ಗದ್ದೆ ನಾಟಿ: ಸಂಸದ ಮದುವೆ ಒತ್ತಾಯಿಸಿ ರೈತ ಮುಖಂಡ ಹಾಡು!

KannadaprabhaNewsNetwork |  
Published : Aug 13, 2024, 12:52 AM IST
11 | Kannada Prabha

ಸಾರಾಂಶ

ಹರೇಕಳದ ಕುತ್ತಿಮೊಗರು ಗದ್ದೆಯಲ್ಲಿ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆ ಹಮ್ಮಿಕೊಂಡಿದ್ದ ಪೊಸಕಂಡೊಡೊಂಜಿ ಆಟಿದ ಅಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಬೃಜೇಶ್‌ ಚೌಟ ಊರವರು, ಗದ್ದೆ ಮನೆತನದವರು ಹಾಗೂ ವಿದ್ಯಾರ್ಥಿಗಳ ಜತೆಗೂಡಿ ನಾಟಿ ಕಾರ್ಯದಲ್ಲಿ ಭಾಗವಹಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ತಾಲೂಕಿನ ಹರೇಕಳದ ಕುತ್ತಿಮೊಗರು ಗದ್ದೆಯಲ್ಲಿ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆ ಹಮ್ಮಿಕೊಂಡಿದ್ದ ಪೊಸಕಂಡೊಡೊಂಜಿ ಆಟಿದ ಅಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಬೃಜೇಶ್‌ ಚೌಟ ಊರವರು, ಗದ್ದೆ ಮನೆತನದವರು ಹಾಗೂ ವಿದ್ಯಾರ್ಥಿಗಳ ಜತೆಗೂಡಿ ನಾಟಿ ಕಾರ್ಯದಲ್ಲಿ ಭಾಗವಹಿಸಿದರು.

ಈ ಸಂದರ್ಭ ರೈತ ಮುಖಂಡ ಮನೋಹರ್‌ ಶೆಟ್ಟಿ ಇವರು ನಾಟಿ ಕಾರ್ಯ ನಡೆಸುವಾಗ ಹಾಡುವ ಹಾಡಿನಲ್ಲಿ ಸಂಸದ ಕ್ಯಾ ಬೃಜೇಶ್‌ ಚೌಟ ಅವರು ಮದುವೆಯಾಗುವಂತೆ ಪ್ರೇರೇಪಿಸಿ ಹಾಡಿದ ಹಾಡು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು.

ʻ ಆ ಲೇಲೆ ಏರೆಗ್‌ ಮದಿಮೆ, ಆ ಲೇಲೆ ಮದಿಮಾಯೆ ಏರ್‌, ಅನ್ನುತ್ತಾ ಇಲ್ಲಿ ಮದುಮಗ ಯಾರು? ದಯವಿಟ್ಟು ಮದುಮಗ ಆಗದವರು ಶೀಘ್ರವೇ ಮದುವೆ ಆಗಬೇಕುʼ ಅನ್ನುತ್ತಾ ಹಾಡು ಮುಂದುವರಿಸಿದರು. ಇವರ ಹಾಡು ಎಲ್ಲರನ್ನು ನಗಿಸಿತು. ಬಳಿಕ ಪೊಸಕಂಡ ದಲ್ಲಿ ನಾಟಿ ಕಾರ್ಯ ನಡೆಸಿದ ಸಂಸದರು ಕೃಷಿ ಕಾಯಕದಲ್ಲಿ ಸಾಂಕೇತಿಕವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ವಾಲಿಬಾಲ್‌ ಆಟವನ್ನಾಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಬ್ರಿಜೇಶ್‌ ಚೌಟ ಮಾತನಾಡಿ, ಒಂದು ಕಾಲದಲ್ಲಿ ಕೃಷಿ ಮಾಡದೇ ಇದ್ದಲ್ಲಿ ಬದುಕಿರಲಿಲ್ಲ. ಇದೀಗ ಕೃಷಿಯನ್ನು ನಾವು ಬದುಕಿಸುವ ಕಾಲ ಬಂದಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ಹಿಂದೆ ಅಷ್ಟಮಿ ಬಂದಾಗ ಮಾತ್ರ ಕೋಳಿ ತಿನ್ನಬೇಕಿತ್ತು. ಆದರೆ ಇದೀಗ ಎಲ್ಲವೂ ಬದಲಾಗುತ್ತಾ ಕೃಷಿ ಚಟುವಟಿಕೆಗಳು ನಶಿಸುತ್ತಿವೆ ಎಂದರು.

ಮೋಹನದಾಸ್‌ ರೈ ದಬ್ಬೇಲಿಗುತ್ತು, ದೆಬ್ಬೇಲಿ ಮಹಾಬಲ ಹೆಗ್ಡೆ , ಹಿರಿಯ ಕೊರಗಪ್ಪ ಶೆಟ್ಟಿ, ಮೋಹನ್‌ ದಾಸ್‌ ಶೆಟ್ಟಿ ಉಳಿದೊಟ್ಟು, ರೋಟರಿ ಸಂಸ್ಥೆಯ ಅಧ್ಯಕ್ಷೆ ಸೌಮ್ಯಾ ಆರ್.‌ ಶೆಟ್ಟಿ, ಹೇಮಲತಾ ಎಂ ಶೆಟ್ಟಿ, ಸುಧಾಕರ್‌ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ