ಪ್ರಣವಾನಂದ ಶ್ರೀಗಳ ಪಾದಯಾತ್ರೆಯ ಕರಪತ್ರ ಬಿಡುಗಡೆ

KannadaprabhaNewsNetwork |  
Published : Nov 23, 2025, 03:00 AM IST
ಶ್ರೀ ಪ್ರಣವಾನಂದ ಸ್ವಾಮೀಜಿ ಅವರ ಪಾದಯಾತ್ರೆ ಕಾರ್ಯಕ್ರಮದ ಕರಪತ್ರವನ್ನು ದಾಮೋದರ ಜಿ. ನಾಯ್ಕ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಈಡಿಗ ಸಮಾಜದ 18 ಬೇಡಿಕೆ ಮುಂದಿಟ್ಟು ಕಲಬುರಗಿಯಿಂದ ಬೆಂಗಳೂರಿಗೆ 700 ಕಿಮೀ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಜ. 6ರಿಂದ ನಡೆಸಲಿದ್ದು, ರಾಷ್ಟ್ರೀಯ ಈಡಿಗ ಮಹಾಮಂಡಳಿ ತಾಲೂಕು ಘಟಕದಿಂದ ಕರಪತ್ರ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಅಂಕೋಲಾ

ಈಡಿಗ ಸಮಾಜದ 18 ಬೇಡಿಕೆ ಮುಂದಿಟ್ಟು ಕಲಬುರಗಿಯಿಂದ ಬೆಂಗಳೂರಿಗೆ 700 ಕಿಮೀ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಜ. 6ರಿಂದ ನಡೆಸಲಿದ್ದು, ರಾಷ್ಟ್ರೀಯ ಈಡಿಗ ಮಹಾಮಂಡಳಿ ತಾಲೂಕು ಘಟಕದಿಂದ ಕರಪತ್ರ ಬಿಡುಗಡೆಗೊಳಿಸಲಾಯಿತು.

ಬುಧವಾರ ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿ ನಡೆದ ಪುರ್ವಭಾವಿ ಸಭೆಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ದಾಮೋದರ ಜಿ. ನಾಯ್ಕ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ₹500 ಕೋಟಿ ಬಿಡುಗಡೆ ಮಾಡಬೇಕು. ಕುಲಕಸುಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತರಿಗೆ 5 ಎಕರೆ ಜಮೀನು ಪ್ರತಿ ಕುಟುಂಬಕ್ಕೆ ಮಂಜೂರು ಮಾಡಬೇಕು. ಶರಣರಾದ ಹೆಂಡದ ಮಾರಯ್ಯ ಜಯಂತಿಯನ್ನು ಸರಕಾರ ಆಚರಿಸಬೇಕು. ಹೀಗೆ 18 ಬೇಡಿಕೆಗಳನ್ನು ಇಟ್ಟು ಪಾದಯಾತ್ರೆ ಆರಂಭಿಸಲಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಈ ಸಂದರ್ಭ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಜಿಲ್ಲಾ ಉಪಾಧ್ಯಕ್ಷ ಏಕನಾಥ ನಾಯ್ಕ ಮಾತನಾಡಿದರು. ತಾಲೂಕು ಉಪಾಧ್ಯಕ್ಷ ರಮೇಶ ಎಸ್. ನಾಯ್ಕ ತೆಂಕಣಕೇರಿ, ಶ್ರೀಪಾದ ಟಿ. ನಾಯ್ಕ, ಅಶೋಕ ಡಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ ಉಪಸ್ಥಿತರಿದ್ದರು.

ದೇಶದ ಪ್ರಗತಿಗೆ ಕಾರಣಿಕರ್ತರಾಗಿ-ರಮಾನಂದ ನಾಯಕ:

ಮಕ್ಕಳು ಉಳಿತಾಯದ ಮಾರ್ಗವನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಂಡು ಈ ದೇಶದ ಪ್ರಗತಿಗೆ ಕಾರಣಿಕರ್ತರಾಗಬೇಕು. ಜೊತೆಗೆ ಒಳ್ಳೆಯ ಚಟುವಟಿಕೆಗಳೊಂದಿಗೆ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ ಹೇಳಿದರು.ಅಂಕೋಲಾದ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂಚಯಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಮುಖ ಬೊಮ್ಮಯ್ಯ ಬೀರಣ್ಣ ಗಾಂವಕರ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಾಂತರಾಮ ಎನ್. ನಾಯಕ, ಹಿಚಕಡ ವೇದಿಕೆಯಲ್ಲಿದ್ದರು.

ಮುಖ್ಯಾಧ್ಯಾಪಕ ಎನ್.ವಿ. ರಾಠೋಡ ಸ್ವಾಗತಿಸಿದರು. ಸಂಚಯಿಕಾ ವರದಿಯನ್ನು ವಿದ್ಯಾರ್ಥಿನಿ ಸಿಂಚನಾ ಶಂಕರ ಗೌಡ ವಾಚಿಸಿದರು. ವಿದ್ಯಾರ್ಥಿನಿ ಸೃಷ್ಠಿ ಸಂತೋಷ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಬಹುಮಾನ ಪಡೆದವರ ಯಾದಿಯನ್ನು ಪ್ರೀತಿ ಮಂಜುನಾಥ ಗೌಡ ಹಾಗೂ ನಾಗವೇಣಿ ತುಕಾರಾಮ ಗೌಡ ಪ್ರಕಟಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಕೀರ್ತನಾ ರಾಜು ಆಗೇರ ವಂದಿಸಿದರು.

PREV

Recommended Stories

ಸಾಮಾಜಿಕ ಸಮಸ್ಯೆ ಬಗ್ಗೆ ಕವಿತೆ ಮೂಡಿ ಬರಲಿ
ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ