ಕನ್ನಡಪ್ರಭ ವಾರ್ತೆ ರಾಮನಾಥಪುರ
ಸಂಗೀತ ಹಾಗೂ ಸಾಹಿತ್ಯ ಎರಡು ಒಂದೇ. ಶಾಸ್ತ್ರೀಯ ಸಂಗೀತ, ಹಾಗೂ ಸಾಹಿತ್ಯ ಪ್ರಪಂಚದ ಐತಿಹಾಸಿಕ ಕ್ಷೇತ್ರವಾಗಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿ ಸ್ಥಳೀಯ ಶಾಸ್ತ್ರೀಯ ಸಂಗೀತ ಸಂಸ್ಕೃತಿಯೊಂದಿಗೆ ಬೆರೆತು ಆತ್ಮೀಯವಾಗಿ ಹಿಡಿಯಬಲ್ಲ ಸಂಗೀತ ಸಾಧನ ಎಂದು ಗಾನಕಲಾ ಭೂಷಣ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಅವರು ತಿಳಿಸಿದರು.ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದ ಕಾವೇರಿ ನದಿ ದಂಡೆಯಲ್ಲಿ 1961ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅತಿರುದ್ರ ಮಹಾಯಾಗ ನಡೆದ ಪುಣ್ಯಭೂಮಿ ರುದ್ರಪಟ್ಟಣ ಕ್ಷೇತ್ರದಲ್ಲಿ ಪವಿತ್ರವಾದ ಕಾವೇರಿ ನದಿ ತೀರದಲ್ಲಿ ನಿರ್ಮಿಸಿರುವ ಯಾಗ ಮಂಟಪದಲ್ಲಿ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಧಾತ್ರಿ ಹವನ, ಹೋಮಗಳು, ಪೂರ್ಣಾಹುತಿ ಹಾಗೂ ಪಂಚರತ್ನ ಕೃತಿ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಧಾತ್ರಿ ಹವನ ಕಾರ್ಯಕ್ರಮ ಇಲ್ಲಿ ಬಹಳ ವರ್ಷಗಳ ಹಿಂದೆಯೇ ನಿಂತು ಹೋಗಿತ್ತು. ಹಿಂದಿನ ಗತವೈಭವವನ್ನು ಮರಳಿ ತರಲು ಧಾತ್ರಿ ಹವನ ಕಾರ್ಯಕ್ರಮ ಮತ್ತೆ ಪ್ರಥಮ ವರ್ಷವಾಗಿದ್ದು, ಇಂದು ನಮ್ಮ ತಂದೆ- ತಾಯಿಗಳ ಹೆಸರಿನಲ್ಲಿ ಹಮ್ಮಿಕೊಂಡಿದ್ದೇನೆ. ಇದರ ಖರ್ಚು ಸುಮಾರು 2 ಲಕ್ಷ ರು. ಖರ್ಚು ಆಗುತ್ತದೆ ಎಂದ ಅವರು, ಮುಂದಿನ ವರ್ಷ ಇಂತಹ ಕಾರ್ಯಕ್ರಮ ನಡೆಸಲು ಒಬ್ಬರಾದರೂ ಸರಿ, ಅಥವಾ ಒಂದು ಕುಟುಂಬಸ್ಥರು ಮುಂದೆ ಬಂದು ಪ್ರತಿವರ್ಷ ಕಾರ್ಯಕ್ರಮ ನಡೆಸಲು ಸಹಕಾರ ನೀಡಿ ಎಂದು ಆರ್.ಕೆ. ಪದ್ಮನಾಭ ಎಂದು ಮನವಿ ಮಾಡಿದರು.
----------------------------29ಎಚ್ಎಸ್ಎನ್10 :
ರುದ್ರಪಟ್ಟಣದ ಕಾವೇರಿ ನದಿ ದಂಡೆಯಲ್ಲಿ 1961ರಲ್ಲಿ ಅತಿರುದ್ರ ಮಹಾಯಾಗ ಮಾಡಿದ ಸ್ಥಳದಲ್ಲಿ ಧಾತ್ರಿ ಹವನ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಹಾಗೂ ಶಿಷ್ಯ ವೃಂದ ಪಂಚರತ್ನ ಕೃತಿಗಳನ್ನು ಹಾಡಿದರು.