ಭಾರತ ಪಾಕ್ ಅಘೋಷಿತ ಯುದ್ಧಕ್ಕೆ- ಕದನ ವಿರಾಮ ಎಂಬ ನಂಬಿಕೆ ದ್ರೋಹ

KannadaprabhaNewsNetwork |  
Published : May 14, 2025, 01:49 AM IST
31 | Kannada Prabha

ಸಾರಾಂಶ

ಅಮೆರಿಕಾ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಣೆ ಆದರೂ ಪಾಕಿಸ್ತಾನ ಇತಿಹಾಸದ ನಂಬಿಕೆ ದ್ರೋಹವನ್ನ ಮತ್ತೆ ಮುಂದುವರಿಸಿದೆ

ಜಮ್ಮು- ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡದಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಅಘೋಷಿತ ಯುದ್ಧ ಆರಂಭವಾಯಿತು. ಭಾರತ ಇದನ್ನ ಕೇವಲ ಭಯೋತ್ಪಾದಕರ ಮೇಲಿನ ದಾಳಿ ಎಂದು ವಿಶ್ವದ ಬಹಳಷ್ಟು ರಾಷ್ಟ್ರಗಳಿಗೆ ಮನವರಿಕೆ ಮಾಡುವ ಒಂದು ದೊಡ್ಡ ಪ್ರಯತ್ನ ಮಾಡಿತು.

ಮೂರೇ ದಿನಕ್ಕೆ ಪಾಕಿಸ್ತಾನ ಸುಮಾರು ಅರ್ಧದಷ್ಟು ತನ್ನ ಸೇನಾ ನಲೆಗಳನ್ನು ಹಾಗೂ ಭಯೋತ್ಪಾದಕರ ನೆಲೆಗಳನ್ನ ಕಳೆದುಕೊಂಡು ಇಂಟರ್ನ್ಯಾಷನಲ್ ಮೋನಿಟರಿಂಗ್ ಫಂಡ್ (ಐಎಂಎಫ್ ) ಮೊರೆ ಪಡೆದಿದ್ದಾಯಿತು. ಭಾರತ ಸೇನೆಯ ಬಾರಿ ಪರಾಕ್ರಮಿತ ಉತ್ತರಕ್ಕೆ ಅಮೆರಿಕಾ, ಚೀನಾ, ರಷ್ಯಾದ ಆಂತರ್ಯ ಕಂಪನ ಗರಿಷ್ಠ ಮಟ್ಟ ತಲುಪಿದೆ. ಪಾಕಿಸ್ತಾನ ಬಹುತೇಕ ಸಾವಿನ ಕದ ತಟ್ಟುವ ಈ ಹೀನಾಯ ಪರಿಸ್ಥಿತಿಯಲ್ಲಿ ಬಲೂಚಿಸ್ತಾನದ ಪ್ರತ್ಯೇಕತೆ ಹೋರಾಟ ಮುಗಿಲು ಮುಟ್ಟಿತು. ಸಾರ್ವಜನಿಕರು ಸರ್ಕಾರ ಹಾಗೂ ಸೇನೆಯ ಮೇಲೆ ಮುಗಿಬಿದ್ದರೂ. ಇಂಥ ತುರ್ತು ಸಂದರ್ಭದಲ್ಲಿ ನಂಬಿಕದ್ರೋಹಿ ಪಾಕಿಸ್ತಾನಕ್ಕೆ ಯುದ್ಧ ವಿರಾಮದ ಆತುರವಿದೆ ವಿನಹ ಭಾರತಕಲ್ಲ ಎಂಬುದು ವಿಶ್ವಕ್ಕೆ ಗೊತ್ತಿರುವ ನೈಜ ಸತ್ಯ.

ಅಮೆರಿಕಾ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಣೆ ಆದರೂ ಪಾಕಿಸ್ತಾನ ಇತಿಹಾಸದ ನಂಬಿಕೆ ದ್ರೋಹವನ್ನ ಮತ್ತೆ ಮುಂದುವರಿಸಿದೆ. ಇದಕ್ಕೆ ಸಾಕ್ಷಿ 1965 ಹಾಗೂ 1971ರ ಪಾಕ್- ಭಾರತ ಯುದ್ಧದಲ್ಲಿ ಅಂದು ನಡೆಸಿದ ನಂಬಿಕೆ ದ್ರೋಹ.

ಜಗತ್ತಿನ ಶಾಂತಿಯ ನಾಡು ಬಲಿಷ್ಠ ಭಾರತ ಇಷ್ಟೊಂದು ಆತುರದಲ್ಲಿ ಕದನ ವಿರಾಮ ಒಪ್ಪಿಕೊಳ್ಳುವ ಅಗತ್ಯತೆ ಇಲ್ಲ. ಕದನ ವಿರಾಮಕ್ಕೆ ಪಾಕಿಸ್ತಾನದ ಒಪ್ಪಿಗೆ ಇರಬಹುದು, ಹಾಗೆಯೇ ಅದಕ್ಕೆ ಅನಿವಾರ್ಯತೆ ಮತ್ತು ಪಾಕಿಸ್ತಾನದ ದುಸ್ಥಿತಿಯೇ ಮೂಲ ಕಾರಣ. ಭಾರತಕ್ಕೆ ಯುದ್ಧದ ಅನಿವಾರ್ಯತೆ ಮತ್ತು ಅಂತಹ ಮನಸ್ಥಿತಿ ಭರತ ಖಂಡದ ಮಣ್ಣಿಗೆ ಪೂರ್ವದಿಂದಲೂ ವಗ್ಗಿ ಬಂದಿರುವುದಿಲ್ಲ.

ಸ್ವಾತಂತ್ರ್ಯದ ಉತ್ತರದಿಂದಲೂ ಭಾರತ- ಪಾಕ್ ನಡುವಿನ ಕದನ ಹಾಗೂ ಭಾರತ ಚೀನಾ ನಡುವಿನ ಕದನ ನಿರಂತರವಾಗಿ ಭಾರತದ ಸಾರ್ವಭೌಮತ್ವ, ಸಮಗ್ರ ಹಾಗೂ ಸುಭದ್ರ ಸರ್ಕಾರದ ಒಗ್ಗಟ್ಟಿನ ಮಂತ್ರವೇ ವಿನಃ ದೇಶದ ಆಂತರಿಕ ರಾಜಕೀಯ ಲಾಭ ನಷ್ಟಗಳ ಲೆಕ್ಕಾಚಾರವಲ್ಲ ಹಾಗೂ ಚುನಾವಣೆಯ ದೂರದೃಷ್ಟಿಯ ವಿಷಯಾಂತರವು ಆಗಬಾರದು ಎಂಬುದೇ ದೇಶದ ಸಮಸ್ತ ನಾಗರಿಕರ ಅಂತ ಕರಣದ ದೇಶಭಿಮಾನ.

- ಡಾ.ಬಿ.ಜೆ. ವಿಜಯಕುಮಾರ್, ಜಿಲ್ಲಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ, ಮೈಸೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ