ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಆರ್‌ಎಸ್‌ಎಸ್ ಶತಮಾನ ಕಂಡ ಹಿನ್ನೆಲೆ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಏರ್ಪಡಿಸಿದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಇಡೀ ವಿಶ್ವದಲ್ಲಿ ಯಾವುದೇ ದೇಶದ ಮೇಲೆ ದಾಳಿ ಮಾಡದೇ,ಎಲ್ಲಾ ದೇಶಗಳ ಪ್ರೀತಿಗಳಿಸಿದ ದೇಶ ಯಾವುದಾದರೂ ಇದ್ದರೆ ಅದು ನಮ್ಮ ಭಾರತ ಮಾತ್ರ ಹಾಗಾಗಿ ಭಾರತ ಪ್ರಾಚೀನ ಕಾಲದಿಂದ ಇಂದಿಗೂ ವಿಶ್ವಗುರುವಾಗಿ ಜಗತ್ತಿನ ಎದುರು ನಿಂತಿದೆ, ಇಂತಹ ಸನಾತನ ರಾಷ್ಟ್ರದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರೇ ಸರಿ ಎಂದರು.ಹಿಂದೂಗಳು ನಂಬಿರುವ ಹಾಗೂ ಆರ್‌ಎಸ್‌ಎಸ್ ನಂಬಿರುವ ಹಿಂದುತ್ವ ಎರಡು ಒಂದೇ, ಅದೊಂದು ನಮ್ಮ ಜೀವನ ಪದ್ದತಿ ಅದನ್ನು ನಾವು ನಂಬಿದ್ದೇವೆ,ಭಾರತದ ಎಲ್ಲರೂ ನಂಬಿದ್ದಾರೆ,ಅದರೆ ಕೆಲವು ಡೋಂಗಿ ಜಾತ್ಯಾತೀತವಾದಿಗಳು ಆರ್‌ಎಸ್‌ಎಸ್ ಹಿಂದುತ್ವದಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಬುರುಡೆ ಹೊಡೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಶ್ರಯ ಪಡೆದು ಬಂದ ಎಲ್ಲರನ್ನು ಭಾರತ ಅವರಿಗೆ ರಕ್ಷಣೆ ನೀಡಿ ಅವರಿಗೆ ಆಶ್ರಯ ನೀಡಿದೆ, ಯಾರನ್ನು ಹೊರ ನೂಕಿಲ್ಲ, ನಮ್ಮ ವಿರೋಧ ಇರುವುದು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಇಲ್ಲಿನ ಎಲ್ಲವನ್ನು ಪಡೆದು ಬೇರೆ ದೇಶಕ್ಕೆ ನಿಷ್ಟೇ ತೋರಿಸುವವರಿಗೆ ನಮ್ಮ ವಿರೋಧ ಇದೆಯೇ ಹೊರತು ನಮ್ಮ ಭಾರತ ದೇಶವನ್ನು ಪ್ರೀತಿಸುವ ಎಲ್ಲರನ್ನೂ ನಾವು ಗೌರವಿಸುತ್ತೇವೆ ಎಂದರು.
ಬೆನಕನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಉಷಾ ಸಂತೋಷ್,ವೀಣಾ ಬಸವನಗೌಡ, ಬಸವನಗೌಡ,ಗ್ರಾ.ಪಂ.ಸದಸ್ಯ ಮಹೇಂದ್ರಗೌಡ.ಮಾಜಿ ಸೈನಿಕ ಸಿದ್ದೇಶ್,ಮಲ್ಲೇಶ್,ಲಿಂಗರಾಜು,ಸುರೇಶ್,ಸಿದ್ದೇಶ್, ಬಿರಗೊಂಡನಹಳ್ಳಿ ಬಸವರಾಜು,ಕೇಶವ್,ಗಿರೀಶ್,ಬೆನಕೇಶ್,ಮಧು,ವಿಜಯ್,ಗಣೇಶ್,ಅರುಣ್ ಇತರರು ಇದ್ದರು.