ಪಾಲಿಬೆಟ್ಟ: 100 ದಿನಗಳ ಕ್ಷಯರೋಗ ಮುಕ್ತ ಅಭಿಯಾನ ಶಿಬಿರ

KannadaprabhaNewsNetwork |  
Published : Jun 25, 2026, 02:30 AM IST
ಕ್ಷಯರೋಗ ಮುಕ್ತ ಅಭಿಯಾನ ಶಿಬಿರ | Kannada Prabha

ಸಾರಾಂಶ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದಿಂದ ಪಾಲಿಬೆಟ್ಟ ಟಾಟಾ ಕಂಪನಿ ಲಿಮಿಟೆಡ್ ಪಾಲಿಬೆಟ್ಟ ಕ್ಯಾಂಪೇನ್ ನಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ 100 ದಿನಗಳ ಕ್ಷಯ ಮುಕ್ತ ಅಭಿಯಾನ ಸಂಬಂಧ ಮಂಗಳವಾರ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದಿಂದ ಪಾಲಿಬೆಟ್ಟ ಟಾಟಾ ಕಂಪನಿ ಲಿಮಿಟೆಡ್ ಪಾಲಿಬೆಟ್ಟ ಕ್ಯಾಂಪೇನ್ ನಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ 100 ದಿನಗಳ ಕ್ಷಯ ಮುಕ್ತ ಅಭಿಯಾನ ಸಂಬಂಧ ಮಂಗಳವಾರ ಶಿಬಿರ ನಡೆಯಿತು.

ಕ್ಷಯ ಗುರುತಿಸುವ ಸಂಬಂಧ ಕಫ ಸಂಗ್ರಹಣೆ ಹಾಗೂ ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಅಂದರೆ ಕ್ಷಯ ರೋಗಾಣುಗಳು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಹೊರಬಂದ ರೋಗಾಣುಗಳು ಗಾಳಿಯ ಮುಖಾಂತರ ಆರೋಗ್ಯವಂತ ವ್ಯಕ್ತಿಯ ಮೂಗು ಮತ್ತು ಬಾಯಿಯ ಮುಖಾಂತರ ಶ್ವಾಸಕೋಶ ಪ್ರವೇಶ ಮಾಡಿ ಸೋಂಕುಂಟು ಮಾಡುತ್ತದೆ. ಸೋಂಕನ್ನು ಆರಂಭಿಕ ಹಂತದಲ್ಲಿ ಗುರುತಿಸುವ ಒಂದು ಸುಲಭ ವಿಧಾನ ಹಾಗೂ ಸೋಂಕುಳ್ಳ ವ್ಯಕ್ತಿ ಆರೋಗ್ಯ ಸಂಸ್ಥೆಗೆ ಆಗಮಿಸದೆ ವ್ಯಕ್ತಿಯ ವಾಸಸ್ಥಳ ಅಥವಾ ಅನುಕೂಲವಾಗುವ ನಿಗದಿತ ಜಾಗದಲ್ಲಿ ಎಕ್ಸರೇ ಮಾಡಿ ಕ್ಷಯ ಗುರುತಿಸುವ ವಿಧಾನವಾಗಿದೆ. ಶಿಬಿರದಲ್ಲಿ ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಸಿಕ್ಕಲ್ ಸೆಲ್ ಪರೀಕ್ಷೆ ಮಾಡಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ಪ ಹಾಗೂ ಟಾಟಾ ಕಂಪನಿಯ ಆರ್‌ಐಎಚ್‍ಪಿ ವೈದ್ಯಾಧಿಕಾರಿಗಳಾದ ಡಾ. ಚಂದ್ರು ಅವರು ಎಲ್ಲ ರಾಷ್ಟ್ರೀಯ ಕಾರ್ಯಕ್ರಮಗಳ ಸಂಬಂಧ ಹಾಗೂ ಕ್ಷಯ ರೋಗ ಕಾರ್ಯಕ್ರಮ 100 ದಿನಗಳ ಅಭಿಯಾನ ಸಂಬಂಧ ಮಾಹಿತಿ ನೀಡಿದರು.

ಟಾಟಾ ಕಂಪನಿ ಲಿಮಿಟೆಡ್ ನ ವರ್ಷಿಣಿ ಹಾಗೂ ಎನ್‍ಟಿಇಪಿ ಸಿಬ್ಬಂದಿ ನವೀನ್ ಶ್ರೀಧರ್ ಲೋಕೇಶ್ ಹಾಗೂ ಜ್ಯೋತಿ, ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಆಶಾ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಯೋಗದಿನಾಚರಣೆ
ಡಾ. ಮುಖರ್ಜಿ ಆದರ್ಶಗಳು ಪ್ರೇರಣಾದಾಯಿ: ದಿನಕರ ಶೆಟ್ಟಿ