ಪ್ರಾಪರ್ಟಿ ಎಕ್ಸ್‌ಪೋಗೆ ಭರ್ಜರಿ ಜನ ಬೆಂಬಲ

KannadaprabhaNewsNetwork |  
Published : Aug 16, 2026, 03:00 AM IST
Property EXPO 2 | Kannada Prabha

ಸಾರಾಂಶ

ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ನೈಸ್‌ ರಸ್ತೆಯ ಜಂಕ್ಷನ್‌ ಬಳಿಯ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ವತಿಯಿಂದ ಆಯೋಜಿಸಿರುವ 3 ದಿನಗಳ ‘ಪ್ರಾಪರ್ಟಿ ಆ್ಯಂಡ್ ಲೈಫ್‌ಸ್ಟೈಲ್ ಎಕ್ಸ್‌ಪೋ-2026’ಕ್ಕೆ 2ನೇ ದಿನವಾದ ಶನಿವಾರವೂ ಭರ್ಜರಿ ಜನಸ್ಪಂದನೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ನೈಸ್‌ ರಸ್ತೆಯ ಜಂಕ್ಷನ್‌ ಬಳಿಯ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ವತಿಯಿಂದ ಆಯೋಜಿಸಿರುವ 3 ದಿನಗಳ ‘ಪ್ರಾಪರ್ಟಿ ಆ್ಯಂಡ್ ಲೈಫ್‌ಸ್ಟೈಲ್ ಎಕ್ಸ್‌ಪೋ-2026’ಕ್ಕೆ 2ನೇ ದಿನವಾದ ಶನಿವಾರವೂ ಭರ್ಜರಿ ಜನಸ್ಪಂದನೆ ವ್ಯಕ್ತವಾಯಿತು.

ಶನಿವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರು ಎಕ್ಸ್‌ಪೋಗೆ ಭೇಟಿ ನೀಡಿ, ವಿವಿಧ ಮಳಿಗೆಗಳಿಗೆ ತೆರಳಿ ಮಾಹಿತಿ ಪಡೆದುಕೊಂಡರು.ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕೂಡ ಎಕ್ಸ್‌ಪೋಗೆ ಭೇಟಿ ನೀಡಿ, ಪ್ರಾಪರ್ಟಿ ಹಾಗೂ ಲೈಫ್‌ಸ್ಟೈಲ್ ಮಳಿಗೆಗಳನ್ನು ವೀಕ್ಷಿಸಿದರು. ಇದೇ ವೇಳೆ ಎಕ್ಸ್‌ಪೋದಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋಗೆ ಸಾಕ್ಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬೃಹತ್ ಎಕ್ಸ್‌ಪೋದಲ್ಲಿ ಸುಮಾರು 50 ಪ್ರಾಪರ್ಟಿ ಮಳಿಗೆಗಳು ಹಾಗೂ 25 ಲೈಫ್‌ಸ್ಟೈಲ್ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿದವು. ಒಂದೇ ವೇದಿಕೆಯಲ್ಲಿ ಪ್ರತಿಷ್ಠಿತ ಬಿಲ್ಡರ್‌ಗಳು, ಡೆವಲಪರ್‌ಗಳು, ಬ್ಯಾಂಕ್‌ಗಳು ಹಾಗೂ ವಿವಿಧ ಲೈಫ್‌ಸ್ಟೈಲ್ ಬ್ರ್ಯಾಂಡ್‌ಗಳು ಭಾಗವಹಿಸಿರುವುದು ಎಕ್ಸ್‌ಪೋದ ಪ್ರಮುಖ ಆಕರ್ಷಣೆಯಾಗಿತ್ತು. ಭಾನುವಾರ ಕಡೆಯದಿನವಾಗಿದ್ದು, ಸಾರ್ವಜನಿಕರಿಗೆ ತಮ್ಮ ಕನಸಿನ ಮನೆ, ನಿವೇಶನ ಹಾಗೂ ವಿವಿಧ ಲೈಫ್‌ಸ್ಟೈಲ್ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಲೈಫ್‌ಸ್ಟೈಲ್‌ ಆಕರ್ಷಣೆ:

ಈ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಕೇವಲ ಪ್ರಾಪರ್ಟಿ ಖರೀದಿ ಮಾತ್ರವಲ್ಲ ಲೈಫ್‌ಸ್ಟೈಲ್‌ಗೂ ಬೇಕಾದ ಶಾಪಿಂಗ್‌ನ್ನು ಮಾಡಲು ಅವಕಾಶವಿದೆ. ವೈವಿಧ್ಯಮಯ ಸೀರೆ ಸ್ಟಾಲ್‌ಗಳು – ಹೊಸ ಟ್ರೆಂಡ್‌ಗಳ ಆಕರ್ಷಕ ಕಲೆಕ್ಷನ್‌ಗಳು ಇಲ್ಲಿನ ಮತ್ತೊಂದು ಆಕರ್ಷಣೆ. ಹೆಂಗೆಳೆಯರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುವ ಆಕರ್ಷಕ ಜ್ಯುವೆಲರಿ ಕಲೆಕ್ಷನ್‌ಗಳು, ಮನೆಯ ಅಂದವನ್ನೇ ಬದಲಿಸುವ ಸ್ಟೈಲಿಶ್ ಕಾರ್ಪೆಟ್‌ಗಳು, ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕೂಲರ್‌ಗಳು – ರಿಯಾಯಿತಿ ದರದಲ್ಲಿ ಲಭ್ಯವಿದ್ದು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಅಷ್ಟೇ ಅಲ್ಲ ಆರೋಗ್ಯ ಮತ್ತು ಆರಾಮಕ್ಕಾಗಿ ಹೆಲ್ತ್‌ಕೇರ್ ಹಾಗೂ ಮಸಾಜ್ ಎಕ್ವಿಪ್‌ಮೆಂಟ್‌ಗಳು, ಮನೆಯ ಅಂದ ಮತ್ತು ಕಂಫರ್ಟ್ ಹೆಚ್ಚಿಸುವ ಮಾಡರ್ನ್ ಫರ್ನಿಚರ್ ಕಲೆಕ್ಷನ್‌ಗಳು, ಲೈಫ್‌ಸ್ಟೈಲ್‌ಗೆ ಬೇಕಾದ ಎಲ್ಲವೂ ಒಂದೇ ಸೂರಿನಡಿ ಲಭ್ಯವಿದ್ದು ಕುಟುಂಬದೊಂದಿಗೆ ಭೇಟಿ ನೀಡಿ ಅದ್ಭುತ ಅನುಭವ ಪಡೆದುಕೊಳ್ಳಬಹುದು. ಮನೆಗೆ ಹೊಸ ಲುಕ್‌, ಸ್ಟೈಲ್‌ಗೆ ಹೊಸ ಟಚ್‌, ಲೈಫ್‌ಸ್ಟೈಲ್‌ಗೆ ಹೊಸ ಅನುಭವ ಪಡೆದುಕೊಳ್ಳಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೆಂಘೀ ನಿಯಂತ್ರಣಕ್ಕೆ ಮುಂಜಾಗೃತ ಕ್ರಮ ಕೈಗೊಳ್ಳಿ: ಮದನಿ
ಸ್ವಾತಂತ್ರ್ಯ ಸಂಭ್ರಮದಲ್ಲಿ ಮಿಂದೆದ್ದ ಸಿಟಿಜನ