ಸುಬ್ರಹ್ಮಣ್ಯನ ದರ್ಶನಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು

KannadaprabhaNewsNetwork |  
Published : Dec 22, 2025, 01:45 AM IST
21ಎಚ್ಎಸ್ಎನ್7 : ರಾಮನಾಥಪುರ    ಜಾತ್ರೆಯ ಪ್ರಯುಕ್ತ  ಇಂದು ಭಾನುವಾರ ಸುಬ್ರಮಣ್ಯನ ದರ್ಶನಕ್ಕೆ ಭಾಗವಹಿಸಿದ್ದ ಭಕ್ತ ಸಮೂಹ.  | Kannada Prabha

ಸಾರಾಂಶ

ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳುಷಷ್ಠಿ ಮಹಾ ರಥೋತ್ಸವ ಇದೇ ಡಿಸಂಬರ್ 26 ರಂದು ಶುಕ್ರವಾರ ನಡೆಯುವ ಹಿನ್ನೆಲೆಯಲ್ಲಿ ರಜಾ ದಿನವಾದ ಇಂದು ಭಾನುವಾರ ರಾಮನಾಥಪುರದಲ್ಲಿ ಎಲ್ಲೆಂದರಲ್ಲಿ ಜನಸಂದಣಿಯಿದ್ದು ಜಾತ್ರೆಮೈದಾನ, ದೇವಾಲಯಗಳು ಮತ್ತು ಕಾವೇರಿ ನದಿ ಸ್ನಾನಘಟ್ಟದಲ್ಲಿ ಭಕ್ತರಿಂದ ತುಂಬಿ ತುಳುಕಿತು. ಭಾನುವಾರ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ವಿವಿಧೆಡೆಗಳಿಂದ ರಾಮನಾಥಪುರಕ್ಕೆ ಆಗಮಿಸಿದ ಭಕ್ತರು ದೇವಾಲಯಲ್ಲಿ ಹರಕೆ ತೀರಿಸಲು ಹಣ್ಣು ತುಪ್ಪ ಮಾಡಿಸಿದರು. ಅಲ್ಲದೇ ಇಲ್ಲಿಯ ವಾಸಾಂಜನೇಯ, ಅಗಸ್ತೇಶ್ವರ, ಪಟ್ಟಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ, ಚತುರ್ಯುಗಮೂರ್ತಿ ರಾಮೇಶ್ವರ ಸೇರಿದಂತೆ ವಿವಿಧ ದೇವಲಯಗಳಿಗೆ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ರಾಮನಾಥಪುರ: ಪ್ರಸನ್ನ ಶ್ರೀ ಸುಬ್ರಹ್ಮಣ್ನಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ರಜಾ ದಿವಸವಾಗಿದ್ದರಿಂದ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ದರ್ಶನ ಪಡೆದು ಪುನೀತರಾದರು. ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳುಷಷ್ಠಿ ಮಹಾ ರಥೋತ್ಸವ ಇದೇ ಡಿಸಂಬರ್ 26 ರಂದು ಶುಕ್ರವಾರ ನಡೆಯುವ ಹಿನ್ನೆಲೆಯಲ್ಲಿ ರಜಾ ದಿನವಾದ ಇಂದು ಭಾನುವಾರ ರಾಮನಾಥಪುರದಲ್ಲಿ ಎಲ್ಲೆಂದರಲ್ಲಿ ಜನಸಂದಣಿಯಿದ್ದು ಜಾತ್ರೆಮೈದಾನ, ದೇವಾಲಯಗಳು ಮತ್ತು ಕಾವೇರಿ ನದಿ ಸ್ನಾನಘಟ್ಟದಲ್ಲಿ ಭಕ್ತರಿಂದ ತುಂಬಿ ತುಳುಕಿತು. ಭಾನುವಾರ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ವಿವಿಧೆಡೆಗಳಿಂದ ರಾಮನಾಥಪುರಕ್ಕೆ ಆಗಮಿಸಿದ ಭಕ್ತರು ದೇವಾಲಯಲ್ಲಿ ಹರಕೆ ತೀರಿಸಲು ಹಣ್ಣು ತುಪ್ಪ ಮಾಡಿಸಿದರು. ಅಲ್ಲದೇ ಇಲ್ಲಿಯ ವಾಸಾಂಜನೇಯ, ಅಗಸ್ತೇಶ್ವರ, ಪಟ್ಟಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ, ಚತುರ್ಯುಗಮೂರ್ತಿ ರಾಮೇಶ್ವರ ಸೇರಿದಂತೆ ವಿವಿಧ ದೇವಲಯಗಳಿಗೆ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ