ಐತಿಹಾಸಿಕ ಪಡುಬಿದ್ರಿ ಚೆಂಡು ಸಂಪನ್ನ

KannadaprabhaNewsNetwork |  
Published : May 14, 2026, 01:30 AM IST
ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಚೆಂಡು ಆಟ ನಡೆಯಿತು | Kannada Prabha

ಸಾರಾಂಶ

ಇಲ್ಲಿನ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಮರುದಿನ ನಡೆಯುವ ಇತಿಹಾಸ ಪ್ರಸಿದ್ಧ ಪಡುಬಿದ್ರಿ ಚೆಂಡಿಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.

ಕಾಪು ಇಲ್ಲಿನ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಮರುದಿನ ನಡೆಯುವ ಇತಿಹಾಸ ಪ್ರಸಿದ್ಧ ಪಡುಬಿದ್ರಿ ಚೆಂಡಿಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.ದೇವಳದ ಅರ್ಚಕ ಪದ್ಮನಾಭ ಭಟ್ ಪೂಜೆ ಸಲ್ಲಿಸಿ, ಚೆಂಡಿನ ಸೇವಾಕರ್ತರಾದ ಬೇಬಿ ಪೂಜಾರ್ತಿ ಮನೆಯವರು ಚೆಂಡನ್ನು ನಡ್ಸಾಲುಗುತ್ತು ಶ್ರೀನಾಥ ಹೆಗ್ಡೆ ಮತ್ತು ಬಗ್ಗೇಡಿಗುತ್ತು ಶೇಖರ ಶೆಟ್ಟಿ ಅವರ ಸಮ್ಮುಖ ಯುವಕರಿಗೆ ಹಸ್ತಾಂತರಿಸಿದರು.ಇಲ್ಲಿನ ಪಾದೆಬೆಟ್ಟು ಮತ್ತು ನಡ್ಸಾಲು ಯುವಕರ ತಂಡಗಳು ದೇವಳದ ಮುಂಭಾಗದಲ್ಲಿ ಸೌಹಾರ್ದಯುತವಾಗಿ ಚೆಂಡು ಆಡುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಪೇಟೆಮನೆ ಪ್ರಕಾಶ್ ಶೆಟ್ಟಿ, ಅನಿಲ್ ಶೆಟ್ಟಿ, ನಡ್ಸಾಲು ಗುತ್ತು ಶ್ರೀನಾಥ ಹೆಗ್ಡೆ, ಸೇವಾಕರ್ತರ ಮನೆಯವರಾದ ಅನೂಜ್ ಕರ್ಕೇರ, ಧನುಷ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇ, ಜೂನ್ ತಿಂಗಳ ಪಡಿತರ ಆಹಾರಧಾನ್ಯ ಮುಂಗಡ ವಿತರಣೆ
ನಿವೇಶನ ರಹಿತ ಕಾರ್ಮಿಕರ ಹೋರಾಟ: ಸ್ಥಳಕ್ಕೆ ಅಧಿಕಾರಿಗಳ ಭೇಟಿ