ಕನ್ನಡಪ್ರಭ ವಾರ್ತೆ ಲೋಕಾಪುರ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಾಗಲಕೋಟೆ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ತೇಲಿ ಮಾತನಾಡಿ, ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಹಾಗೂ ರೈತ ಮುಖಂಡರನ್ನು ಬಂಧಿಸಿರುವುದು ಖಂಡನೀಯ. ಬಾಗಲಕೋಟೆ ಭಾಗದಿಂದ ತೆರಳುತ್ತಿದ್ದ ರೈತರನ್ನು ಸಹ ಯರಗಟ್ಟಿಯಲ್ಲಿ ಪೊಲೀಸರು ತಡೆದು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ರೈತ ಚಳವಳಿ ಹತ್ತಿಕ್ಕಲು ರಾಜ್ಯ ಸರ್ಕಾರ, ಕಾರ್ಖಾನೆ ಮಾಲೀಕರು, ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನೂರಾರು ರೈತರು ರಸ್ತೆಯಲ್ಲಿ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ರಸ್ತೆ ತಡೆ ನಡೆಸಿದ್ದರಿಂದ ಮುಖ್ಯ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಲಾರಿಗಳು, ಬಸ್‌ಗಳು ಹಾಗೂ ಇತರೆ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರೈತ ಮುಖಂಡರ ಜೊತೆ ಮಾತುಕತೆ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗೋವಿಂದಪ್ಪ ನಾಯಿಕ, ರಾಮಣ್ಣ ಮಾಳಿ, ಬಾಗಲಕೋಟೆ ಜಿಲ್ಲಾ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ, ಮಲ್ಲಪ್ಪ ಮುದ್ದಾಪೂರ, ಮುದಕಪ್ಪ ಚಿಗರಡ್ಡಿ, ಪ್ರಮೋದ ತೆಗ್ಗಿ, ಮಂಜು ಕಿಲಾರಿ, ಶಿವನಗೌಡ ಪಾಟೀಲ, ಆರ.ಆರ್. ನಾಯಿಕ, ಪ್ರಶಾಂತ ಹುಣಸಿಕಟ್ಟಿ, ಪಾಂಡು ಅರಕೇರಿ, ಸೇರಿದಂತೆ ವೆಂಕಟಾಪೂರ, ಲಕ್ಷಾನಟ್ಟಿ, ಜಾಲಿಕಟ್ಟಿ, ಕಾಡರಕೊಪ್ಪ, ನಾಗಣಾಪೂರ, ಚಿಕ್ಕೂರ, ಬೊಮ್ಮನಬುದ್ನಿ, ಹಲಕಿ, ನಿಂಗಾಪೂರ, ತಿಮ್ಮಾಪೂರ, ಮೆಟಗುಡ್ಡ ಗ್ರಾಮದ ರೈತರು ಮತ್ತು ರೈತ ಸಂಘದ ಪದಾಧಿಕಾರಿಗಳು.