ಮುಂಡರಗಿ: ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತಲೂ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ. ಸಮಾಜ ಸಂಘಟಿತರಾದಷ್ಟು ಬಲ ಹೆಚ್ಚುತ್ತದೆ. ಆದ್ದರಿಂದ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚು-ಹೆಚ್ಚು ಸಂಘಟಿತರಾಗಿ ನಮಗೆ ಸಿಗುವ ಸೌಲಭ್ಯಗಳನ್ನು ಪಡೆಯುವುದರೊಂದಿಗೆ ಸಮಾಜ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡೋಣ ಎಂದು ಪಂಚಮಸಾಲಿ ಮಹಿಳಾ ಶಹರ ಘಟಕದ ಅಧ್ಯಕ್ಷೆ ಶೋಭಾ ಹೊಟ್ಟಿನ ಹೇಳಿದರು.ಅವರು ಶಕುಂತಲಾ ಗುಡದಪ್ಪನವರ ಮನೆಯಲ್ಲಿ ಪಂಚಮಸಾಲಿ ಮಹಿಳಾ ಶಹರ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆ-ಮನದಲ್ಲಿ ಚೆನ್ನಮ್ಮ ಮತ್ತು ಚೆನ್ನಮ್ಮಾಜಿಯವರ 196ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಮಾಜದ ತಾಲೂಕು ಅಧ್ಯಕ್ಷ ಎಸ್.ವಿ.ಪಾಟೀಲ ಮಾತನಾಡಿ, ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ನೀಡಿದ ಎಲ್ಲ ಮಹನೀಯರಿಗೆ ಕೃತಜ್ಞತೆಯನ್ನು ಸಲ್ಲಿಸಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು. ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮತ್ತು ಸದಸ್ಯ ನಾಗರಾಜ ಹೊಂಬಳಗಟ್ಟಿ ಸಮಾಜದ ಸಂಘಟನೆ ಕುರಿತು ಮಾತನಾಡಿದರು. ದೀಪುಶ್ರೀ ಕಣವಿ ಚೆನ್ನಮ್ಮಾಜಿ ಅವರ ಕುರಿತು ಉಪನ್ಯಾಸ ನೀಡಿದರು. ಆರ್.ವೈ.ಪಾಟೀಲ, ರಾಜೇಶ ಅರಕಲ್, ಎನ್.ಎಂ. ಕುಕನೂರ, ಪ್ರಮೋದ ಇನಾಮತಿ, ಎ.ವೈ.ನವಲಗುಂದ, ಎಂ.ಎಸ್. ಹೊಟ್ಟಿನ, ಎಸ್.ಎಸ್. ಇನಾಮತಿ, ಡಾ. ಎ.ಎಂ. ಮೇಟಿ, ಡಾ.ವಿ.ಕೆ. ಸಂಕನಗೌಡ್ರ, ಅಶೋಕ ಹಂದ್ರಾಳ, ಸೋಮಣ್ಣ ದೇಸಾಯಿ, ಎನ್.ಎಫ್. ಅಕ್ಕೂರ, ಶಕುಂತಲಾ ಗುಡದಪ್ಪನವರ, ಮಂಜುನಾಥ ಮುಧೋಳ, ನಾಗರಾಜ ಉಳ್ಳಾಗಡ್ಡಿ, ರಜನಿಕಾಂತ ದೇಸಾಯಿ, ಪ್ರಶಾಂತ ಗುಡದಪ್ಪನವರ, ಪ್ರದೀಪ ಗುಡದಪ್ಪನವರ ಮುಂತಾದವರಿದ್ದರು. ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಲಾ ಅಕ್ಕೂರ ಪ್ರಾರ್ಥಿಸಿದರು. ಶ್ರೀದೇವಿ ಗುಡದಪ್ಪನವರ ಸ್ವಾಗತಿದರು. ನೇತ್ರಾ ಭಾವಿಹಳ್ಳಿ ನಿರೂಪಿಸಿದರು. ಶ್ರೀದೇವಿ ಗೋಡಿ ವಂದಿಸಿದರು.