ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಪದ್ಮನೂರು ಈದ್‌ ಮಿಲಾದ್‌ ಸೌಹಾರ್ದ ಕೂಟ

KannadaprabhaNewsNetwork |  
Published : Sep 24, 2024, 01:53 AM IST
ಪದ್ಮನೂರಿನಲ್ಲಿ ಸೌಹಾರ್ದ ಕೂಟ | Kannada Prabha

ಸಾರಾಂಶ

ಸುಮಾರು ೬೫ ವರ್ಷಗಳ ಹಿಂದೆ ಇಲ್ಲಿನ ಗ್ರಾಮಸ್ಥರು, ಸಮಾನ ಮನಸ್ಕರು ಸೇರಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಆರಂಭಿಸಿದರು. ಈ ಸಂದರ್ಭ ಅಲ್ಲಿನ ಕ್ರ‍್ಯೆಸ್ತ ,ಮುಸ್ಲಿಂ ಬಾಂಧವರು ಕೈ ಜೋಡಿಸಿದ್ದು ಕಳೆದ ೫೮ ವರ್ಷಗಳಿಂದ ಕ್ರಿಸ್ಮಸ್ ಹಾಗೂ ೬೫ ವರ್ಷದಿಂದ ಯಕ್ಷಗಾನ ಬಯಲಾಟ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯುತ್ತದೆ. ೧೬ ವರ್ಷದಿಂದ ಎಲ್ಲಾ ಧರ್ಮದವರ ಸೇರುವಿಕೆಯಿಂದ ಈದ್ ಮಿಲಾದ್ ಆಚರಣೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಿನ್ನಿಗೋಳಿ ಸಮೀಪದ ಪದ್ಮನೂರು ಸಾರ್ವ ಜನಿಕ ಬಯಲಾಟ ಸಮಿತಿ ಆಶ್ರಯದಲ್ಲಿ ಹಿಂದು- ಮುಸ್ಲಿಂ ಕ್ರ‍್ಯೆಸ್ತ ಬಾಂಧವರ ಒಗ್ಗೂಡುವಿಕೆಯಲ್ಲಿ ಭಾನುವಾರ ರಾತ್ರಿ ವಿಶಿಷ್ಟವಾಗಿ ೧೬ ನೇ ವರ್ಷದ ಸಾರ್ವಜನಿಕ ಈದ್ ಮಿಲಾದ್ ಕಾರ್ಯಕ್ರಮ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಯಿತು.

ಸಮಾರಂಭದಲ್ಲಿ ಮಾತನಾಡಿದ ಡಿವೈಎಪ್‌ಐ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಭಾರತ ದೇಶ ವೈವಿಧ್ಯತೆಯಿಂದ ಕೂಡಿದ್ದು ಇತರ ಧರ್ಮವನ್ನು ಗೌರವಿಸಿ ಬಾಳಿದರೆ ಯಾವುದೇ ದ್ವೇಷ, ಅಸೂಯೆ ಇರುವುದಿಲ್ಲ ಎಂದರು.

ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ ಸಹಾಯಕ ಧರ್ಮ ಗುರು ಫಾ. ಸ್ಟೀವನ್ ಜೋಯಲ್ ಕುಟಿನ್ಹೋ ಮಾತನಾಡಿ, ನಾವು ಉಸಿರಾಡುವ ಗಾಳಿ, ನೀರು ಒಂದೇ ಆಗಿದ್ದು ಧರ್ಮದ ನಡುವಿನ ಸಂಘರ್ಷದಿಂದ ದೂರವಿದ್ದು ಸಾಮರಸ್ಯ ಬದುಕಿನಿಂದ ಜೀವನ ಪಾವನ ವಾಗಲು ಸಾಧ್ಯ ಎಂದರು.

ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ‍್ಯ ಡಾ.ವಾಸುದೇವ ಬೆಳ್ಳೆ ಮಾತನಾಡಿದರು. ಪತ್ರಕರ್ತ ಮಿಥುನ್ ಉಡುಪ ಕೊಡೆತ್ತೂರು ಅವರನ್ನು ಗೌರವಿಸಲಾಯಿತು. ಪದ್ಮನೂರು ಬಯಲಾಟ ಸಮಿತಿಯ ಅಧ್ಯಕ್ಷ ಶೇಖರ ಪೂಜಾರಿ, ಸಮಿತಿ ಕಾರ್ಯದರ್ಶಿ ವಸಂತ್ ಶೆಟ್ಟಿಗಾರ್ ಮತ್ತಿತರರು ಇದ್ದರು.

ಕೆ. ಎ. ಖಾದರ್ ಸ್ವಾಗತಿಸಿದರು. ಹೆರಿಕ್ ಪಾಯಸ್ ವಂದಿಸಿದರು. ಶಶಿ ಸುರೇಶ್ ನಿರೂಪಿಸಿದರು.

............

ಸರ್ವಧರ್ಮ ಸಮನ್ವಯ:

ಸುಮಾರು ೬೫ ವರ್ಷಗಳ ಹಿಂದೆ ಇಲ್ಲಿನ ಗ್ರಾಮಸ್ಥರು, ಸಮಾನ ಮನಸ್ಕರು ಸೇರಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಆರಂಭಿಸಿದರು. ಈ ಸಂದರ್ಭ ಅಲ್ಲಿನ ಕ್ರ‍್ಯೆಸ್ತ ,ಮುಸ್ಲಿಂ ಬಾಂಧವರು ಕೈ ಜೋಡಿಸಿದ್ದು ಕಳೆದ ೫೮ ವರ್ಷಗಳಿಂದ ಕ್ರಿಸ್ಮಸ್ ಹಾಗೂ ೬೫ ವರ್ಷದಿಂದ ಯಕ್ಷಗಾನ ಬಯಲಾಟ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯುತ್ತದೆ. ೧೬ ವರ್ಷದಿಂದ ಎಲ್ಲಾ ಧರ್ಮದವರ ಸೇರುವಿಕೆಯಿಂದ ಈದ್ ಮಿಲಾದ್ ಆಚರಣೆ ನಡೆಯುತ್ತಿದೆ.

-ಶೇಖರ್‌ ಪೂಜಾರಿ, ಸಮಿತಿ ಅಧ್ಯಕ್ಷ.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್