ಸರ್ವ ಜನಾಂಗದ ಶಾಂತಿಯ ತೋಟ ಪಾಲನಹಳ್ಳಿ ಮಠ

KannadaprabhaNewsNetwork |  
Published : Feb 19, 2026, 01:30 AM IST
ಪೋಟೋ 7 : ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಹೋಬಳಿಯ ಪಾಲನಹಳ್ಳಿ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಉದ್ಘಾಟಿಸಿದರು | Kannada Prabha

ಸಾರಾಂಶ

ದಾಬಸ್‍ಪೇಟೆ: ರಾಜ್ಯದಲ್ಲಿ ಸಣ್ಣ ಸಣ್ಣ ಹಿಂದುಳಿದ ಸಾವಿರಾರು ಮಠಗಳಿದ್ದು, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ಅಂತಹ ಮಠಗಳಲ್ಲಿ ಪಾಲನಹಳ್ಳಿ ಮಠವೂ ಒಂದಾಗಿದ್ದು, ಇಡೀ ಭಕ್ತ ಸಮೂಹ ಒಗ್ಗೂಡಿ ಮಠವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು

ದಾಬಸ್‍ಪೇಟೆ: ರಾಜ್ಯದಲ್ಲಿ ಸಣ್ಣ ಸಣ್ಣ ಹಿಂದುಳಿದ ಸಾವಿರಾರು ಮಠಗಳಿದ್ದು, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ಅಂತಹ ಮಠಗಳಲ್ಲಿ ಪಾಲನಹಳ್ಳಿ ಮಠವೂ ಒಂದಾಗಿದ್ದು, ಇಡೀ ಭಕ್ತ ಸಮೂಹ ಒಗ್ಗೂಡಿ ಮಠವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲನಹಳ್ಳಿ ಮಠ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ತ್ರಿವಿಧ ದಾಸೋಹ ಕಾರ್ಯವನ್ನು ಪಾಲನಹಳ್ಳಿ ಮಠ ಯಶಸ್ವಿಯಾಗಿ ಮಾಡಿದೆ. ಶ್ರದ್ದೆ, ಶರಣಾಗತಿ, ಆಕಾಂಕ್ಷೆ ರೂಢಿಸಿಕೊಂಡರೆ ಮುಕ್ತಿ ಸಾಧ್ಯ. ಪಾಲನಹಳ್ಳಿ ಮಠ ಹೆಮ್ಮರವಾಗಿ ಬೆಳೆಯುತ್ತಿದೆ. ಪಾಲನಹಳ್ಳಿ ಮಠಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಬಹಳ ವರ್ಷದಿಂದ ಮಠದ ಶಿಷ್ಯನಾಗಿ ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಮಠಗಳು ನಮ್ಮ ಧಾರ್ಮಿಕ ಕೇಂದ್ರಗಳಾಗಿವೆ. ಮನಸ್ಸಿನ ನೆಮ್ಮದಿಗಾಗಿ ದೇವಾಲಯ, ಮಠಗಳಿಗೆ ಭೇಟಿ ನೀಡುತ್ತೇವೆ. ಸರ್ಕಾರದಿಂದ ಪಾಲನಹಳ್ಳಿ ಮಠದ ದಾಸೋಹ ಭವನಕ್ಕೆ ಈಗಾಗಲೇ ಒಂದು ಕೋಟಿ ರೂ ಬಿಡುಗಡೆಗೊಳಿಸಿದ್ದೇನೆ. ಶ್ರೀಗಳ ಮನವಿಯಂತೆ ಮಠದ ಆವರಣಕ್ಕೆ ರಸ್ತೆ ಹಾಗೂ ಮುಂಭಾಗ ಕಾಂಕ್ರೀಟ್ ಕಾಮಗಾರಿಗೆ ಒಂದು ಕೋಟಿ ರೂಗಳ ಅನುದಾನದ ಶೀಘ್ರದಲ್ಲೇ ಬಿಡುಗಡೆಗೊಳಿಸುತ್ತೇನೆ. ಅತೀ ಹೆಚ್ಚು ಜನಸಂಖ್ಯೆ ಭಕ್ತರು ಸೇರುವ ಜಾಗ ಪಾಲನಹಳ್ಳಿ ಮಠದಲ್ಲಿ, ಶ್ರೀಗಳು ಬಹುಮುಖ ಪ್ರತಿಭೆಯಾಗಿ ಮಠದಲ್ಲಿ ಬಹುಮುಖಿ ಸಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆಚಾರ ವಿಚಾರ ಧಾರ್ಮಿಕ ಚಿಂತನೆಗಳು ಇಂದಿನ ಯುವಜನತೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.

ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಮಾತನಾಡಿ, ನಮ್ಮ ಮಠ ದಿನೇದಿನೇ ಬೆಳೆಯುತ್ತಿರುವುದು ಭಕ್ತರ ಸಹಕಾರದಿಂದ. ಮುಂದಿನ ದಿನಗಳಲ್ಲಿ, ಇನ್ನಷ್ಟು ಸಮಾಜಮುಖಿ ಕೆಲಸ ಕೈಗೊಳ್ಳುತ್ತೇವೆ. ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬ ಭಕ್ತರಿಗೂ ಮಠದ ಆಡಳಿತ ಮಂಡಳಿಯ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸೋಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಶರ್ಮಾ, ಬಿಟ್ಟಸಂದ್ರ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗರಂಗಯ್ಯ, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಜಿಲ್ಲಾಧ್ಯಕ್ಷ ಟಗರುಶಿವು ಇತರರಿದ್ದರು.

ಪೋಟೋ 7 :

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸರ್ಕಾರದಲ್ಲೇ ಹೆಚ್ಚು ಕಮಿಷನ್‌ ವಸೂಲಿ: ಗುತ್ತಿಗೆದಾರರ ಸಂಘದ ಮಂಜುನಾಥ
ರಾಗಿ ಬೇಡಿಕೆ, ಬೆಲೆ ಹೆಚ್ಚಾಗಲಿದೆ: ಸುರೇಶ್‌ಗೌಡ ವಿಶ್ವಾಸ