ಜೋಶಿಗೆ ಘೇರಾವ್‌ ಹಾಕಲು ಹೋಗುತ್ತಿದ್ದ 15ಕ್ಕೂ ಹೆಚ್ಚು ರೈತ ಮುಖಂಡರ ಬಂಧನ

KannadaprabhaNewsNetwork |  
Published : Oct 17, 2026, 02:00 AM IST
16ಜಿಡಿಜಿ9ಎ | Kannada Prabha

ಸಾರಾಂಶ

ನಾವು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಘೇರಾವ್ ಹಾಕಲು ಶಾಂತಿಯುತವಾಗಿ ತೆರಳುತ್ತಿದ್ದೆವು.

ಮುಂಡರಗಿ: ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕು ಹಾಗೂ ಅವರಿಗೆ ಘೇರಾವ್ ಹಾಕಬೇಕು ಎಂದು ತೆರಳುತ್ತಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟಿಲ ಸೇರಿದಂತೆ ವಿವಿಧ ಕಬ್ಬು ಬೆಳೆಗಾರ ರೈತ ಮುಖಂಡರನ್ನು ಮುಂಡರಗಿ ಬಸ್ ನಿಲ್ದಾಣದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಮಧ್ಯಾಹ್ನ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಪಶ್ಚಿಮ ಪದವೀಧರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಮತಯಾಚನೆಗೆ ಕೇಂದ್ರ ಸಚಿವರು ಆಗಮಿಸುತ್ತಿದ್ದಾರೆನ್ನುವ ಮಾಹಿತಿ ಮೇರೆಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಕೇಂದ್ರ ಸಚಿವರ ಭೇಟಿಗಾಗಿ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಪಟ್ಟಣದ ಬಸ್ ನಿಲ್ದಾಣದ ಬಳಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿ ಕೊಳಲ, ಮಾಬೂಸಾಬ್ ಬಳ್ಳಾರಿ, ಪ್ರವೀಣ ಹಂಚಿನಾಳ, ರಾಜಶೇಖರ್ ಕೊಂಚಣ್ಣವರ, ಆನಂದ ಕೊಂಚಣ್ಣವರ, ಶರಣಪ್ಪ ಚೆನ್ನಳ್ಳಿ, ಈರಣ್ಣ ಕವಲೂರು, ಹನುಮಂತ ಗುಜನೂರು, ಈರಪ್ಪ ಮಡಿವಾಳರ, ಸೇರಿದಂತೆ 15ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಕಬ್ಬು ಬೆಳಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ನಾವು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಘೇರಾವ್ ಹಾಕಲು ಶಾಂತಿಯುತವಾಗಿ ತೆರಳುತ್ತಿದ್ದೆವು. ಆದರೆ, ಪೊಲೀಸರು ನಮ್ಮನ್ನು ಅಡ್ಡಗಟ್ಟಿ ವಶಕ್ಕೆ ಪಡೆದಿರುವುದು ಖಂಡನೀಯ. ಹೋರಾಟಗಾರರಿಗೆ ಯಾವುದೇ ಗೌರವ ಇಲ್ಲದಂತಾಗಿದ್ದು, ಕೇಂದ್ರ ಸರ್ಕಾರ ರೈತರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ರೈತರ ನ್ಯಾಯಯುತ ಹಕ್ಕಿಗಾಗಿ ಧ್ವನಿ ಎತ್ತಿದರೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ವಿಮೆ
ಆತ್ಮನಿರ್ಭರ ಭಾರತದ ನೌಕಾ ಶಕ್ತಿಗೆ ಐಎನ್‌ಎಸ್ ಸಮರ್ಥಕ್ ಬಲ