ಕನ್ನಡಪ್ರಭ ವಾರ್ತೆ ಮೈಸೂರು
ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಅನಾಟಮಿ ವಿಭಾಗದ ಮುಖ್ಯಸ್ಥೆ ಡಾ.ಸಿ.ಎಸ್. ವಿದ್ಯಾ ಅವರು ಉಸಿರಾಟ ವ್ಯವಸ್ಥೆಯ ಬಗೆಗೆ ಉಪನ್ಯಾಸ ನೀಡಿದರು.
ಉಪನ್ಯಾಸನದಲ್ಲಿ ಹಲವು ಮಾಡೆಲ್ಗಳ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿದ್ದು, ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿತ್ತು. ಎಸ್.ಪಿವೈಎಸ್ ಅಂಡ್ ಆರ್ಸಿ ನಿರ್ದೇಶಕ ಮತ್ತು ಪ್ರಾಂಶುಪಾಲ ಎನ್.ಎಸ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಕೆ.ಎಸ್. ಗೋಪಾಲಕೃಷ್ಣ, ಸಮಿತಿಯ ಹಿರಿಯ ಸದಸ್ಯರು ಹಾಗೂ ಅಧ್ಯಯನ ಕೇಂದ್ರದ ಬೋಧಕ ಮತ್ತು ಬೋಧಕೇತರ ಸದಸ್ಯರು ಭಾಗವಹಿಸಿದ್ದರು.ಸಹಾಯಕ ಕಾರ್ಯದರ್ಶಿ ಕೆ. ಶಿವಕುಮಾರಸ್ವಾಮಿ ವಂದಿಸಿದರು.