ಕ್ಷೀರ ಸಂಜೀವಿನಿ ಯೋಜನೆ ಸದ್ಬಳಕೆಯೊಂದಿಗೆ ಆರ್ಥಿಕ ಮುಗ್ಗಟ್ಟು ನಿವಾರಿಸಿಕೊಳ್ಳಿ: ಡಿ.ಕೃಷ್ಣೆಗೌಡ

KannadaprabhaNewsNetwork |  
Published : Aug 20, 2025, 01:30 AM IST
19ಕೆಎಂಎನ್ ಡಿ15 | Kannada Prabha

ಸಾರಾಂಶ

ಬುಯ್ಯನದೊಡ್ಡಿ ಡೇರಿಯು ಈ ಸಾಲಿನಲ್ಲಿ 3,41,498 ರು. ಲಾಭಾಂಶ ಗಳಿಸಿದೆ. ಇದಕ್ಕೆ ಗುಣಮಟ್ಟದ ಹಾಲು ಸರಬರಾಜು ಕಾರಣ. ಅಲ್ಲದೇ, ಉತ್ಪಾದಕರಿಗೆ ಹೆಚ್ಚಿನ ರೀತಿಯಲ್ಲಿ ಬೋನಸ್ ಸಿಗುತ್ತದೆ. ಗುಣಮಟ್ಟದ ಹಾಲು ಹಾಕುತ್ತಿರುವವರನ್ನು ತಾಲೂಕು ಮಟ್ಟದಲ್ಲಿ ಸನ್ಮಾನಿಸಿ ಅಭಿನಂದಿಸಲಾಗುವುದು.

ಕನ್ನಡಪ್ರಭ ವಾರ್ತೆ ಹಲಗೂರು

ಮನ್ಮುಲ್ ಹಾಲು ಒಕ್ಕೂಟದಲ್ಲಿ ಸದಸ್ಯರ ಅನುಕೂಲಕ್ಕಾಗಿ ಇರುವ ಕ್ಷೀರ ಸಂಜೀವಿನಿ ಸದ್ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಬೇಕು ಎಂದು ಮನ್ಮುಲ್ ನಿರ್ದೇಶಕ ಡಿ.ಕೃಷ್ಣೆಗೌಡ ಕರೆ ನೀಡಿದರು.

ಸಮೀಪದ ಬುಯ್ಯನದೊಡ್ಡಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಕ್ಷೀರ ಸಂಜೀವಿನಿ ಯೋಜನೆಯಲ್ಲಿ ಸದಸ್ಯರಿಗೆ ಬಡ್ಡಿ ರಹಿತ ಅನುದಾನ ಯೋಜನೆಯು ನಮ್ಮ ಮಳವಳ್ಳಿ ತಾಲೂಕಿಗೆ ಮೂರು ಲಭಿಸಿದೆ. ಅದರಲ್ಲಿ ಬುಯ್ಯನದೊಡ್ಡಿ ಡೇರಿಗೆ ನೀಡಿದ್ದೇವೆ ಎಂದರು.

ಸಂಘವು ಈ ಸಾಲಿನಲ್ಲಿ 3,41,498 ರು. ಲಾಭಾಂಶ ಗಳಿಸಿದೆ. ಇದಕ್ಕೆ ಗುಣಮಟ್ಟದ ಹಾಲು ಸರಬರಾಜು ಕಾರಣ. ಅಲ್ಲದೇ, ಉತ್ಪಾದಕರಿಗೆ ಹೆಚ್ಚಿನ ರೀತಿಯಲ್ಲಿ ಬೋನಸ್ ಸಿಗುತ್ತದೆ. ಗುಣಮಟ್ಟದ ಹಾಲು ಹಾಕುತ್ತಿರುವವರನ್ನು ತಾಲೂಕು ಮಟ್ಟದಲ್ಲಿ ಸನ್ಮಾನಿಸಿ ಅಭಿನಂದಿಸಲಾಗುವುದು ಎಂದರು.

ಗೆಜ್ಜಲಗೆರೆ ಮನ್ಮುಲ್ ತಾಲೂಕು ಮುಖ್ಯಸ್ಥ ಡಾ.ಸದಾಶಿವ ಮಾತನಾಡಿ, ಒಂದು ಗ್ರಾಮ ಅಭಿವೃದ್ಧಿಗೆ ಆಸ್ಪತ್ರೆ, ಶಾಲೆ ಎಷ್ಟು ಮುಖ್ಯವೋ ಹಾಲು ಒಕ್ಕೂಟವು ಅಷ್ಟೇ ಪ್ರಮುಖ. ಗುಣಮಟ್ಟದ ಹಾಲು ಸರಬರಾಜಿಗಾಗಿ ಹಸುಗಳಿಗೆ ಪೌಷ್ಠಿಕ ಆಹಾರ ನೀಡಬೇಕು. ನಿಮ್ಮ ಅನುಕೂಲಕ್ಕಾಗಿ ಅನೇಕ ಯೋಜನೆ ರೂಪಿಸಲಾಗಿದೆ ಎಂದರು.

ಹಾಲು ಕರೆಯುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಒಕ್ಕೂಟದಲ್ಲಿ ವಿಮೆ ಯೋಜನೆಗಳು ಇದ್ದು, ಅದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಿ ಎಂದರು. ಡೇರಿ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಹಾಲು ಉತ್ಪಾದಕರ ಸಂಘಕ್ಕೆ ಸರಬರಾಜು ಮಾಡಿ ಹೆಚ್ಚು ಹಣ ಪಡೆದ ಲಕ್ಷ್ಮಮ್ಮ, ಕಲಾವತಿ, ಶಿವಮ್ಮ ಅವರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಮನ್ಮುಲ್ ಗೆಜ್ಜಲಗೆರೆ ತಾಲೂಕು ಮುಖ್ಯಸ್ಥ ಡಾ.ಸದಾಶಿವ, ವಿಸ್ತರಣಾಧಿಕಾರಿ ಎಸ್.ಎನ್.ರೇಖಾ ಮತ್ತು ಇಂದ್ರಜಿತ್ ಸೇರಿದಂತೆ ಸಂಘದ ಉಪಾಧ್ಯಕ್ಷರಾದ ಚಿಕ್ಕಮುತ್ತಮ್ಮ, ನಿರ್ದೇಶಕರಾದ ಪುಟ್ಟಲಕ್ಷ್ಮಮ್ಮ, ಪುಷ್ಪಲತಾ, ರುಕ್ಮಿಣಿ, ಲಕ್ಷ್ಮಮ್ಮ, ಅರಸಮ್ಮ, ಶಿವಮ್ಮ, ವೆಂಕಟಲಕ್ಷ್ಮಿ, ಲಕ್ಷ್ಮಮ್ಮ, ಕಾರ್ಯದರ್ಶಿ ಪುಷ್ಪ ಪುಟ್ಟರಾಜು, ಹಾಲು ಪರೀಕ್ಷಕಿ ನಾಗರತ್ನ ಸೇರಿದಂತೆ ಇತರರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ