ಕನ್ನಡಪ್ರಭ ವಾರ್ತೆ ಮಾನ್ವಿ/ಸಿರವಾರ:
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಮಾನ್ವಿ ಮತ್ತು ಸಿರವಾರ ತಾಲೂಕು ಕೆ.ಗುಡದಿನ್ನಿ , ಜಂಬಲದಿನ್ನಿ, ನವಲಕಲ್, ಲಕ್ಕಂದಿನ್ನಿ, ರಬಣಕಲ್ ಸೇರಿ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದ ಬೇಸಿಗೆ ಹಂಗಾಮಿನ ಭತ್ತದ ಪೈರು ಒಣಗುತ್ತಿರುವ ಹಿನ್ನೆಲ್ಲೆಯಲ್ಲಿ ಜಮೀನುಗಳಿಗೆ ನೀಡಿ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಕಾಲುವೆ ನೀರು ಹಾಗೂ ಮಳೆ ಬರದೆ ಇದ್ದಾಗ ನಿರಂತರವಾಗಿ ಭತ್ತ ಬೆಳೆಯದೆ ಬೆಳೆ ಪರಿವರ್ತನೆಗಾಗಿ ತೋಗರಿ, ಜೊಳ, ಸಜ್ಜೆ, ಶೇಂಗಾ, ಹತ್ತಿ, ಕಡ್ಲೆ ಬೆಳೆಗಳನ್ನು ಬೆಳೆಯಬೇಕು. ಹಾಗೂ ಹೆಚ್ಚು ಸಾವಯವ ಪದಾರ್ಥಗಳಿರುವ ಎರೆಹುಳು ಗೊಬ್ಬರ, ತಿಪ್ಪೆಗೊಬ್ಬರವನ್ನು ಜಮೀನಿಗೆ ನೀಡಬೇಕು ಎಂದು ತಿಳಿಸಿದರು.ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರಜ್ಞ ಡಾ.ಅಜೀತ್ ಕುಮಾರ, ಡಾ. ಮುಖೇಶ್ ಹಾಗೂ ತಾಲೂಕು ಸಾಹಯಕ ಕೃಷಿ ನಿರ್ದೇಶಕರಾದ ಹುಸೇನ್ ಸಾಹೇಬ್, ಕೃಷಿ ಅಧಿಕಾರಿ ವೆಂಕಣ್ಣ ಯಾದವ್ ಸೇರಿ ಇನ್ನಿತರರು ಇದ್ದರು.