ಕನ್ನಡಪ್ರಭ ವಾರ್ತೆ ಗೌರಿಬಿದನೂರು
ದೇಶವನ್ನು ಮಲೇರಿಯಾ ಮುಕ್ತ ಮಾಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ನಗರದ ಹಲವಾರು ವಾರ್ಡ್ ಗಳಲ್ಲಿ ತೆರೆದ ಚರಂಡಿ ವ್ಯವಸ್ಥೆ ಇದ್ದು ಎಲ್ಲ ಚರಂಡಿಗಳಲ್ಲಿ ಹೂಳು ತುಂಬಿದೆ. ಇದರಿಂದಾಗಿ ಚರಂಡಿ ನೀರು ಮುಂದೆ ಸಾಗದೇ ತೊಂದರೆ ಅನುಭವಿಸುವಂತಾಗಿದೆ.ಬಿಸಿಲಿನ ತಾಪಕ್ಕೆ ಚರಂಡಿಯ ದುರ್ವಾಸನೆ ಬೀರುತ್ತಿದ್ದು ಸಮೀಪದ ಮನೆಗಳಲ್ಲಿ ಜನರು ವಾಸಿಸುವುದೇ ಕಷ್ಟವಾಗಿದೆ. ಅಲ್ಲದೆ ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ಬಿಸಿಲು ಇದ್ದಾಗಲೇ ಇಷ್ಟೊಂದು ತೊಂದರೆ ಅನುಭವಿಸುತ್ತಿರುವ ಜನರು, ಮಳೆ ಪ್ರಾರಂಭವಾದ ಮೇಲೆ ಇನ್ನೂ ಹೆಚ್ಚಿನ ತೊಂದರೆ ಅನುಭವಿಸುವಂತಾಗಲಿದೆ’ ಎನ್ನುತ್ತಾರೆ ನಗರದ ನಿವಾಸಿಗಳು.
ಮೂಗು ಮುಚ್ಚಿಕೊಂಡು ಓಡಾಟನಗರದ ಸುಮಂಗಲಿ ಬಡಾವಣೆ,ಹಿರೇಬಿದನೂರು,ವಿ.ವಿ.ಪುರಂ ಉಪ್ಪಾರ ಕಾಲೋನಿ ಇನ್ನೂ ಹಲವು ಹಲವು ವಾರ್ಡ್ ಗಳಲ್ಲಿ ಇದೇ ಪರಿಸ್ಥಿತಿ. ಇನ್ನು ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೋಳಿ ಮಾಂಸದ ಅಂಗಡಿಗಳ ಮುಂದೆ ಇರುವ ಚರಂಡಿಗಳಿಂದ ದುರ್ವಾಸನೆ ಬರುತ್ತಿದ್ದು, ನಿತ್ಯ ಓಡಾಡುವ ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚರಂಡಿಗಳಲ್ಲಿ ತುಂಬಿರುವ ಹೂಳು ಸ್ವಚ್ಛ ಮಾಡಲು ನಗರಸಭೆ ಈಗಲೇ ಕ್ರಮ ಕೈಗೊಳ್ಳಬೇಕು. ಮಳೆ ಪ್ರಾರಂಭವಾದರೆ ಮಳೆಯ ನೀರೆಲ್ಲ ರಸ್ತೆಗೆ ಬಂದು ನಿಲ್ಲುತ್ತದೆ. ಚರಂಡಿಗಳಲ್ಲಿ ನಿಂತಿರುವ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಿದಲ್ಲಿ ಮಳೆಗಾಲವನ್ನು ಸಮರ್ಥವಾಗಿ ನಿಭಾಯಿಸಬಹುದು. ವಾರ್ಡ್‌ಗಳಲ್ಲಿ ತೆರೆದ ಚೆರಂಡಿಗಳುಇನ್ನು ಕೆಲವು ವಾರ್ಡ್‌ಗಳಲ್ಲಿ ಹೊಸದಾಗಿ ನಿರ್ಮಿಸಿದ ಚರಂಡಿಗಳ ಮೇಲೆ ಮುಚ್ಚದೆ ತೆರೆದೆ ಇಟ್ಟಿರುವುದರಿಂದ ಚಿಕ್ಕ ಮಕ್ಕಳಾಗಲಿ ವಯಸ್ಸಾದ ಹಿರಿಯರು, ಮಕ್ಕಳು ಸಾಧ್ಯತೆ ಇದೆ. ಚರಂಡಿಯ ಹೂಳಿನ ಸಮಸ್ಯೆ ನಗರದ ಹಲವು ವಾರ್ಡ್ ಗಳಲ್ಲಿದೆ . ಮಳೆಗಾಲಕ್ಕೂ ಮುನ್ನವೇ ಈ ಸಮಸ್ಯೆಯ ನಿವಾರಣೆ ಅಗತ್ಯವಾಗಿದೆ. ಮಳೆಯ ನೀರು ಹರಿದು ಹೋಗಲು ಆಗದೇ ಇರುವಂತಹ ಸ್ಥಿತಿ ಇದ್ದು, ಇದನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.ಸೊಳ್ಳೆ ಕಾಟ ನಿಯಂತ್ರಿಸಿ
ರಾತ್ರಿ ಇಡೀ ಸೊಳ್ಳೆಗಳ ಕಾಟದಿಂದ ಜನರು ತತ್ತರಿಸುವಂತಾಗಿದೆ. ಮನೆಯ ಎದುರಿಗೆ ಚರಂಡಿಯ ನೀರು ಹರಿಯುತ್ತಿದ್ದು, ಈ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದನ್ನು ನಿವಾರಿಸಲು ನಗರಸಭೆ ಹಾಗೂ ಆರೋಗ್ಯ ಇಲಾಖೆಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾವಜನಿಕರು ಒತ್ತಾಯಿಸಿದ್ದಾರೆ. ಚರಂಡಿ ನೀರು ಮುಂದೆ ಸಾಗದೆ ಅಲ್ಲೇ ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಯ ಕಾರಣವಾಗುತ್ತದೆ. ರಸ್ತೆಯಲ್ಲಿ ಓಡಾಡುವವರು ಮೂಗುಮುಚ್ಚಿಕೊಂಡು ಸಂಚರಿಸುವಂತಾಗಿದೆ. ಕೂಡಲೇ ನಗರಸಭೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.