ಕನ್ನಡಪ್ರಭ ವಾರ್ತೆ ಚಡಚಣ
ಪಟ್ಟಣದ ಓಂ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಕನ್ನಡಪ್ರಭ ದಿನಪತ್ರಿಕೆ, ಸುವರ್ಣ ನ್ಯೂಸ್, ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಎಸ್.ಎಸ್.ಎಚ್ ಇಂಟರನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ನಡೆದ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಪರಿಸರ ರಕ್ಷಣೆ, ವನ್ಯಜೀವಿಗಳ ಪೋಷಣೆ ಹಾಗೂ ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡಲು ಮಕ್ಕಳಿಗಾಗಿ ಕನ್ನಡಪ್ರಭ ದಿನಪತ್ರಿಕೆಯು ಚಿತ್ರಕಲಾ ಸ್ಪರ್ಧೆ ಮಾಡುವುದರ ಮೂಲಕ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು. ನಾನೂ ಚಿತ್ರಕಲಾ ಸ್ಪರ್ಧೆಯಲ್ಲಿ ಸ್ಪರ್ಧಿಸಿ ರಾಜ್ಯಮಟ್ಟದವರೆಗೆ ಹೋಗಿದ್ದೇನೆ. ಈ ಸುವರ್ಣಾವಕಾಶ ಉಪಯೋಗಿಸಿಕೊಂಡು ನಮ್ಮ ತಾಲೂಕಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.ಕರ್ನಾಕಟಕ ಪಬ್ಲಿಕ್ ಶಾಲೆ ಉಪಪ್ರಾಚಾರ್ಯ ಎಸ್.ಐ.ಚನಗೊಂಡ ಮಾತನಾಡಿ, ಚಿತ್ರಕಲೆ ಒಂದು ಸ್ಪರ್ಧೆಯಲ್ಲ, ಅದು ಒಂದು ಕಲೆ. ಕಲೆ ಉಳಿಸಿವುದರ ಜೊತೆಗೆ ಮಕ್ಕಳು ಪರಿಸರ, ವನ್ಯಜೀವಿಗಳು, ಪಕ್ಷಿಗಳ ಸಮತೋಲನ ಕಾಯ್ದುಕೊಳ್ಳುವ ಕಾರ್ಯ ಮಾಡಬೇಕು ಎಂದ ಅವರು, ಪರಿಸರ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಈ ಸಮಾರಂಭದಲ್ಲಿ ನಿರ್ಣಾಯಕರಾಗಿ ಆಗಮಿಸಿದ ಚಿತ್ರಕಲಾ ಶಿಕ್ಷಕ ಎ.ಪಿ ಬಗಲಿ, ಸಂಜಯ ಕುಲಕರ್ಣಿ, ಪತ್ರಕರ್ತ ಸಂಘದ ಅಧ್ಯಕ್ಷ ರಮೇಶ ಬಿರಾದಾರ, ಪ್ರೌಢ ಶಾಲಾ ಶಿಕ್ಷಕ ಜಾಫರ ಮುಲ್ಲಾ, ಮುಖ್ಯ ಶಿಕ್ಷಕರಾದ ಸುರೇಶ ಜಂತಿ, ನಿಜನಾ ಶ್ರೀನಿವಾಸ, ಸಹ ಶಿಕ್ಷಕರಾದ ಪಿ.ಎಚ್ ಪುಜಾರಿ, ಎಂ.ಎನ್ ಚೌವ್ಹಾಣ, ಶಶಿಕಲಾ ಮಾಲಾಪುರ, ಆಶ್ಮಾ ನದಾಫ, ಮಲ್ಲಿಕಾರ್ಜುನ ಇಂಗಳಿಗಿ, ರಾಣಿ ನಿವರಗಿ, ಪೂಜಾ ಹಿಟ್ನಳ್ಳಿ ಹಾಗೂ ಶಿಬ್ಬಂದಿ ವರ್ಗದವರು ಸೆರಿದಂತೆ ವಿವಿಧ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಅಭಿನಂದನೆ:
ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಸಲು ಸಹಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿವಿಧ ಹಂತದ ಅಧಿಕಾರಿಗಳಿಗೆ ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಸ್.ಹಾವಿನಾಳ ಅಭಿನಂದನೆ ಸಲ್ಲಿದರು. ಒಂದು ಚಿತ್ರ ನೂರು ಕಥೆ ಹೇಳುವಂತೆ ನಮ್ಮ ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ, ವನ್ಯ ಜೀವಿಗಳ ಸಂರಕ್ಷಣೆ ಸೇರಿದಂತೆ ನೂರು ಸಂದೇಶ ಸಾರುವಂತಾ ಕಾರ್ಯ ಕನ್ನಡಪ್ರಭ ದಿನಪತ್ರಿಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳುಚಿತ್ರಕಲಾ ಸ್ಪರ್ಧೆಯಲ್ಲಿ 8 ನೇ ತರಗತಿಯಲ್ಲಿ ಶಶಿಕಲಾ ಕಾಂಬಳೆ ಪ್ರಥಮ, ನವ್ಯ ಚವ್ಹಾಣ ದ್ವಿತೀಯ, ವೃಷಿಕೇಶ ಕೊಳ್ಳೂರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 9ನೇ ತರತಿಯಲ್ಲಿ ಸಮೃದ್ಧಿ ಕರ್ಲಮಳ ಪ್ರಥಮ, ಶ್ರೇಯಾ ವಾಲಿ ದ್ವಿತೀಯ, ಸಾಕ್ಷೀ ಬಿರಾದಾರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 10ನೇ ತರಗತಿಯಲ್ಲಿ ಶಿವಂ ವಾಲಿ ಪ್ರಥಮ, ವಿನಾಯಕ ಪವಾರ ದ್ವಿತೀಯ ಹಾಗೂ ಭೀರಪ್ಪ ಹರಳೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.