ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಲಕ್ಷ್ಮೀಪುರಂನ ಮಾಧವ ಕೃಪಾ ಗಣೇಶೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಮೊದಲು ಅನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು. ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿ ಸದಾ ಶ್ರೇಷ್ಠ. ಇದನ್ನು ನಮ್ಮ ಯುವಜನತೆ ಅನುಸರಿಸಿದರೆ ಮಾತ್ರ ಇವುಗಳು ಉಳಿಯಬಲ್ಲವು. ಈ ನಿಟ್ಟಿನಲ್ಲಿ ಗಣೇಶೋತ್ಸವ ಆಚರಣೆ ಅತ್ಯಂತ ಮಹತ್ವದ್ದು. ದೇಶ ಸೇವೆ, ಧರ್ಮ ರಕ್ಷಣೆ ನಮ್ಮ ಕರ್ತವ್ಯ. ಇದು ನಮ್ಮ ಬದುಕಿನ ಭಾಗವಾಗಬೇಕು ಎಂದು ಹೇಳಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಗಣೇಶೋತ್ಸವ ಕೇವಲ ಒಂದು ಉತ್ಸವ ಅಲ್ಲ, ಬದಲಿಗೆ ನಮ್ಮ ಸಮಾಜ ಸಂಘಟನೆಗೊಂದು ಮಹತ್ವದ ಸಂದರ್ಭ ಎಂದರು.ಉದ್ಯಮಿ ಜಗನ್ನಾಥ ಶೆಣೈ ಮಾತನಾಡಿ, ಗಣೇಶೋತ್ಸವ ನಮ್ಮ ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಬಣ್ಣಿಸಿದರು.
ಮಾಧವಕೃಪಾ ಗಣೇಶೋತ್ಸವದಲ್ಲಿ ಶ್ರೀಲಲಿತಾ ಉಳಿಯಾರು ಅವರ ಹರಿಕಥೆ ಇಂದು
ನಗರದ ಕೃಷ್ಣಮೂರ್ತಿಪುರಂನ ಮಾಧವಕೃಪಾ ಗಣೇಶೋತ್ಸವದ 38ನೇ ವರ್ಷದ ಅಂಗವಾಗಿ ಆ.29ರ ಸಂಜೆ 6.30ಕ್ಕೆ ಹರಿಕಥಾ ಕಾರ್ಯಕ್ರಮ ಏರ್ಪಡಿಸಿದೆ.
ಇವರಿಗೆ ಸಂಗತಿಯಾಗಿ ಈಕೆಯ ತಮ್ಮ ಶ್ರಿಹರಿ ಆಚಾರ್ಯ ಉಳಿಯಾರು ಕೀಬೋರ್ಡ್‌ನಲ್ಲಿ ಹಾಗೂ ವಿಡ್. ಶಿವಕುಮಾರ್, ತಬಲಾ ವಾದನದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಘ್ನೇಶ್ವರನ ಅನುಗ್ರಹ ಪಡೆಯುವಂತೆ ಆಯೋಜಕರು ಹೃತ್ಪೂರ್ವಕ ಆಹ್ವಾನಿಸಿದ್ದಾರೆ. ಕಾರ್ಯಕ್ರಮಗಳಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ. 8880083388, 9741316555 ಸಂಪರ್ಕಿಸುವುದು.