- ಕೊಪ್ಪಳ ಜಿಲ್ಲೆ ಕುಷ್ಟಗಿ ತಾ. ಬಂಡಿ ಗ್ರಾಮದ ಹನುಮೇಶ- ಪವಿತ್ರಾ ದಂಪತಿ ಪುತ್ರಿ ಅನ್ವಿಕಾ
- - -- ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಕೊಪ್ಪಳ ಜಿಲ್ಲೆ ಮೂಲದ ದಂಪತಿ ಕೂಸು - 4 ಗಂಟೆಯಲ್ಲಿ ಕಸ್ತೂರ ಬಾ ಆಸ್ಪತ್ರೆಗೆ । ದಾವಣಗೆರೆ 25 ಪೊಲೀಸರಿಂದ ಬಂದೋಬಸ್ತ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮೂರು ತಿಂಗಳ ಕೂಸನ್ನು ತುರ್ತು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ನಲ್ಲಿ ಝೀರೋ ಟ್ರಾಫಿಕ್‌ನಲ್ಲಿ ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಗುರುವಾರ ರಾತ್ರಿ ಕಳಿಸಿಕೊಡಲಾಯಿತು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ 3 ತಿಂಗಳ ಕೂಸು ಅನ್ವಿಕಾಗೆ ತುರ್ತು ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹಕಾರದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಮಣಿಪಾಲಕ್ಕೆ ಅಂಬ್ಯುಲೆನ್ಸ್‌ನಲ್ಲಿ ಕಳಿಸುವ ವ್ಯವಸ್ಥೆ ಮಾಡಲಾಗಿತ್ತು.
ದಾವಣಗೆರೆಯಿಂದ ಹೊರಟ ಅಂಬ್ಯುಲೆನ್ಸ್ ಮಲೇಬೆನ್ನೂರು, ಹೊನ್ನಾಳಿ, ನ್ಯಾಮತಿ, ಸವಳಂಗ, ಆಯನೂರು, ಬೆಜ್ಜೋಳಿ, ತೀರ್ಥಹಳ್ಳಿ, ಆಗುಂಬೆ, ಹೆಬ್ರಿ ಮಾರ್ಗವಾಗಿ ಮಣಿಪಾಲ ಆಸ್ಪತ್ರೆಗೆ ಮೂರು ತಿಂಗಳ ಅನ್ವಿಕಾಗೆ ತುರ್ತು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.ಸುಮಾರು 240 ಕಿಮೀ ದೂರದಲ್ಲಿರುವ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯನ್ನು 4 ಗಂಟೆಯಲ್ಲಿ ತಲುಪಲು ಝೀರೋ ಟ್ರಾಫಿಕ್ ಬಂದೋಬಸ್ತ್ ಮಾಡಲಾಗಿತ್ತು. ಸಂಚಾರಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಶೈಲಜಾ ದಾದಾಪೀರ್ ನೇತೃತ್ವದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾ. ಬಂಡಿ ಗ್ರಾಮದ ಹನುಮೇಶ ಹಾಗೂ ಪವಿತ್ರಾ ದಂಪತಿ ಹೆಣ್ಣುಮಗು ಅನ್ವಿಕಾ (3 ತಿಂಗಳು) ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿತ್ತು. ಹೆರಿಗೆಗಾಗಿ ಪವಿತ್ರಾ ಹರಿಹರದ ತಮ್ಮ ತವರು ಮನೆಗೆ ಬಂದಿದ್ದರು. ಕಳೆದ 3 ತಿಂಗಳ ಹಿಂದೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಪವಿತ್ರಾ ಜನ್ಮ ನೀಡಿದ್ದರು. ಕೆಲ ದಿನಗಳಿಂದ ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದ ಕೂಸು ಅನ್ವಿಕಾಗೆ ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ತುರ್ತು ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ಬಿಸಿಎಚ್ಐ ವೈದ್ಯರ ಸಲಹೆ ಮೇರೆಗೆ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಯಿತು.ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಕರೆದೊಯ್ಯಲು ಆಸ್ಪತ್ರೆ ವೈದ್ಯರು ಸಹ ಕಾರ್ಯೋನ್ಮುಖರಾದರು. ಮಗುವಿನ ತುರ್ತು ಚಿಕಿತ್ಸೆ ಹಿನ್ನೆಲೆ ಪೊಲೀಸ್ ಇಲಾಖೆಯು ಸಹ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದು, ಗುರುವಾರ ರಾತ್ರಿ 11 ಗಂಟೆಗೆ ಕೂಸು ಅನ್ವಿಕಾ ಇದ್ದ ಅಂಬ್ಯುಲೆನ್ಸ್ ಮಣಿಪಾಲ ತಲುಪಲಿದೆ. ಅಂಬ್ಯುಲೆನ್ಸ್ ಚಾಲಕ ಅನಿಲ್ ಎನ್ನಲಾಗಿದೆ. ದಾವಣಗೆರೆ ನಗರದಲ್ಲಿ ಎಸ್ಐ ಶೈಲಜಾ ಸೇರಿದಂತೆ 25 ಸಂಚಾರ ಪೊಲೀಸರು ಝೀರೋ ಟ್ರಾಫಿಕ್ ಬಂದೋಬಸ್ತ್ ಕಲ್ಪಿಸಿದ್ದರು.
- - -(ಬಾಕ್ಸ್) * ಮಣಿಪಾಲ ಬದಲಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗು ರವಾನೆ ಹೊನ್ನಾಳಿ: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅನ್ವಿಕಾ ಹೆಸರಿನ ಮಗುವನ್ನು ದಾವಣಗೆರೆ ಬಾಪೂಜಿ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್‌ನಲ್ಲಿ ಮಣಿಪಾಲ್‌ಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ವಾಹನದ ಟೈರ್ ಹೊನ್ನಾಳಿ ತಾಲೂಕಿನ ಚಿ.ಕಡದಕಟ್ಟೆ ಬಳಿ ಪಂಕ್ಚರ್ ಆಯಿತು. ಈ ವೇಳೆ ಕೂಡಲೇ ಜೊತೆಯಲ್ಲಿಯೇ ಇದ್ದ ಪೊಲೀಸರು ಸೇರಿ ಟೈರ್ ಬದಲಿಸಿದರು. ವಾಹನ ಹೊರಟಾಗ ಮಗುವಿನ ಪಲ್ಸ್ ರೇಟ್ ಕಡಿಮೆ ಆಗುತ್ತಿತ್ತು. ಇದನ್ನು ಗಮನಿಸಿದ ವೈದ್ಯರ ತಂಡ ಅತಿ ತುರ್ತು ಚಿಕ್ಸಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ಸಾಗಿಸುವುದಾಗಿ ಅಂಬ್ಯುಲೆನ್ಸ್ ಜತೆಗಿದ್ದ ಹೊನ್ನಾಳಿ ಪೊಲೀಸ್ ಇನ್‌ಸ್ಪೆಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದ್ದಾರೆ. - - -
-30ಕೆಡಿವಿಜಿ3, 4: ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ 3 ತಿಂಗಳ ಕೂಸನ್ನು ಕರೆದೊಯ್ಯುತ್ತಿರುವ ವೈದ್ಯರು, ಸಿಬ್ಬಂದಿ. -30ಕೆಡಿವಿಜಿ5, 6: ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ 3 ತಿಂಗಳ ಕೂಸನ್ನು ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುವುದು.-30ಕೆಡಿವಿಜಿ7: ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ 3 ತಿಂಗಳ ಕೂಸನ್ನು ಕರೆದೊಯ್ಯುವುದಕ್ಕೆ ಮುನ್ನ ಪೊಲೀಸರು ಬಂದೋಬಸ್ತ್ ಕಲ್ಪಿಸಿರುವುದು.