ಜೀವನದಲ್ಲಿ ಪಂಚಮಹಾಯಜ್ಞಗಳು ಪ್ರತಿಯೊಬ್ಬರಿಗೂ ಅಗತ್ಯ

KannadaprabhaNewsNetwork | Published : Dec 23, 2024 1:02 AM

ಸಾರಾಂಶ

ಹುಮನಾಬಾದ್‌ ಪಟ್ಟಣದ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ ದ್ವಿಶತಮಾನೋತ್ಸವ ಸ್ಮರಣಾರ್ಥ ಮಾನವ ಕಲ್ಯಾಣಕ್ಕಾಗಿ ಯಜ್ಞ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಜೀವನ ಪರ್ಯಂತ ಬ್ರಹ್ಮ, ಪಿತ್ರ, ದೈವ, ಮನುಷ್ಯ, ಭೂತ ಈ ಪಂಚಮಹಾಯಜ್ಞಗಳು ಪ್ರತಿಯೊಬ್ಬ ಕುಟುಂಬದವರು ನಿತ್ಯವೂ ಮಾಡಲೇಬೇಕಾದ ಕರ್ಮ ಎಂದು ಮಾಣಿಕನಗರ ಮಾಣಿಕಪ್ರಭು ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭುಗಳು ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಹುಮನಾಬಾದ್‌ ಆರ್ಯ ಸಮಾಜ ಹಾಗೂ ರಾಜರಾಜೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯ ಸಹಯೋಗದಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ ದ್ವಿಶತಮಾನೋತ್ಸವ ಸ್ಮರಣಾರ್ಥ ಐವತ್ತು ವೈದಿಕ ಯಜ್ಞ ಕುಂಡಗಳೊಂದಿಗೆ 200 ಕುಟುಂಬಸ್ಥರಿಂದ ಮಾನವ ಕಲ್ಯಾಣಕ್ಕಾಗಿ ಯಜ್ಞ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬ್ರಹ್ಮ ಅಂದರೆ ಗ್ರಂಥಗಳ ಅಧ್ಯಾನ, ಪಿತೃಯಜ್ಞ ತಂದೆ ತಾಯಿ ಸೇವೆ, ದಾನ ಇತ್ಯಾ, ದೈವಯಜ್ಞ ನದಿ, ಪರ್ವತ, ಗೀಡಗಳು ಸೇರಿದಂತೆ ಪ್ರಕೃತಿಯ ಪೂಜೆ, ಮನುಷ್ಯಜ್ಞ ನಮ್ಮ ಕರ್ತವ್ಯ ನಮ್ಮ ಸುತ್ತ ಮುತ್ತ ಯಾರೂ ಉಪವಾಸ ಇರದ ಹಾಗೆ ನೋಡಿಕೊಳ್ಳಬೇಕು.

ಭೂತ ಅಂದರೆ ಮನೆಯ ಸುತ್ತಲು ಇರುವ ಪ್ರಾಣಿಗಳ ಸೇವೆ ಇವು ಐದು ನಿತ್ಯ ಕರ್ಮಗಳು ಆಚರಿಸಿಲ್ಪಡುವುದಿಲ್ಲವೋ ಅವರು ಬದುಕಿದ್ದರೂ ಸತ್ತಂತೆ ಎಂದು ಹೇಳಿದರು.

ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯ ಮಾತನಾಡಿ,ಸಮಾಜ, ಧರ್ಮ, ಸಂಸ್ಕೃತಿ. ಅದರ ತಿಳುವಳಿಕೆ ಮತ್ತಷ್ಟು ಜನರಿಗೆ ಮೂಡಿಸುವ ಕೆಲಸವಾಗಬೇಕಿದೆ. ಇವತ್ತು ನಮ್ಮ ಸಂಸ್ಕೃತಿಯ ಮೇಲೆ ಪಾಶ್ಚಾತ್ಯ ಸಂಸ್ಕೃತಿ ದೊಡ್ಡ ಹಾನಿ ಉಂಟು ಮಾಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾವು ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಯ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ನವದೆಹಲಿ ಆರ್ಯ ಪ್ರತಿನಿಧಿ ಸಭಾಮಂತ್ರಿ ವಿನಯ ಆರ್ಯ ಮಾತನಾಡಿ, ಮಕ್ಕಳಲ್ಲಿ ಧರ್ಮ, ಸಂಸ್ಕಾರ, ಶಿಕ್ಷಣ, ದೇಶಪ್ರೇಮ ದೇಶ ಉಳಿಯಬೇಕು ಸಂಸ್ಕೃತಿ ಉಳಿಯಬೇಕು ಎಂದರೆ ಮದುವೆಯಾಗಿ ಮೋಜು ಮಸ್ತಿ ಮಾಡದೇ ಹೆಚ್ಚು ಹೆಚ್ಚು ಸಂತಾನ ಪ್ರಾಪ್ತಿಯಾಗಬೇಕು ಅಂದಾಗ ಮಾತ್ರ ದೇಶ ಸಂಸ್ಕಾರ, ಸಂಸ್ಕೃತಿ ಉಳಿಯಲು ಸಾಧ್ಯ. ಜತೆಗೆ ನಾವು ಎಷ್ಟೆ ಹಣ, ಬಂಗಾರ, ಆಸ್ತಿ ಗಳಿಸಿದರು ಪ್ರತಿನಿತ್ಯ ತಂದೆ ತಾಯಿ, ಮಕ್ಕಳೊಂದಿಗೆ ಕೆಲ ಸಮಯ ಕಳೆದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.

ಈ ವೇಳೆ ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿದರು. ಡಿವೈಎಸ್‌ಪಿ ಜೆ.ಎಸ್.ನ್ಯಾಮೇಗೌಡರ್ ಮಾರ್ಗದರ್ಶನದಲ್ಲಿ ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್ ನೇತೃತ್ವದಲ್ಲಿ 14 ಪಿಎಸ್‌ಐ, 29 ಎಎಸ್‌ಐ, 120 ಸಿಬ್ಬಂದಿಗಳನ್ನು ಕಾರ್ಯಕ್ರಮಕ್ಕೆ ನಿಯೋಜನೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ರ್ನಾಟಕ ಆರ್ಯ ಪ್ರತಿನಿಧಿ ಸಭಾ ಗೌರವಾಧ್ಯಕ್ಷ ಸುಭಾಷ ಅಷ್ಟೀಕರ, ಹುಮನಾಬಾದ ಆರ್ಯ ಸಮಾಜ ಪ್ರಧಾನ ನಾರಾಯಣ ಚಿದ್ರಿ, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಉದ್ಯಮಿ ಅಕ್ಷಯ ಪಾಟೀಲ್, ರೇವಣಸಿದ್ದಪ್ಪ ಪಾಟೀಲ್, ಮಾಜಿ. ಜಿ.ಪಂ ಸದಸ್ಯ ವೀರಣ್ಣಾ ಪಾಟೀಲ್, ಶಿವಶರಣಪ್ಪ ವಾಲಿ, ಧನರಾಜ ತಾಳಂಪಳ್ಳಿ, ತೆಲಂಗಾಣ ಆರ್ಯ ಸಮಾಜದ ಧರ್ಮರಾಜ ತೇಜಾ, ಪುರಸಭೆ ಅಧ್ಯಕ್ಷ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕರಂಜಾ, ಚೇತನರಾಜಪ್ರಭು, ಹೈದ್ರಾಬಾದ್‌ನ ಸವಿತಾ ಬಹೆನ್ ಯಜ್ಞ ಹಾಗೂ ಭಜನೆ ನಡೆಸಿಕೊಟ್ಟರು.

Share this article