ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಭಾನುವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನಮಗೆ ನಮ್ಮ ಜೀವನದ ಮೇಲೆ ನಂಬಿಕೆ ಬೇಕು, ಇನ್ನಿತರರು ನಮ್ಮಂತೆ ಜೀವನ ನಡೆಸುತ್ತಾರೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಇರಬೇಕು ಎಂದರು.ಪುತ್ತೂರು ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಒಳ್ಳೆಯ ಕೆಲಸ ಮಾಡುವವರನ್ನು ದೇವರು ಅನುಗ್ರಹಿಸುತ್ತಾನೆ ಎಂದರು.
ಕೊಳ್ತಿಗೆ ಸಿ.ಎ. ಬ್ಯಾಂಕ್ ಅಧ್ಯಕ್ಷ ವೆಂಕಟ್ರಮಣ ಕೆ ಎಸ್, ನಿವೃತ್ತ ಉಪನ್ಯಾಸಕ ನಾರಾಯಣ ರೈ ಕುಕ್ಕುವಳ್ಳಿ, ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಮಾತನಾಡಿದರು.
ಮಂಜುಳಾ ಕಿಶೋರ್ ಕುಮಾರ್ ರೈ ನಳೀಲು ದಂಪತಿ ಸ್ವಾಮೀಜಿಯನ್ನು ಗೌರವಿಸಿದರು. ಸುಬ್ರಾಯ ಗೌಡ ಪಾಲ್ತಾಡಿ, ವಸಂತ ರೈ ಮಾಡಾವು ಅತಿಥಿಗಳನ್ನು ಗೌರವಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು. ಶಶಿಕುಮಾರ್ ಬಿ ಎನ್ ವಂದಿಸಿದರು. ಕೆಯ್ಯೂರು ಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ ಎಸ್ ನಿರೂಪಿಸಿದರು.ಗಣೇಶ್ ಕೆ.ವಿ. ,ಚಂದ್ರಾವತಿ ರೈ, ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗ ಸಂಚಾಲಕಿ ಡಾ.ವೀಣಾ ಸಂತೋಷ್ ರೈ , ಸಹ ಸಂಚಾಲಕಿ ನಿರೀಕ್ಷಾ ಜೆ.ಶೆಟ್ಟಿ ಸಹಕರಿಸಿದರು.
ದೇವಳದಲ್ಲಿ ಇಂದು: ಮಂಗಳವಾರ ಬೆಳಗ್ಗೆ ಉಷಃಪೂಜೆ, ಅಂಕುರ ಪೂಜೆ, ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಸೃಷ್ಟಿ ತತ್ವ ಹೋಮ, ತತ್ವಕಲಶಪೂಜೆ, ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಭಜನೆ, ಮಧ್ಯಾಹ್ನ ಮಹಾಪೂಜೆ ,ಅನ್ನ ಸಂತರ್ಪಣೆ ನಡೆಯಲಿದೆ.ಸಂಜೆ ದೀಪಾರಾಧನೆ, ತ್ರಿಕಾಲ ಪೂಜೆ, ಮಹಾಪೂಜೆ , ದೈವಸ್ಥಾನದಲ್ಲಿ ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು.ಉದ್ಯಮಿ ಗಿರಿಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು.