ಸಣಬ ಗ್ರಾಮದಲ್ಲಿ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮ

KannadaprabhaNewsNetwork |  
Published : Aug 22, 2026, 01:30 AM IST
21ಕೆಎಂಎನ್ ಡಿ17 | Kannada Prabha

ಸಾರಾಂಶ

ಚೋಳರ ಕಾಲದ ಶಾಸನಗಳು ಹಾಗೂ ನೂರು ವರ್ಷಗಳನ್ನು ಪೂರೈಸಿರುವ ಗ್ರಾಮದ ಸರ್ಕಾರಿ ಶಾಲೆ, ಇಲ್ಲಿ ಬೆಳೆಯುತ್ತಿದ್ದ ‘ರಾಜ್ ಈರುಳ್ಳಿ’ ಮೈಸೂರಿನಲ್ಲಿ ಸಣಬದ ಈರುಳ್ಳಿ ಎಂದೇ ಇದು ಅತ್ಯಂತ ಪ್ರಸಿದ್ಧಿ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.

ಪಾಂಡವಪುರ:

ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯುಳ್ಳ ಸಣಬ ಗ್ರಾಮದಲ್ಲಿ ಇತ್ತೀಚೆಗೆ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮ ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ನಡೆಯಿತು.

ಪುಟ್ಟಣ್ಣಯ್ಯ ಫೌಂಡೇಶನ್ ಬಂಧುಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು ಹಾಗೂ ‘ನಮ್ಮ ಊರು ನಮ್ಮ ಹೆಮ್ಮೆ ಸಮಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮದ ಇತಿಹಾಸ, ವಿಶೇಷತೆ ಹಾಗೂ ಪ್ರಮುಖ ಬೇಡಿಕೆಗಳ ಸಮಗ್ರ ವರದಿ ಸಂಗ್ರಹಿಸಲಾಯಿತು.

800 ವರ್ಷಗಳ ಭವ್ಯ ಇತಿಹಾಸ ಮತ್ತು ಹೆಸರಿನ ಹಿನ್ನೆಲೆ, 700 ವರ್ಷಗಳ ಹಳೆಯದಾದ ಐತಿಹಾಸಿಕ ಈಶ್ವರನ ದೇಗುಲ, ಅತಿ ಹೆಚ್ಚು ಸೆಣಬು ಬೆಳೆಯುತ್ತಿದ್ದ ಕಾರಣ ಮಹಾರಾಜರು ಈ ಊರಿಗೆ ‘ಸೆಣಬು’ ಎಂದು ನಾಮಕರಣ ಮಾಡಿರುವುದು, ಮೈಸೂರು ಮಹಾರಾಜರ ಕಾಲದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ನ್ಯಾಯ ಪಂಚಾಯಿತಿಗಳಿದ್ದರೂ ಸಣಬದ ನ್ಯಾಯ ಸ್ಥಾನದಲ್ಲೇ ತೀರ್ಮಾನಿಸುವಂತೆ ತಾಮ್ರದ ಶಾಸನದಲ್ಲಿ ಬರೆದುಕೊಟ್ಟ ಐತಿಹಾಸಿಕ ವಿಶೇಷತೆ ಬಗ್ಗೆ ಚರ್ಚಿಸಲಾಯಿತು.

ಚೋಳರ ಕಾಲದ ಶಾಸನಗಳು ಹಾಗೂ ನೂರು ವರ್ಷಗಳನ್ನು ಪೂರೈಸಿರುವ ಗ್ರಾಮದ ಸರ್ಕಾರಿ ಶಾಲೆ, ಇಲ್ಲಿ ಬೆಳೆಯುತ್ತಿದ್ದ ‘ರಾಜ್ ಈರುಳ್ಳಿ’ ಮೈಸೂರಿನಲ್ಲಿ ಸಣಬದ ಈರುಳ್ಳಿ ಎಂದೇ ಇದು ಅತ್ಯಂತ ಪ್ರಸಿದ್ಧಿ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಸ್ಥಳೀಯರು, ನಾವು ಭತ್ತ, ಕಬ್ಬು ಮತ್ತು ರಾಜ್ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತೇವೆ. ಈ ಹಿಂದೆ ಕೊಟ್ಟಿಗೆ ಗೊಬ್ಬರ ಹಾಕಿ ವ್ಯವಸಾಯ ಮಾಡುತ್ತಿದ್ದೆವು. ಈಗ ರಾಸಾಯನಿಕ ಬಳಸುತ್ತಿರುವುದರಿಂದ ಮಣ್ಣು ಹಾಳಾಗಿದೆ. ನಾವು ಕೃಷಿಯಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಳ್ಳಲು ಬಯಸುತ್ತೇವೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದರು.

ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾದ ಬಸ್ ನಿಲ್ದಾಣ, ವಾಹನಗಳ ವೇಗ ಮಿತಿ ಗಾಗಿ ಬೋರ್ಡ್ ಅಳವಡಿಕೆ, ಕೆ.ಪಿ.ಶಾಲೆ ಅಥವಾ ಮಾದರಿ ಶಾಲೆ ಮಂಜೂರು, ಅರ್ಧಕ್ಕೆ ನಿಂತ ಸಮುದಾಯ ಭವನ ಪೂರ್ಣ, ಹೊಸದಾಗಿ ಪಂಚಾಯಿ ಕಚೇರಿ ನಿರ್ಮಾಣ, ಅಂಚೆ ಕಚೇರಿ, ಗ್ರಂಥಾಲಯಕ್ಕೆ ಕಟ್ಟಡ ನೀಡುವುದು, ಮುಖ್ಯ ರಸ್ತೆ ಅಭಿವೃದ್ಧಿ, ಸಮಿತಿ ರಚನೆ ಸೇರಿದಂತೆ ಗ್ರಾಮದ ಅಭಿವೃದ್ಧಿಗಾಗಿ ತುರ್ತು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ಈ ವೇಳೆ ಸಮಿತಿ ಸದಸ್ಯರಾದ ಪ್ರಸನ್ನ, ಬುಂಡೇಗೌಡ, ವರುಣ್, ಕುಮಾರ್ ಎಸ್.ಬಿ., ಎಸ್.ಕೆ.ಯೋಗಣ್ಣ, ಎಸ್.ಬಿ.ಬೆಟ್ಟೇಗೌಡ, ಬೋರೇಗೌಡ, ಸುಬ್ರಹ್ಮಣ್ಯ, ಚಂದ್ರಪ್ಪ, ಬೋರೇಗೌಡ, ಲೋಕೇಶ್, ಯೋಗನರಸಿಂಹೇಗೌಡ, ಶ್ರೀಕಂಠೇಗೌಡ, ಪುಷ್ಪ ಬೆಟ್ಟೇಗೌಡ, ಮಧು ಕುಮಾರಸ್ವಾಮಿ, ಯೋಗೇಶ್, ಎಂ.ಪಿ.ಸ್ವರೂಪ, ಯಶೋಧ ಪ್ರಸನ್ನ, ಕುಮಾರ್, ಕೃಷ್ಣೇಗೌಡ, ಕುಮಾರಸ್ವಾಮಿ, ಇಂದ್ರ, ಮಹೇಶ್, ಮಹೇಶ್, ವಿಷಕಂಠಪ್ಪ, ಮಂಜುನಾಥ್, ಪುಟ್ಟಣ್ಣಯ್ಯ ಫೌಂಡೇಶನ್ ಸಿಇಒ ಎಚ್.ಎನ್.ರಣಜಿತ್ , ಬಂಧುಗಳಾದ ಗಿರೀಶ್ ಮೇಲುಕೋಟೆ, ರಾ.ಸ.ಹನುಮಂತೇಗೌಡ, ಹರೀಶ್ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂಟೇಸ್ವಾಮಿ ಕ್ಷೇತ್ರದ ವರಮಹಾಲಕ್ಷ್ಮಿ ಹಬ್ಬಕ್ಕೆ ಧನ ಸಹಾಯ
ನರ್ತಕಿಯರ ಮೇಕಪ್‌ ಕೊಠಡಿಯಾದ ಸಾರ್ವಜನಿಕ ಆಸ್ಪತ್ರೆ..!