ಸತತ ೧೧ ನೇ ಬಾರಿಗೆ ಸಮಗ್ರ ಚಾಂಪಿಯಶಿಪ್

KannadaprabhaNewsNetwork |  
Published : Sep 11, 2026, 02:15 AM IST
ತಿಪಟೂರು : ಸತತ ೧೧ ನೇ ಬಾರಿಗೆ ಸಮಗ್ರ ಚಾಂಪಿಯಶಿಪ್ ಪ್ರಶಸ್ತಿ ಬಾಲಕರ ಸರ್ಕಾರಿ  | Kannada Prabha

ಸಾರಾಂಶ

ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸತತ ೧೧ ನೇ ಬಾರಿಗೆ ಸಮಗ್ರ ಕ್ರೀಡಾ ಪ್ರಶಸ್ತಿ ಹಾಗೂ ದರ್ಶನ್ ಹಾಗೂ ಓಂಕಾರ್ ವೈಯಕ್ತಿಕ ಚಾಂಪಿಯನ್‌ ಶಿಪ್ ಪಡೆದಿರುವುದಕ್ಕೆ ಸರ್ಕಾರಿ ಪ.ಪೂ. ಕಾಲೇಜು ಭಾಜನವಾಗಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸತತ ೧೧ ನೇ ಬಾರಿಗೆ ಸಮಗ್ರ ಕ್ರೀಡಾ ಪ್ರಶಸ್ತಿ ಹಾಗೂ ದರ್ಶನ್ ಹಾಗೂ ಓಂಕಾರ್ ವೈಯಕ್ತಿಕ ಚಾಂಪಿಯನ್‌ ಶಿಪ್ ಪಡೆದಿರುವುದಕ್ಕೆ ಸರ್ಕಾರಿ ಪ.ಪೂ. ಕಾಲೇಜು ಭಾಜನವಾಗಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು. ಬಾಲಕಿಯರ ವಿಭಾಗದಲ್ಲಿ ಗುಂಪು ಪಂದ್ಯಗಳಾದ ವಾಲಿಬಾಲ್, ಖೋ-ಖೋ, ಷಟಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ೪*೧೦೦ ಮೀ. ರಿಲೇ, ೪*೪೦೦ ಮೀ ರಿಲೇಯಲ್ಲಿ ಪ್ರಥಮ , ಹರ್ಷಿತ ೧೫೦೦ ಮೀ, ೩೦೦೦ ಮೀ. ನಲ್ಲಿ ಪ್ರಥಮ , ಗಾನವಿ ಜಾವೆಲಿನ್ನಲ್ಲಿ ಪ್ರಥಮ , ಉದ್ದ ಜಿಗಿತದಲ್ಲಿ ಕುಸುಮ ಐ ಎ ದ್ವಿತೀಯ , ೪೦೦ ಮೀ. ಓಟದಲ್ಲಿ ಹೇಮಾವತಿ ತ್ರಿವಿಧ ನೆಗೆತದಲ್ಲಿ ಸ್ಥಾನ, ಮಾನ್ಯ ದ್ವಿತೀಯ , ೩೦೦೦ ಮೀ ಓಟದಲ್ಲಿ ನಾಗರತ್ನ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಬಾಲಕರ ವಿಭಾಗದಲ್ಲಿ ಗುಂಪು ಪಂದ್ಯಗಳಾದ ಖೋ-ಖೋ ನಲ್ಲಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ, ಟೇಬಲ್ ಟೆನಿಸ್ ನಲ್ಲಿ ಪ್ರಥಮ, ಫುಟ್ಬಾಲ್ನಲ್ಲಿ ಪ್ರಥಮ, ವಾಲಿಬಾಲ್ ನಲ್ಲಿ ದ್ವಿತೀಯ , ದರ್ಶನ್ ಗುಂಡು ಎಸೆತ, ಚಕ್ರ ಎಸೆತ, ಹ್ಯಾಮರ್ ಥ್ರೋ ನಲ್ಲಿ ಪ್ರಥಮ , ಓಂಕಾರ್ ೧೫೦೦ ಮೀ, ೩೦೦೦ ಮೀ, ೮೦೦ ಮೀ. ನಲ್ಲಿ ಸ್ಥಾನ, ದೀಪು ೫೦೦೦ ಮೀ ನಡಿಗೆಯಲ್ಲಿ ಪ್ರಥಮ , ಶರಣ್ಯ ೨೦೦ ಮೀ ಓಟದಲ್ಲಿ ದ್ವಿತೀಯ, ಕುಮಾರ್ ಎನ್. ೪೦೦ ಮೀ ನಲ್ಲಿ ದ್ವಿತೀಯ , ಸಂತೋಷ್ ಜಾವೆಲಿನ್ ನಲ್ಲಿ ಪ್ರಥಮ ಹಾಗೂ ಸುದರ್ಶನ್, ತೀರ್ಥ ಕುಮಾರ್, ತೇಜಸ್ ಯೋಗದಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಹುಮಾನ ವಿತರಣಾ ಸಮಾರಂಭದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕ ಷಡಕ್ಷರಿ, ಕ್ರೀಡಾ ಕಾರ್ಯದರ್ಶಿ ಹರೀಶ ಒ. ಭೈರೇಶ್, ದೀಪಕ್, ಡಾ. ಲೋಕೇಶ್, ಹರ್ಷಕುಮಾರ್, ವಸಂತಲಕ್ಷ್ಮಿ, ರಮ್ಯ, ತೇಜಸ್ವಿನಿ, ಸುರೇಶ್ ಕುಮಾರ್, ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಎಸ್‌ನಿಂದ ಹಾವೇರಿ ಜಿಲ್ಲೆ ಬರಗಾಲ ಘೋಷಣೆಗೆ ಒತ್ತಾಯಿಸಿ೨೧ರಂದು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ, ಬೈಕ್ ರ‍್ಯಾಲಿ
ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಯಲ್ಲಿ ಮಹಿಳೆ ಸಹಭಾಗಿತ್ವ ಅತ್ಯುತ್ತಮ ಬೆಳವಣಿಗೆ