ಶ್ರೀಸಾಮಾನ್ಯರ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ: ಶಾಸಕ ಚಿದಾನಂದ ಎಂ.ಗೌಡ

KannadaprabhaNewsNetwork |  
Published : Nov 06, 2026, 01:15 AM IST
ಮಧುಗಿರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮೇತ್ೃತ್ವದಲ್ಲಿ ಮಧುಗಿರಿಯಲ್ಲಿ ಪ್ರತಿಭಟನೆ  ನಡೆಸಿದರು.  | Kannada Prabha

ಸಾರಾಂಶ

ಈ ರಾಜ್ಯ ಕಾಂಗ್ರೆಸ್ ಸರ್ಕಾರದ ಹುಚ್ಚು ದೊರೆ ರಾಹುಲ್ ಗಾಂಧಿ. ಇವರು ಒಮ್ಮೆ ಇವಿಎಂ ಬೇಕು ಅಂತಾರೆ, ಒಮ್ಮೆ ಬ್ಯಾಲೆಟ್‌ ಬೇಕು ಅಂತಾರೆ, ಈಗ ಬ್ಯಾಲೆಟ್ ಪೇಪ‌ರ್ ನಲ್ಲೇ ಚುನಾವಣೆ ನಡೆದು ಕಾಂಗ್ರೆಸ್‌ ಶೂನ್ಯ ಸಂಪಾದಿಸಿದ್ದು ಜನ ಬೆಂಬಲಿಸಿಲ್ಲ. ಎಸ್ಐಆರ್‌ನಲ್ಲಿ 1 ಕೋಟಿ ಮತಗಳು ಎಲ್ಲೂ ಹೋಗಿಲ್ಲ.

ಕನ್ನಡಪ್ರಭವಾರ್ತೆ, ಮಧುಗಿರಿ

ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಜನವಿರೋಧಿ ನೀತಿಯಿಂದಾಗಿ ಬಡವರು, ಮಧ್ಯಮ ವರ್ಗದ ಜನರು ಬದುಕಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ಈ ಜನವಿರೋಧಿ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಜನರು ಸಿಡಿದು ಇದನ್ನು ಬೇರು ಸಮೇತ ತೊಲಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಒತ್ತಾಯಿಸಿದರು.

ಗುರುವಾರ ಭಾರತೀಯ ಜನತಾ ಪಾರ್ಟಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಿಂದ ಹಮ್ಮಿಕೊಂಡಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಮತ್ತು ಸರ್ಕಾರದ ಪಕ್ಷದ ರಾಜೀನಾಮೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ತುಘಲಕ್‌ ನೀತಿ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಶ್ರೀಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದು, ಈಗ 8 ರು. ಹಾಲಿನ ಬೆಲೆ ಏರಿಸಿ ರೈತರಿಗೆ 7 ರು. ನೀಡುವುದಾಗಿ ತಿಳಿಸಿ ಹಿಂಬಾಗಿಲ ಮೂಲಕ 16 ರು. ಏರಿಸಿ ಜನರಿಂದ ಲೂಟಿ ಮಾಡುತ್ತಿದ್ದಾರೆ. ಬಸ್ಸುಗಳ ಟಿಕೆಟ್ ದರ ಶೇ.40 ರಷ್ಟು ಏರಿಸಿದ್ದು ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣಕ್ಕೆ ಹೋಗಲು 480 ರು. ಕೊಡಬೇಕಾಗುತ್ತದೆ. ರೈತರ ಕಬ್ಬಿಗೆ ಬೆಂಬಲ ಬೆಲೆ ನೀಡಲು ಹಾಗೂ ರೈತರಿಗೆ ಬರ ಪರಿಹಾರ ನೀಡಲು ಸರ್ಕಾರಕ್ಕೆ ಯೋಗ್ಯತೆಯಿಲ್ಲದೆ ಕಾಲಹರಣ ಮಾಡುತ್ತಿದ್ದು, ಜನರೊಂದಿಗೆ ಬಿಜೆಪಿ-ಜೆಡಿಎಸ್ ನಿಲ್ಲಲಿದ್ದು ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಬೇಕಿದೆ ಎಂದರು.

ಈ ರಾಜ್ಯ ಕಾಂಗ್ರೆಸ್ ಸರ್ಕಾರದ ಹುಚ್ಚು ದೊರೆ ರಾಹುಲ್ ಗಾಂಧಿ. ಇವರು ಒಮ್ಮೆ ಇವಿಎಂ ಬೇಕು ಅಂತಾರೆ, ಒಮ್ಮೆ ಬ್ಯಾಲೆಟ್‌ ಬೇಕು ಅಂತಾರೆ, ಈಗ ಬ್ಯಾಲೆಟ್ ಪೇಪ‌ರ್ ನಲ್ಲೇ ಚುನಾವಣೆ ನಡೆದು ಕಾಂಗ್ರೆಸ್‌ ಶೂನ್ಯ ಸಂಪಾದಿಸಿದ್ದು ಜನ ಬೆಂಬಲಿಸಿಲ್ಲ. ಎಸ್ಐಆರ್‌ನಲ್ಲಿ 1 ಕೋಟಿ ಮತಗಳು ಎಲ್ಲೂ ಹೋಗಿಲ್ಲ.

ಮೃತಪಟ್ಟವರು, ಎರಡೂ ಕಡೆ ಇರುವವರ ಮತಗಳನ್ನು ತಗೆಯಲಾಗಿದೆ. ಆದರೆ ಕಾಂಗ್ರೆಸ್ ನವರಿಗೆ ಕಳ್ಳ ಓಟುಗಳು ಕಾಣೆಯಾಗಿದ್ದು ಆತಂಕವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಉಪವಿಭಾಗದ ಮಂಡಲಾಧ್ಯಕ್ಷರಾದ ಹನುಮಂತರೆಡ್ಡಿ, ರುದ್ರೇಶ್, ಪ್ರಧಾನ ಕಾರ್ಯದರ್ಶಿಗಳಾದ ಎಂಜಲಗೆರೆ ಮೂರ್ತಿ, ಪಾವಗಡ ರವಿ,

ಎಸ್ಸಿ ಮೋರ್ಚಾ ಅಧ್ಯಕ್ಷ ರವಿ, ಎಸ್ಟಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ಮಹಿಳಾಧ್ಯಕ್ಷೆ ರತ್ನಮ್ಮ, ಲತಾ ಪ್ರದೀಪ್, ಯುವ ಮೋರ್ಚಾ ಅಧ್ಯಕ್ಷ ಅರುಣ್, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್, ರಮೇಶ್, ಜಿಲ್ಲಾ ಕಾರ್ಯದರ್ಶಿ ಸುರೇಶ್, ಮುಖಂಡರಾದ ಚೇತನ್ ರವಿಕೀರ್ತಿ, ಕೃಷ್ಣಮೂರ್ತಿ, ಅಶ್ವತ್ಥರೆಡ್ಡಿ, ಗಂಗಾಧ‌ರ್, ಹಾಗೂ ಇತರರು ಜೊತೆಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ