ಅಸಮರ್ಪಕ ನೀರು ಪೂರೈಕೆಗೆ ಆಕ್ರೋಶ

KannadaprabhaNewsNetwork |  
Published : Oct 31, 2023, 01:15 AM ISTUpdated : Oct 31, 2023, 01:16 AM IST
ಚಿತ್ರದುರ್ಗ ಎರಡನೇ ಪುಟದ ಮಿಡ್ಲ್ (ಹಿರಿಯೂರು) | Kannada Prabha

ಸಾರಾಂಶ

ನಗರದ ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿ ಮುಂದೆ ಸೋಮವಾರ ಬಿದರಕೆರೆ, ಕುರುಬರಹಳ್ಳಿ, ಅಗಳೇರಹಟ್ಟಿ ಭಾಗದ ನೂರಾರು ರೈತರು ಸಮರ್ಪಕವಾಗಿ ನೀರು ಹರಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.ಈ ವೇಳೆ ರೈತ ಪೂಜಾರ್ ಹನುಮಂತಪ್ಪ ಮಾತನಾಡಿ, ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸುತ್ತಿರುವ ನೀರಿನ ನಿರ್ವಹಣೆ ಬಗ್ಗೆ ರೈತರಿಗೆ ಅಸಮಾಧಾನವಿದೆ. ಕಾಲುವೆಗಳನ್ನು ಅಚ್ಚುಕಟ್ಟು ಮಾಡದೇ ನೀರು ಹರಿಸುತ್ತಿದ್ದು, ಕೊನೆಭಾಗದ ಬಿದರಕೆರೆಗೆ ನೀರು ಹರಿಯಲೇ ಇಲ್ಲ. ಸುಮಾರು 80-90 ಎಕರೆ ತೋಟಗಳು ನೀರಿಲ್ಲದಂತಾಗಿವೆ. ಕೆಳಗಿನ ಜಮೀನುಗಳಿಗೆ ನೀರು ಪೂರೈಕೆಯಾದ ನಂತರ ಮೇಲ್ಭಾಗದವರಿಗೆ ನೀರು ಹರಿಸುವುದು ವಾಡಿಕೆ.

ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿ ಮುಂಭಾಗ ರೈತರ ಪ್ರತಿಭಟನೆ ಕನ್ನಡಪ್ರಭವಾರ್ತೆ ಹಿರಿಯೂರು ನಗರದ ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿ ಮುಂದೆ ಸೋಮವಾರ ಬಿದರಕೆರೆ, ಕುರುಬರಹಳ್ಳಿ, ಅಗಳೇರಹಟ್ಟಿ ಭಾಗದ ನೂರಾರು ರೈತರು ಸಮರ್ಪಕವಾಗಿ ನೀರು ಹರಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ರೈತ ಪೂಜಾರ್ ಹನುಮಂತಪ್ಪ ಮಾತನಾಡಿ, ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸುತ್ತಿರುವ ನೀರಿನ ನಿರ್ವಹಣೆ ಬಗ್ಗೆ ರೈತರಿಗೆ ಅಸಮಾಧಾನವಿದೆ. ಕಾಲುವೆಗಳನ್ನು ಅಚ್ಚುಕಟ್ಟು ಮಾಡದೇ ನೀರು ಹರಿಸುತ್ತಿದ್ದು, ಕೊನೆಭಾಗದ ಬಿದರಕೆರೆಗೆ ನೀರು ಹರಿಯಲೇ ಇಲ್ಲ. ಸುಮಾರು 80-90 ಎಕರೆ ತೋಟಗಳು ನೀರಿಲ್ಲದಂತಾಗಿವೆ. ಕೆಳಗಿನ ಜಮೀನುಗಳಿಗೆ ನೀರು ಪೂರೈಕೆಯಾದ ನಂತರ ಮೇಲ್ಭಾಗದವರಿಗೆ ನೀರು ಹರಿಸುವುದು ವಾಡಿಕೆ. ಆದರೆ ಈ ಬಾರಿ ಚಾನೆಲ್ ಮೇಲೆ ಹೇಳುವವರು ಕೇಳುವವರು ಯಾರೂ ಇಲ್ಲ. ನೀರು ಎತ್ತಿ ಮೂರು ದಿನಗಳಾದರೂ ಇಂಜಿನಿಯರ್ ಅತ್ತ ಸುಳಿಯಲಿಲ್ಲ. ಹಾಗಾಗಿ ಹಲವು ಜಮೀನುಗಳು ಹಾಗೇ ಉಳಿದಿವೆ. 50-60 ವರ್ಷದಿಂದ ಸಾಕಿದ ಮರಗಳಿಗೆ ನೀರಿಲ್ಲ. ನೀರು ಬಿಡುವ ಭರವಸೆ ಸಿಗುವವರೆಗೂ ನಾವು ಕದಲುವುದಿಲ್ಲ. ಮಳೆಗಾಲ ಮುಗಿಯುತ್ತಾ ಬಂದ ಹೊತ್ತಲ್ಲಿ ವಿವಿ ಸಾಗರದ ನೀರು ಹರಿಸಿ ತೋಟಗಳಿಗೆ ಜೀವ ನೀಡೋಣ ಎಂಬ ರೈತರ ಕನಸಿಗೆ ಜಲ ನಿಗಮ ಅಧಿಕಾರಿಗಳು ಎಳ್ಳು ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಎಇಇ ವಿಜಯ್ ಕುಮಾರ್ ಮಾತನಾಡಿ, ಮೇಲಾಧಿಕಾರಿಗಳ ಜೊತೆ ಚರ್ಚಿಸಿ ನೀರು ಬಿಡಿಸುವ ವ್ಯವಸ್ಥೆ ಮಾಡುತ್ತೇವೆ. ಮಳೆ ಇಲ್ಲದರಿಂದ ನೀರಿನ ಸಮಸ್ಯೆ ತಲೆದೋರಿದ್ದು, ಸಿಬ್ಬಂದಿ ಕೊರತೆಯಿದೆ. ಆದಷ್ಟು ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದರು. ಎಇಇ ಮಾತಿಗೆ ಕೆರಳಿ ರೈತರು ಇಲಾಖೆ ಸಮಸ್ಯೆ ಹೇಳದೇ ಜಮೀನುಗಳಿಗೆ ನೀರು ಹರಿಸಿ ಎಂದಷ್ಟೇ ಕೇಳುತ್ತಿರುವುದು ಎಂದರು. ಇಂಜಿನಿಯರ್ ನಿಜ್ಜೇಗೌಡ,ರೈತರುಗಳಾದ ಅನಿಲ್ ಕುಮಾರ್, ಈರದಿಮ್ಮಯ್ಯ, ಬಸವರಾಜ್, ಟಿವಿ ಮೂರ್ತಿ, ರಂಗಸ್ವಾಮಿ, ರಾಮದಾಸ್, ಹೆಚ್ ಹನುಮಂತರಾಯ, ಅವಿನಾಶ್, ಮಹಾದೇವ, ಡಿ ಹೆಚ್ ಹನುಮಂತಯ್ಯ, ಸಣ್ಣ ಶಕುನಪ್ಪ,ಕಿರಣ್ ಕುಮಾರ್, ಜುoಜಣ್ಣ, ಕಾಂತರಾಜ್, ಪಾಂಡಪ್ಪ,ಜೆ. ನರಸಿಂಹ, ತಿಮ್ಮರಾಯ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ