ಯಾವುದೇ ಹಡಗಿನಲ್ಲಿ ಬಂದರೂ ಪಾಕಿಗಳು ಈ ನೆಲದ ಮೇಲೆ ಕಾಲಿಡುವಂತಿಲ್ಲ

KannadaprabhaNewsNetwork |  
Published : May 08, 2025, 12:32 AM IST
ಕಾರವಾರ ಬಂದರು | Kannada Prabha

ಸಾರಾಂಶ

ಭಾರತದ ಬಂದರುಗಳಲ್ಲಿ ಪಾಕಿಸ್ತಾನದ ಹಡಗುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕಾರವಾರ: ಭಾರತದ ಬಂದರುಗಳಲ್ಲಿ ಪಾಕಿಸ್ತಾನದ ಹಡಗುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಬೇರೆ ದೇಶದ ಹಡಗುಗಳಲ್ಲಿ ಪಾಕಿಸ್ತಾನದ ಸಿಬ್ಬಂದಿ ಬಂದರೆ ಏನು ಮಾಡೋದು? ಏನಿಲ್ಲ. ಅವರು ಭಾರತದ ನೆಲದ ಮೇಲೆ ಕಾಲಿಡುವಂತೆಯೇ ಇಲ್ಲ.

ಹಾಗಂತ ಇದೇನೂ ಹೊಸದಾಗಿ ಜಾರಿಯಾದ ಅಂದರೆ ಪಹಲ್ಗಾಮ್ ದಾಳಿಯ ತರುವಾಯ ಜಾರಿಯಾದ ಕ್ರಮ ಅಲ್ಲ. ಹಿಂದಿನಿಂದಲೂ ಇದೆ.

ಪಹಲ್ಗಾಮ್ ದಾಳಿಯ ತರುವಾಯ ಪಾಕಿಸ್ತಾನದ ಹಡಗುಗಳಿಗೆ ಭಾರತದ ಯಾವುದೇ ಬಂದರುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಒಂದು ವೇಳೆ ಪಾಕಿಸ್ತಾನದ ಸಿಬ್ಬಂದಿ ಸಿಂಗಪುರ, ಮಲೇಷ್ಯಾ ಅಥವಾ ಯಾವುದೇ ದೇಶದ ಹಡಗಿನಲ್ಲಿ ನಮ್ಮ ಬಂದರಿಗೆ ಬಂದರೂ ಅವರು ಹಡಗಿನಿಂದ ಕೆಳಕ್ಕಿಳಿಯುವಂತಿಲ್ಲ. ಹಡಗಿನಲ್ಲೇ ಇರಬೇಕು. ಪಾಕ್ ಪ್ರಜೆಗಳ ಬಗ್ಗೆ ಅಷ್ಟು ಕಟ್ಟುನಿಟ್ಟಿನ ಕ್ರಮವನ್ನು ಬಂದರು ಇಲಾಖೆ ಹಿಂದಿನಿಂದಲೂ ಅನುಸರಿಸುತ್ತಿದೆ.

ಬಂದರಿಗೆ ಬರುವ ಹಡಗುಗಳ ಮೇಲೆ ನಿಗಾ ಇಡುವಂತೆ ಹಾಗೂ ಹಡಗಿನಲ್ಲಿ ಬರುವ ಸಿಬ್ಬಂದಿ ಬಗ್ಗೆ ಜಾಗರೂಕತೆಯಿಂದ ಇರುವಂತೆ ಇಲ್ಲಿನ ವಾಣಿಜ್ಯ ಬಂದರಿನ ಭದ್ರತಾ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಮೀನುಗಾರಿಕಾ ಬೋಟಿನಲ್ಲಿ ಅಪರಿಚಿತರು ನುಸುಳಿ ಬರಬಹುದು ಎಂದು ಕರಾವಳಿ ಕಾವಲು ಪಡೆ ಮೀನುಗಾರಿಕಾ ಬೋಟ್ ನವರಿಗೆ ಜಾಗರೂಕತೆಯಿಂದ ಇರುವಂತೆ ಸೂಚಿಸಿದೆ. ಪರಿಶೀಲನೆಯನ್ನೂ ನಡೆಸಿದೆ.

ಕೈಗಾ ಹಾಗೂ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಅವರದೇ ಆದ ಭದ್ರತಾ ಸಿಬ್ಬಂದಿ ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.

ಪಾಕಿಸ್ತಾನಿಯರು ಯಾವುದೇ ದೇಶದ ಹಡಗಿನಲ್ಲಿ ಬಂದರೂ ಅವರಿಗೆ ಹಡಗಿನಿಂದ ಕೆಳಕ್ಕಿಳಿಯಲು ಅವಕಾಶ ಇಲ್ಲ. ಪಾಕ್ ಹಡಗುಗಳಂತೂ ಈಗ ಬಂದರುಗಳಿಗೆ ಪ್ರವೇಶಿಸುವಂತಿಲ್ಲ ಎನ್ನುತ್ತಾರೆ ಬಂದರು ಅಧಿಕಾರಿ ರಾಜಕುಮಾರ ಹೆಡೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು