ದಿನ ನಿತ್ಯ ಪತ್ರಿಕೆ ಹಂಚುವ ವಿತರಕರ ಶ್ರಮಕ್ಕೆ ಬೆಲೆ ಕಟ್ಟಲಾಗದು: ಕೆ.ಶಿವಕುಮಾರ್

KannadaprabhaNewsNetwork |  
Published : Sep 24, 2026, 01:45 AM IST
23ಕೆಎಂಎನ್ ಡಿ31  | Kannada Prabha

ಸಾರಾಂಶ

ಪತ್ರಿಕೆ ಹುಟ್ಟಿದರೂ ಅದು ಜನರ ಕೈಗೆ ತಲುಪುವುದು ವಿತರಕರಿಂದಲೇ. ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ಕೆಲಸ. ಮಳೆ, ಚಳಿ, ಬಿಸಿಲು ಎನ್ನದೆ ದಿನನಿತ್ಯ ಮನೆ, ಅಂಗಡಿ, ಸ್ಟಾಲ್ ಗಳಿಗೆ ಪತ್ರಿಕೆ ಹಂಚುವ ವಿತರಕರ ಶ್ರಮಕ್ಕೆ ಬೆಲೆ ಕಟ್ಟಲಾಗದು.

ಕನ್ನಡಪ್ರಭ ವಾರ್ತೆಕೆ.ಆರ್.ಪೇಟೆ

ಮಳೆ, ಚಳಿ, ಬಿಸಿಲು ಎನ್ನದೆ ದಿನನಿತ್ಯ ಮನೆ, ಅಂಗಡಿ, ಸ್ಟಾಲ್‌ಗಳಿಗೆ ಪತ್ರಿಕೆ ಹಂಚುವ ವಿತರಕರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ವಿಧಾನ ಪರಿಷತ್ ಸದಸ್ಯರಾದ ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಹೇಳಿದರು.

ಪಟ್ಟಣದ ಹೊರವಲಯದ ಶ್ರೀ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಕರ್ನಾಟಕ ಹಿಂದುಳಿದ ವರ್ಗಗಳ ಸಂಪಾದಕರು ಮತ್ತು ವರದಿಗಾರರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿ, ಪತ್ರಿಕೆ ಹುಟ್ಟಿದರೂ ಅದು ಜನರ ಕೈಗೆ ತಲುಪುವುದು ವಿತರಕರಿಂದಲೇ. ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ಕೆಲಸ ಎಂದರು.

ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಪತ್ರಿಕೆಗಳ ಉಳಿವು ಮತ್ತು ಬೆಳವಣಿಗೆಯಲ್ಲಿ ವಿತರಕರ ಪಾತ್ರ ಅತ್ಯಂತ ಮಹತ್ವದ್ದು. ಪತ್ರಿಕೆ ಮತ್ತು ಓದುಗರ ನಡುವಿನ ನೇರ ಸಂಪರ್ಕ ಸೇತುವೆಯಾಗಿದ್ದಾರೆ ಎಂದರು.

ಸಮಾರಂಭದಲ್ಲಿ ಪತ್ರಿಕಾ ವಿತರಕರಾದ ಎಂ.ಎಸ್.ಮಂಜುನಾಥ್, ಪ್ರಮೋದ್‌ಶೆಟ್ಟಿ, ಹರಿಹರಪುರ ನಾರಾಯಣ್, ಸಂತೇಬಾಚಹಳ್ಳಿ ನಟರಾಜ್, ಹೊಸಹೊಳಲು ಮಂಜುನಾಥ್, ಜೈನ್ನಹಳ್ಳಿ ಬಸವರಾಜು, ಮೈಸೂರು ವಿಷ್ಣುಕುಮಾರ್, ಉಮೇಶ್, ಬೂಕನಕೆರೆ ಕೃಷ್ಣ, ಅಘಲಯ ತಮ್ಮಣ್ಣ ನಾಯಕ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಪತ್ರಿಕಾ ವಿತರಕರನ್ನು ತಾಲೂಕಿನ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಸನ್ಮಾನಿಸಿದರು.

ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಚಿತ್ರನಟ ಜಿ.ಅರವಿಂದ್ ಮತ್ತು ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್.ನಟರಾಜ್ ಅವರಿಗೆ ತವರಿನ ಸನ್ಮಾನ ಮಾಡಲಾಯಿತು.

ಮನ್ಮುಲ್ ನಿರ್ದೇಶಕ ಡಾಲು ರವಿ, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ರಾಜ್ಯ ಕೈಗಾರಿಕಾ ಸರಬರಾಜು ಸಹಕಾರ ಮಂಡಳಿ ಅಧ್ಯಕ್ಷ ಕೆ.ಎಸ್.ಸಂತೋಷ್ ಕುಮಾರ್ ಪತ್ರಿಕಾ ವಿತರಕರಿಗೆ ಬ್ಯಾಗ್ ವಿತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪುಟ್ಟರಾಜು, ಬಿಜಿಎಸ್ ಹೇಮಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜಿ.ಎನ್.ರಾಮಕೃಷ್ಣೇಗೌಡ, ತಹಸೀಲ್ದಾರ್ ಶ್ರೇಯಸ್, ಉದ್ಯಮಿ ರಾಜೇನಹಳ್ಳಿ ರೇವಣ್ಣ, ಟಿಎಚ್‌ಒ ಡಾ.ಅಜಿತ್, ಡಾ.ಲೋಹಿತ್, ಪುರಸಭಾ ಮಾಜಿ ಸದಸ್ಯರಾದ ಎಚ್.ಆರ್.ಲೋಕೇಶ್, ರವೀಂದ್ರಬಾಬು, ಅಂಚಿ.ಸಣ್ಣಸ್ವಾಮಿಗೌಡ, ವಿಠಲಾಪುರ ಸುಬ್ಬೇಗೌಡ, ಉದ್ಯಮಿ ನಂಜುಮಡಸ್ವಾಮಿ, ವಕೀಲ ರಾಜೇಗೌಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಸಮಸ್ಯೆ ಪರಿಹಾರಕ್ಕೆ ಡಿಸಿ ಸೂಚನೆ
ತರಳಬಾಳು ಸಂಸ್ಥೆಯಲ್ಲಿ ಸಮಗ್ರ ಬದುಕು ರೂಪಿಸುವ ಶಿಕ್ಷಣ: ಬಸವ ಮರುಳಸಿದ್ಧ ಸ್ವಾಮೀಜಿ