- ಹರ ಸೇವಾ ಸಂಸ್ಥೆ, ಪಂಚಮಸಾಲಿ ಸಮಾಜದ 23ನೇ ವರ್ಷದ ಕಾರ್ಯಕ್ರಮ: ಉಮಾಪತಿ - - -
ಹರ ಸೇವಾ ಸಂಸ್ಥೆ, ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಹಯೋಗದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಆ.2ರಂದು ನಗರದ ಶಾಬನೂರು ರಸ್ತೆಯ ಬಾಪೂಜಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಬಿ.ಸಿ.ಉಮಾಪತಿ ಅಧ್ಯಕ್ಷತೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಎಂ. ಶಾಮನೂರು ಸಮಾರಂಭ ಉದ್ಘಾಟಿಸುವರು. ನಿವೃತ್ತ ಪ್ರಾಚಾರ್ಯ ದವನ ಕಾಲೇಜು ನಿರ್ದೇಶಕ ಪ್ರೊ.ಬಾತಿ ಬಸವರಾಜ್ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.85ರಷ್ಟು ಅಂಕ ಪಡೆದ 72 ಮಕ್ಕಳು, ದ್ವಿತೀಯ ಪಿಯುಸಿ ಸಾಧಕರಾದ 64 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.ಉದ್ಯಮಿಗಳಾದ ಎಸ್.ಕೆ. ಶ್ರೀಧರ, ಕಂಚಿಕೇರಿ ಮಹೇಶ, ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ ಇತರರು ಭಾಗವಹಿಸುವರು. ಸಮಾಜದ ಸಾಧಕರಾದ ವರ್ತಕ ಸವಣೂರು ಚಂದ್ರಶೇಖರ, ವಕೀಲ ಮಲ್ಲಿಕಾರ್ಜುನ್ ಕಣವಿ, ಮಲ್ಲಿಕಾರ್ಜುನ್ ಬೆನ್ನೂರು, ಬಿ. ರಾಜಶೇಖರ್, ಎನ್.ಕೆ. ಜಯರಾಜ ಮೇಟಿ, ಷಣ್ಮುಖಪ್ಪ ಹುನಗುಂದ, ಪ್ರಗತಿಪರ ರೈತರಾದ ಎಂ.ಬಿ. ಮುದ್ದಪ್ಪ, ಲಲಿತಮ್ಮ ಜಯಪ್ಪ, ಧಜಂಜಯ ಗುಡ್ಡಪ್ಪ, ಚಂದ್ರಶೇಖರ್ ಅಂಗಡಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಹರ ಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ 23 ವರ್ಷದಿಂದಲೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳುತ್ತಾ ಬಂದಿದೆ. ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸ ಇದಾಗಿದೆ. ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಪ್ರತಿವರ್ಷ ಸಮಾರಂಭ ಹಮ್ಮಿಕೊಂಡು ಬಂದಿದ್ದೇವೆ ಎಂದು ಬಿ.ಸಿ.ಉಮಾಪತಿ ತಿಳಿಸಿದರು.
- - -
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ವಿಚಾರದಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದನ್ನು ಜನರೂ ಗಮನಿಸುತ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ. ನಾವು ಯಾವುದೇ ಪ್ರತಿಕ್ರಿಯೆ ನೀಡುವುದೂ ಇಲ್ಲ ಎಂದರು.
- - -