ಉಡುಪಿ: ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಪಂಚಕರ್ಮ ವಿಭಾಗದ ವತಿಯಿಂದ ವೈದ್ಯರಿಗೆ ಪಂಚಕರ್ಮ ಪ್ರಾಯೋಗಿಕ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಉಡುಪಿ: ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಪಂಚಕರ್ಮ ವಿಭಾಗದ ವತಿಯಿಂದ ವೈದ್ಯರಿಗೆ ಪಂಚಕರ್ಮ ಪ್ರಾಯೋಗಿಕ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ. ವಿ. ಶಿಬಿರ ಉದ್ಘಾಟಿಸಿ, ಇಂತಹ ತರಬೇತಿಗಳು ಸಾಮಾನ್ಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ನಡೆಯುತ್ತವೆ. ಆದರೆ ಎಸ್‌ಡಿಎಂ ಸಂಸ್ಥೆಯಲ್ಲಿ ಅದೇ ಮಟ್ಟದ ಮಾನದಂಡ ಮತ್ತು ಗುಣಮಟ್ಟದ ತರಬೇತಿಯನ್ನು ಸಾಮಾನ್ಯ ಅಧಿವೇಶನಗಳಲ್ಲಿಯೂ ನೀಡುತ್ತಿದೆ ಎಂದರು.ಪಂಚಕರ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ನಿರಂಜನ್ ರಾವ್ ಪ್ರಾಸ್ತಾವಿಕ ಭಾಷಣ ಮಾಡಿದರು. ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಎಸ್, ಉಪವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಎಸ್. ಎಂ. ಉಪಸ್ಥಿತರಿದ್ದರು. ಪಂಚಕರ್ಮ ವಿಭಾಗದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಕಂಠಿ ಅವರು ಸ್ವಾಗತಿಸಿ, ಸ್ನಾತಕೋತರ ವಿಭಾಗದ ವಿದ್ಯಾರ್ಥಿನಿ ಡಾ. ಸುಶ್ಮಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಶಿಬಿರಾರ್ಥಿಗಳಾಗಿ 30 ಮಂದಿ ವೈದ್ಯರು ಭಾಗವಹಿಸಿದ್ದರು. ಶಿಬಿರದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ನಿಶಾಂತ್ ಪೈ, ಆಯುರ್ ಪ್ರೋ ಚಿಕಿತ್ಸಾಲಯದ ಡಾ. ಅಂಬಿಕಾ ನಾಯಕ್, ಪಂಚಕರ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ನಿರಂಜನ್ ರಾವ್, ಪ್ರಾಧ್ಯಾಪಕಿಯರಾದ ಡಾ. ರಾಜಲಕ್ಷ್ಮಿ ಎಂ. ಜಿ., ಡಾ. ಪದ್ಮಕಿರಣ್ ಸಿ. ಸಹಪ್ರಾಧ್ಯಾಪಕರಾದ ಡಾ. ಮಂಜುನಾಥ ಕಂಠಿ ಹಾಗೂ ಡಾ.ತುಳಸಿ ಟಿ. ವಿ. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.