆ ವಾರ್ಷಿಕ 6 ಲಕ್ಷ ರು. ಅವರಿಗೆ ನಿರ್ವಹಣೆ ವೆಚ್ಚ ಭರಿಸುತ್ತಿದ್ದೇವು. ಈಚೆಗೆ ಅವರು ತಮ್ಮ ತಾಂತ್ರಿಕ ಬೆಂಬಲ, ನಿರ್ವಹಣೆ ಹಿಂದಕ್ಕೆ ಪಡೆದಿದ್ದಾರೆ. ಅಂದಿನಿಂದ ಈ ಸೇವೆ ಸ್ಥಗಿತಗೊಂಡಿದೆ.

ಕೆಕೆಆರ್‌ಟಿಸಿಯೇ ತನ್ನದೇ ಆದಂತಹ ಆಂಡ್ರಾಯ್ಡ್‌ ವ್ಯವಸ್ಥೆಯ ವೆಹಿಕಲ್‌ ಟ್ರಾಕಿಂಗ್‌ ಸಿಸ್ಟಂ ಅಭಿವೃದ್ಧಿಗೂ ಯತ್ನಿಸುತ್ತಿದೆಯಾದರೂ ಅದಿನ್ನು ಪೂರ್ಣ ಪ್ರಮಾಣದಲ್ಲಿ ಕೈಗೂಡಿಲ್ಲ. ಹೀಗಾಗಿ ನಮ್ಮ ಕಲಬುರಗಿ ಸಾರಿಗೆ ಇತ್ತ ಕೆಕೆಆರ್‌ಟಿಸಿ ತಾಂತ್ರಿಕ ಬೆಂಲವಿಲ್ಲದೆ, ಐಐಐಟಿ ಬೆಂಬಲವೂ ಇಲ್ಲದೆ ನಿಂತು ಹೋಗಿದ್ದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳ ಓಡಾಟದ ಮಾಹಿತಿ ದೊರಕದೆ ಪ್ರಯಾಣಿಕರು, ಬಸ್‌ ಬಳಕೆದಾರರು ಕಂಗಾಲಾಗುವಂತಾಗಿದೆ.ಆ್ಯಪ್ ಕಾರ್ಯನಿರ್ವಹಿಸುತ್ತಿದ್ದಾಗ ಕಾಲೇಜಿಗೆ ಹೋಗುವ ಮೊದಲು ಬಸ್ ಎಲ್ಲಿದೆ ಎಂದು ನೋಡಿಕೊಂಡು ಮನೆಯಿಂದ ಹೊರಡುತ್ತಿದ್ದೆ. ಈಗ ಗಂಟೆಗಟ್ಟಲೆ ಬಸ್‌ಗಾಗಿ ಕಾಯಬೇಕಾಗಿದೆ. ಬೇರೆ ಹಿಲ್ಸ್ ಸಮೀಪವೂ ಬಸ್ ನಿಲ್ದಾಣವಿಲ್ಲ. ಮಳೆ ಬಂದಾಗ ನಾವು ಎಲ್ಲಿ ನಿಲ್ಲಬೇಕು ಎಂಬುದೇ ತಿಳಿಯುವುದಿಲ್ಲ. ಆ್ಯಪ್‌ ಅನ್ನು ಶೀಘ್ರ ಆರಂಭಿಸುವುದರ ಜತೆಗೆ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ವಿದ್ಯಾರ್ಥಿನಿ ಈಶ್ವರಿ ಹೇಳಿದರು.ನಮ್ಮ ಕಲಬುರಗಿ ಸಾರಿಗೆ ಆ್ಯಪ್‌ ಸ್ಥಗಿತಗೊಂಡಿದೆ. ಯಾಕೆ ಸ್ಥಗಿತವಾಯ್ತು, ಏನೆಲ್ಲಾ ಕಾರಣಗಳಿವೆ ಎಂಬುದರ ಬಗ್ಗೆ ನಾನು ಶೀಘ್ರವೇ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದು ಮಾಹಿತಿ ಪಡೆಯುವೆ. ಅದು ಪುನಾರಂಭಕ್ಕೆ ಕ್ರಮ ಕೈಗೊಳ್ಳುವೆ. ಈ ಟ್ರಾಕಿಂಗ್‌ ಸಿಸ್ಟಂ ಸದ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಮುಂದಾಗುವೆ ಎಂದು ಕಲಬುರಗಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್‌ ಪಾಟೀಲ್‌ ಹೇಳಿದರು.ಕೆಕೆಆರ್‌ಟಿಸಿ ನಮ್ಮ ಸಾರಿಗೆ ಆ್ಯಪ್‌ ಐಐಐಟಿ ತಾಂತ್ರಿಕ ನೆರವಿನಿಂದ ಸಿದ್ಧಪಡಿಸಿ ಬಳಕೆಗೆ ತರಲಾಗಿತ್ತು. ಅವರು ನಮಗೆ ತಾಂತ್ರಿಕ ನೆರವು ನೀಡುವುದನ್ನು ನಿಲ್ಲಿಸಿದ್ದರಿಂದ ಈ ಸೇವೆ ಸ್ಥಗಿತವಾಗಿದೆ. ನಾವೇ ಆಂಡಾಯ್ಡ್‌ ಸಿಸ್ಟಂ ಅಭಿವದ್ಧಿಪಡಿಸುವ ಯತ್ನದಲ್ಲಿದ್ದೇವೆ. ಕೆಕೆಆರ್‌ಟಿಸಿ ವೆಹಿಕಲ್‌ ಟ್ರಾಕಿಂಯ್‌ ಸಿಸ್ಟಂ ಅಭಿವೃದ್ಧಿಯಾಗೋವರೆಗೂ ಮತ್ತೆ ನಾವು ಐಐಐಟಿಯೊಂದಿಗೆ ಪುನಃ ಸಂಪರ್ಕ ಬೆಳೆಸಿ ಸದರಿ ಬಸ್‌ ಟ್ರಾಕಿಂಗ್‌ ಸಿಸ್ಟಂ ಆ್ಯಪ್‌ ಪುನಃ ಸೇವೆಗೆ ದೊರಕುವಂತೆ ಮಾಡುವ ಯತ್ನದಲ್ಲಿದ್ದೇವೆ. ಇದಕ್ಕಾಗಿ ಆ. 27 ರಂದು ಸಂಜೆ ಮತ್ತೆ ಐಐಐಟಿ ಸಂಸ್ಥೆಯೊಂದಿಗೆ ವಿಡಿಯೋ ಕಾನ್ಪರೆನ್ಸ್‌ ಇಟ್ಟುಕೊಂಡಿದ್ದೇವೆ. ಕೆಕೆಆರ್‌ಟಿಸಿ ಕಲಬುರಗಿ ಕೇಂದ್ರ ಕಚೇರಿ ಚೀಫ್‌ ಸಿಸ್ಟಂ ಮ್ಯಾನೇಜರ್‌ ಸಂತೋಷ ಗೋಗೇರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು