ಅಂತಾರಾಷ್ಟ್ರೀಯ ಬೌದ್ಧ ತ್ರಿಪಿಟಕ ಪಾಲಿ ಪಠಣ

KannadaprabhaNewsNetwork |  
Published : Feb 17, 2025, 12:36 AM IST
37 | Kannada Prabha

ಸಾರಾಂಶ

ತ್ರಿಪಿಟಕ ಪಠಣವು 2600 ವರ್ಷಗಳಷ್ಟು ಹಿಂದಿನ ಬುದ್ಧನ ಕಾಲದ ಸಂಪ್ರದಾಯವಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಅಂತಾರಾಷ್ಟ್ರೀಯ ಬೌದ್ಧ ತ್ರಿಪಿಟಕ ಪಾಲಿ ಪಠಣ ಕಾರ್ಯಕ್ರಮವನ್ನು ನಗರದ ಮಹಾಬೋಧಿ ಶಾಲೆಯಲ್ಲಿ ಇತ್ತೀಚೆಗೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ 10 ದೇಶಗಳ 120 ಬೌದ್ಧ ಸನ್ಯಾಸಿಗಳು ಬುದ್ಧನ ಪವಿತ್ರ ಬೋಧನೆಗಳಾದ ತ್ರಿಪಿಟಕವನ್ನು ಪಠಿಸಿದರು.

ಮಹಾಬೋಧಿ ಶಾಲೆಯ ಕಾರ್ಯನಿರ್ವಾಹಕ ಅಧಿಕಾರಿ ವಾಂಗ್ಡಸ್ ಜ್ಯೋತಿ ಮಾತನಾಡಿ, ತ್ರಿಪಿಟಕ ಪಠಣವು 2600 ವರ್ಷಗಳಷ್ಟು ಹಿಂದಿನ ಬುದ್ಧನ ಕಾಲದ ಸಂಪ್ರದಾಯವಾಗಿದೆ. ಭಾರತದಲ್ಲಿ ಈ ಪವಿತ್ರ ಆಚರಣೆಯನ್ನು ವೀಕ್ಷಿಸಲು ಮತ್ತು ಮುಂದುವರಿಸಲು ನಾವು ಅದೃಷ್ಟಶಾಲಿಗಳಾಗಿದ್ದೇವೆ ಎಂದು ತಿಳಿಸಿದರು. ಡಿಸೆಂಬರ್ 2 ರಂದು ಬೋಧಗಯಾದಲ್ಲಿ ತ್ರಿಪಿಟಕ ಪಾಲಿ ಪಠಣ ಪ್ರಾರಂಭವಾಯಿತು. ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಪಠಣವನ್ನು ಪೂರ್ಣಗೊಳಿಸಿದ ನಂತರ, ಸನ್ಯಾಸಿಗಳು ಮತ್ತು ಭಕ್ತರು ಫೆ.14ರಂದು ಮೈಸೂರಿಗೆ ಆಗಮಿಸಿದರು. ಬೆಂಗಳೂರಿನ ಮಹಾ ಬೋಧಿ ಸೊಸೈಟಿಯ ಸಹಯೋಗದೊಂದಿಗೆ ಮಹಾಬೋಧಿ ಶಾಲೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ