ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಿಜೆಪಿ ಮುಖಂಡ ಎಸ್. ಸಚ್ಚಿದಾನಂದ ಹಾಗೂ ಪೌರಕಾರ್ಮಿಕರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಸ್ವಚ್ಛತೆಯ ಮೂಲಕ ಸಮಾಜದ ಕೊಳಕನ್ನು ತೊಳೆಯುವ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿ ಗೌರವವನ್ನು ಸಲ್ಲಿಸಲಾಗಿದೆ. ಜೊತೆಗೆ ಅವರಿಂದ ದೀಪ ಬೆಳಗಿಸಿ ಪ್ರಧಾನಿಯವರಿಗೆ ಶುಭ ಹಾರೈಸಲಾಗಿದೆ ಎಂದರು.
ಪುರಸಭಾ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ಪ್ರಪಂಚ ನಾಯಕರಲ್ಲಿ ಪ್ರಮುಖರಾದ ಪ್ರಧಾನಿ ಮೋದಿ ಯವರ ಕಾರ್ಯ ವೈಖರಿ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.ಶ್ರೀರಂಗಪಟ್ಟಣ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ. ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಅವರಿಗೆ 78 ಮಂದಿ ಪೌರಕಾರ್ಮಿಕರಿಗೆ ಪಾದಪೂಜೆ ಮಾಡಿ ಗೌರವಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಮಂಡಲ ಮಾಜಿ ಅಧ್ಯಕ್ಷ ಜಯಕುಮಾರ್, ನಗರ ಅಧ್ಯಕ್ಷ ಸುಧಾಕರ್, ಕಿರುತೆರೆ ಕಲಾವಿದ ಚಂದನ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್, ನಂದೀಶ್, ಗಂಜಾಂ ಶಿವು, ಎಸ್.ಟಿ ರಾಜು, ಎಸ್ ಸಿ ಮೋರ್ಚ ತಾಲೂಕು ಅಧ್ಯಕ್ಷ ಯತಿರಾಜ್, ಮುಖಂಡರಾದ ಶಾಮಿಯಾನ ಪುಟ್ಟರಾಜು, ಉಮೇಶ್ ಕುಮಾರ್, ರಘು, ಎಸ್.ಕೆ ಮಂಜುನಾಥ್ ಸೇರಿದಂತೆ ಇತರರು ಇದ್ದರು.ಇಂದು ಭೂ ಸೇನಾ ಲೆಫ್ಟಿನೆಂಟ್ ವಿಶ್ವಾಸ್ ಬೋರೇಗೌಡರಿಗೆ ಅಭಿನಂದನೆಮಂಡ್ಯ: ವಿಶ್ವಮಾನವ ಸೇವಾ ಪ್ರತಿಷ್ಠಾನ ಕಲ್ಲಹಳ್ಳಿ ಮತ್ತು ವಿಶ್ವೇಶ್ವರಯ್ಯ ನಗರ ನಾಗರೀಕರ ಬಳಗದ ಸಹಯೋಗದಲ್ಲಿ ಸೆ.26ರಂದು ನಗರದಲ್ಲಿ ನೂತನ ಭೂ ಸೇನಾ ಲೆಫ್ಟಿನೆಂಟ್ ಆಗಿ ನೇಮಕಗೊಂಡಿರುವ ವಿಶ್ವಾಸ್ ಬೋರೇಗೌಡರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಸಮಾರಂಭ ಉದ್ಘಾಟಿಸುವರು.