ಪಂಚ ಗ್ಯಾರಂಟಿ ಯಶಸ್ಸು ದೇಶಕ್ಕೇ ಮಾದರಿ: ಶಾಂತನಗೌಡ

KannadaprabhaNewsNetwork |  
Published : Sep 28, 2026, 01:45 AM IST
26ಎಎಚ್.ಎಲ್.ಐ1 ತಾಲೂಕಿನ ಕೂಲಂಬಿ ಗ್ರಾಮದ   ಶ್ರೀ ಗದ್ದಿಗೇಶ್ವರ ಕಲ್ಯಾಣ ಮಂದಿರದಲ್ಲಿ ಶನಿವಾರ ಜಿಲ್ಲಾ ಮತ್ತು ತಾಲೂಕು ಅಡಳಿತ ಹಮ್ಮಿಕೊಂಡಿದ್ದ ಸಾಸ್ವೇಹಳ್ಳಿ -2 ಹೋಬಳಿ ಮಟ್ಟದ ಪ್ರಜಾ ಸೇವಾ ಅಂದೋಲನ ಸಭೆಯನ್ನು ಶಾಸಕ ಡಿ.ಜಿ. ಶಾಂತನಗೌಡ  ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆಗೊಳಿಸಿ ಮಾತನಾಡಿದರು | Kannada Prabha

ಸಾರಾಂಶ

Panch Guarantee Success is a model for the country: Shantanagowda

- ಕೂಲಂಬಿಯಲ್ಲಿ ಸಾಸ್ವೇಹಳ್ಳಿ-2 ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಗೆ ಚಾಲನೆಕನ್ನಡಪ್ರಭ ವಾರ್ತೆ ಹೊನ್ನಾಳಿ

ಜನಪರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗದ್ದಿಗೇಶ್ವರ ಕಲ್ಯಾಣ ಮಂದಿರದಲ್ಲಿ ಶನಿವಾರ ಜಿಲ್ಲಾ ಮತ್ತು ತಾಲೂಕು ಅಡಳಿತ ಹಮ್ಮಿಕೊಂಡಿದ್ದ ಸಾಸ್ವೇಹಳ್ಳಿ-2 ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆಗೊಳಿಸಿ ಅವರು ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ವರಿಷ್ಠ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಜನತೆಗೆ ಘೋಷಣೆ ಮಾಡಿದಂತೆ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಬಿಟ್ಟಿ ಗ್ಯಾರಂಟಿ ಎಂದು ಟೀಕಿಸಿದವರೇ ಇಂದು ತಮ್ಮ ರಾಜ್ಯಗಳಲ್ಲೂ ಕರ್ನಾಟಕದ ಪಂಚ ಗ್ಯಾರಂಟಿ ಯೋಜನೆಗಳ ಜಾರಿಗೆ ತರುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಧ್ಯೇಯವಾಕ್ಯದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ರಾಜ್ಯಮಟ್ಟ, ತಾಲೂಕುಮಟ್ಟ, ಹೋಬಳಿ ಮಟ್ಟದಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಹಂತಗಳಲ್ಲಿ ಕೂಡ ನಡೆಸಲಾಗುವುದು ಎಂದು ಹೇಳಿದರು.

2028ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ:

ಪ್ರಸ್ತುತ ಸರ್ಕಾರ ಪ್ರಜಾ ಸೇವೆಗಾಗಿ ಹಾಗೂ ಜನರ ಸಂಕಷ್ಟಗಳನ್ನು ಅವರ ಮನೆ ಬಾಗಿನಲ್ಲಿಯೇ ಪರಿಹರಿಸುವ ಉದ್ದೇಶದಿಂದ ಪ್ರಜಾ ಸೇವಾ ಅಂದೋಲನ ಹಾಗೂ ಪಂಚಗ್ಯಾರಂಟಿ ಯೋಜನೆಗಳಂತಹ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಸಚಿವರಿಂದ ಹಿಡಿದ ಶಾಸಕರವರೆಗೂ ಮುಂದಿನ ಮಾರ್ಚ್ 31, 2028 ರವರೆಗೆ ಕೂಡ ಕಾರ್ಯಕ್ರಮಗಳ ವೇಳಾಪಟ್ಟಿಯೊಂದಿಗೆ ಜವಾಬ್ದಾರಿಗಳನ್ನು ಹಂಚಲಾಗಿದೆ. ಒಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸದಾ ಸಾಮಾನ್ಯ ಜನರೊಂದಿಗೆ ಇರಬೇಕು ಎನ್ನುವುದೇ ಇದರ ಉದ್ದೇಶ ಎಂದು ಹೇಳಿದರು.

ತಹಸೀಲ್ದಾರ್ ಕವಿರಾಜ್ ಮಾತನಾಡಿ, ಪ್ರಜಾಸೇವಾ ಆಂದೋಲದಲ್ಲಿ ಸಾಮಾನ್ಯವಾಗಿ ನಿವೇಶನ, ಮನೆಗಳು, ಪಹಣಿ ತಿದ್ದುಪಡಿ, ಪೋಡಿ, ವಿವಿಧ ಪಿಂಚಣಿಗಳ ಸೌಲಭ್ಯಕ್ಕಾಗಿಯೇ ಹೆಚ್ಚಿನ ಅರ್ಜಿಗಳು ಸ್ವೀಕರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗ್ರೇಡ್-2 ಸುರೇಶ್, ಶಿರಸ್ತೇದಾರ ಮಂಜುನಾಥ, ಉಪ ತಹಸೀಲ್ದಾರ್ ಮಂಜುನಾಥ ಇಂಗಳಗೊಂದಿ, ರವಿ, ಗದ್ದಿಗೇಶ್ವರ ಟ್ರಸ್ಟ್ ಅಧ್ಯಕ್ಷ ಸೋಮಶೇಖರಪ್ಪ, ಸದಸ್ಯ ಹೇಮಂತರಾಜ್, ಎಡಿಎಲ್ಆರ್ ಪ್ರಭು, ಗ್ರಾ.ಪಂ. ಆಡಳಿತಾಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ಪಿಡಿಒ ರೇಣುಕಾ ಪ್ರಸಾದ್, ಟಿಎಪಿಸಿಎಂಎಸ್.ಅಧ್ಯಕ್ಷ ರೇವಣಸಿದ್ದಪ್ಪ, ಮುಖಂಡ ಪ್ರಭಾಕರ, ಪಶುವೈದ್ಯ ಇಲಾಖಾಧಿಕಾರಿ ಡಾ.ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಇದ್ದರು.

- - -

-26ಎಎಚ್.ಎಲ್.ಐ1:

ಕೂಲಂಬಿಯಲ್ಲಿ ಶನಿವಾರ ಸಾಸ್ವೇಹಳ್ಳಿ-2 ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಶಾಸಕ ಡಿ.ಜಿ. ಶಾಂತನಗೌಡ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರಿರಂಗನ್ ವರದಿಯ ಸಮಗ್ರ ಚರ್ಚೆಯಾಗಲಿ: ಮಾರುತಿ ಗುರೂಜಿ
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ