ಮುಸ್ಲಿಂ ಕುಟುಂಬದಿಂದ ಪಡಿಪೂಜೆ, ಅನ್ನ ಸಂತರ್ಪಣೆ

KannadaprabhaNewsNetwork |  
Published : Jan 11, 2025, 12:46 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಜಗಳೂರು ತಾಲೂಕಿನಲ್ಲಿ ಮುಸ್ಲಿಂ ಕುಟುಂಬವೊಂದು ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ ಹಾಗೂ ಅನ್ನ ಸಂತರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿ, ಭಾವೈಕ್ಯತೆಯನ್ನು ಮೆರೆದಿದೆ.

ದಾವಣಗೆರೆ: ಜಗಳೂರು ತಾಲೂಕಿನಲ್ಲಿ ಮುಸ್ಲಿಂ ಕುಟುಂಬವೊಂದು ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ ಹಾಗೂ ಅನ್ನ ಸಂತರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿ, ಭಾವೈಕ್ಯತೆಯನ್ನು ಮೆರೆದಿದೆ.

ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದ ಶೌಕತ್ ಅಲಿ, ಅಫ್ರೋಜ್‌ ಹಾಗೂ ಹಮೀದ್‌ ಕುಟುಂಬಸ್ಥರು ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ತಮ್ಮ ಮನೆಯಲ್ಲೇ ಪಡಿಪೂಜೆ ಮಾಡಿಸಿ, ಅನ್ನ ಸಂತರ್ಪಣೆ ನೆರವೇರಿಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದೆ.

ಶ್ರದ್ಧಾಭಕ್ತಿಯಿಂದ ಮುಸ್ಲಿಂ ಕುಟುಂಬ ಸದಸ್ಯರು ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಭಾವೈಕ್ಯತೆ ಸಂದೇಶ ಸಾರಿದ ಶೌಕತ್ ಅಲಿ, ಅಫ್ರೋಜ್‌ ಹಾಗೂ ಹಮೀದ್‌ ಕುಟುಂಬ ಸದಸ್ಯರ ಶ್ರದ್ಧಾಭಕ್ತಿಗೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.

- - - (ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ