ಲಕ್ಷ್ಮೇಶ್ವರ: ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ತಾಲೂಕಾ ಮಟ್ಟದ ಜಾಗೃತ ಸಮಾವೇಶ ಹಾಗೂ ವೀರರಾಣಿ ಕಿತ್ತೂರ ಚೆನ್ನಮ್ಮನ 202 ನೇ ಜಯಂತ್ಯುತ್ಸವವು ಪಟ್ಟಣದ ಸೋಮೇಶ್ವರ ತೇರಿನ ಮನೆಯ ಆವರಣದಲ್ಲಿ 21 ಶನಿವಾರ ಮಧ್ಯಾಹ್ನ 4.30ಕ್ಕೆ ಜರುಗಲಿದೆ ಎಂದು ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಂಕರ ಎಂ, ರಾಗಿ ಹೇಳಿದರು.
ಶನಿವಾರ ಬೆಳಿಗ್ಗೆ 10 ಗಂಟಗೆ ಮಹಾಕವಿ ಪಂಪ ವೃತ್ತದಿಂದ ರಾಣಿ ಚನ್ನಮ್ಮನ ಭಾವಚಿತ್ರದ ಮೆರವಣಿಗೆಯು ಆರಂಭವಾಗುತ್ತದೆ. ಮೆರವಣಿಗೆಯಲ್ಲಿ ವಿವಿಧ ವಾದ್ಯಗಳೊಂದಿಗೆ ಡೊಳ್ಳು ಮೇಳ, ರೂಪಕಗಳು ಹಾಗೂ ಕುಂಭ ಹೊತ್ತ ಮಹಿಳೆಯರು ಭಾಗವಹಿಸುತ್ತಾರೆ ಎಂದು ಹೇಳಿದ ಅವರು ಸಮಾವೇಶದಲ್ಲಿ ನಾಡಿನ ಹೆಸರಾಂತ ಮಠಾಧೀಶರು ಭಾಗವಹಿಸುವರು. ಸಮಾವೇಶವು ಜ್ಯಾತ್ಯತೀತ ಹಾಗೂ ಪಕ್ಷಾತೀತವಾಗಿದ್ದು ರಾಜಕೀಯ ಗಣ್ಯರು, ಮುಖಂಡರು ಹಾಗೂ ಎಲ್ಲ ಸಮಾಜದ ಮುಖಂಡರು ಭಾಗವಹಿಸುವರು. ಸುಮಾರು 5 ಸಾವಿರಕ್ಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಿರಹಟ್ಟಿ ತಾಲೂಕg ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ತುಳಿ, ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ಚನ್ನಪ್ಪ ಜಗಲಿ, ಶಿವಾನಂದ ದೇಸಾಯಿ, ರಮೇಶ ದನದಮನಿ, ಡಿ.ವೈ.ಹುನಗಗುಂದ, ಯಲ್ಲಪ್ಪ ಅಣ್ಣಿಗೇರಿ, ಅಶೋಕಗೌಡ್ರ ಪಾಟೀಲ, ಸುನೀಲ. ಮಹಾಂತಶೆಟ್ಟರ, ಮಂಜುನಾಥ ಹೊಗೆಸೊಪ್ಪಿನ, ರಮೇಶ ಹಾಳದೊಟದ, ಸತೀಶ ಕಾಡಣ್ಣವರ, ಸುನೀಲ ಮುಳಗುಂದ, ಅಶೋಕ ವರವಿ, ಎಸ್.ಬಿ.ಹೊಸೂರ, ಶರಣಪ್ಪ ಹೊಂಬಳ, ಸುರೇಶ ಬ್ಯಾಲಹುಣಸಿ, ಫಕ್ಕೀರೇಶ ಕವಲೂರ, ಸಂತೋಷ ಜಾವೂರ, ವಿರೂಪಾಕ್ಷಪ್ಪ ಆದಿ, ಈರಣ್ಣ ಅಳ್ಳಳ್ಳಿ, ಬಸಣ್ಣ ಧರ್ಮಂತರ, ಶಿವಲಿಂಗಪ್ಪ ಗುಡಗೇರಿ, ಸಂತೋಷ ಬೆಲ್ಲದ, ಅಭಿಷೇಕ್ ಉಮಚಗಿ, ಮಂಜುನಾಥ ನರೇಗಲ್ಲ, ರುದ್ರಪ್ಪ ಉಮಚಗಿ, ಪ್ರಕಾಶ ಕೊಂಚಿಗೇರಿ, ಸಂತೋಷ ಜಾವೂರ, ಗಂಗಾಧರ ಮೆಣಸಿನಕಾಯಿ, ಯಲ್ಲಪ್ಪ ಇಂಗಳಗಿ, ಉಳವೇಶಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.