- ಸರ್ಕಾರಕ್ಕೆ ರಕ್ತ ಪತ್ರ ಚಳವಳಿಯಲ್ಲಿ ಕರವೇ ಆಗ್ರಹ । ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ಲೋಕಸೇವಾ ಆಯೋಗದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ, ಕೂಡಲೇ ಸರ್ಕಾರ ಅಧಿಸೂಚನೆ ಹಿಂಪಡೆದು ಕನ್ನಡಿಗರಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕದಿಂದ ಭಾನುವಾರ ರಕ್ತಪತ್ರ ಚಳವಳಿ ನಡೆಸಲಾಯಿತು.ನಗರದ ಶಿವ ಹೈಟೆಕ್ ಲ್ಯಾಬ್‌ನಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ರಕ್ತದಲ್ಲಿ ಪತ್ರ ಪ್ರತಿಭಟನೆಯಲ್ಲಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮುಖ್ಯಮಂತ್ರಿಗೆ ಅಂಚೆ ಕಚೇರಿ ಮೂಲಕ ಪತ್ರಗಳ ರವಾನೆ ಮಾಡಲಾಯಿತು.
ಕರ್ನಾಟಕ ಲೋಕಸೇವಾ ಆಯೋಗ ಕನ್ನಡಿಗರಿಗೆ ಉದ್ಯೋಗ ಕೊಡುವುದಕ್ಕೆ ಇದೆಯೇ ಹೊರತು, ಪರಭಾಷಿಕರಿಗಲ್ಲ. ಆದರೆ, ಅಲ್ಲಿನ ಕೆಲವು ಭ್ರಷ್ಟ ಅಧಿಕಾರಿಗಳಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ ಕನ್ನಡಿಗರಿಗೆ ಉದ್ಯೋಗ ದೊರಕುವಂತೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ಕನ್ನಡಿಗರಿಗೆ ಸರ್ಕಾರ ತಣ್ಣೀರು:
ಕರ್ನಾಟಕವಾದರೂ ಕನ್ನಡಿಗ ನಿರುದ್ಯೋಗಿಗಳಿಗೆ ನ್ಯಾಯ ದೊರಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಮಾಧ್ಯಮದಲ್ಲಿಯೇ ಓದಿ, ಬದುಕು ಕಟ್ಟಿಕೊಳ್ಳಬೇಕೆಂಬ ಕನ್ನಡಿಗರ ಆಶಯಕ್ಕೆ ರಾಜ್ಯ ಸರ್ಕಾರ ತಣ್ಣೀರೆರಚುತ್ತಿದೆ. ಕನ್ನಡಿಗರಿಗೆ ಇರಬೇಕಾದ ಕೆಪಿಎಸ್‌ಸಿ ಪರಭಾಷಿಕರ ಪಾಲಾಗುತ್ತಿದೆ. ಇದನ್ನು ಕಂಡರೂ ಕಾಣದಂತೆ ಸರ್ಕಾರ ಜಾಣ ಕುರುಡು ಪ್ರದರ್ಶನ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಧಿಸೂಚನೆ ತಂದಿದ್ದು ಸರಿಯಲ್ಲ:
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕರ್ನಾಟಕ ಸರ್ಕಾರ ಕನ್ನಡಿಗರ ಪರವಾಗಿ ಇರಬೇಕೇ ಹೊರತು, ಪರಭಾಷೆಕರಿಗಲ್ಲ. ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಮುಖ್ಯಮಂತ್ರಿ ಅವರಿಗೆ ಮನವಿ ಸಹ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವಾರ ಕಾಲವಕಾಶ ಕೇಳಿದ್ದರು. ಆದರೆ, ಈಗ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ತಂದಿರುವುದು ತರವಲ್ಲ ಎಂದು ಕಿಡಿಕಾರಿದರು.ಕೆಪಿಎಸ್‌ಸಿ ನೀಡಿದ್ದ ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡವೇ ತಪ್ಪಾಗಿತ್ತು. ಈ ಬಗ್ಗೆಯೂ ಕರವೇ ಪ್ರತಿಭಟನೆ ನಡೆಸಿತ್ತು. ಆದರೆ, ಈಗ ಸರ್ಕಾರ ಆ ಎಲ್ಲ ತಪ್ಪುಗಳನ್ನು ತಿದ್ದುವ ಬದಲು ಅಧಿಸೂಚನೆ ಹೊರಡಿಸಿ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಆದ್ದರಿಂದಲೇ ಇಂದು ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ವೇದಿಕೆಯ ಮಹಿಳಾ ಘಟಕ ಅಧ್ಯಕ್ಷರಾದ ಬಸಮ್ಮ, ನಾಗಮ್ಮ, ಮಂಜುಳಾ ಮಾಂತೇಶ್, ಈಶ್ವರ್, ಗಿರೀಶ್ ಕುಮಾರ್, ಖಾದರ್ ಭಾಷ, ಜಬಿವುಲ್ಲಾ ಖಾನ್, ಗೋಪಾಲ್ ದೇವರಮನೆ, ತನ್ವೀರ್, ಮುಸ್ತಫ ಗೋಪಾಲ್, ಬಸವರಾಜ್, ಸುಭಾನ್, ಶ್ರೀನಿವಾಸ್, ರವಿ, ಅಣ್ಣಪ್ಪ, ಸುರೇಶ್, ಸಾಗರ್, ಸಂಜಯ್, ವಿಕಾಸ್ ಮತ್ತಿತರರು ಉಪಸ್ಥಿತರಿದ್ದರು.- - -
ಕೋಟ್ ಸರ್ಕಾರ ತಕ್ಷಣವೇ ಎಚ್ಚೆತ್ತು ಅಧಿಸೂಚನೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಬೇಕು. ಆ ಮೂಲಕ ಕನ್ನಡಿಗರಿಗೆ ಉದ್ಯೋಗ ಕೊಡಿಸುವಲ್ಲಿ ಮುಂದಾಗಬೇಕು. ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಕ.ರ.ವೇ. ವತಿಯಿಂದ ಮುಂದಿನ ದಿನದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು- ಎಂ.ಎಸ್. ರಾಮೇಗೌಡ, ಜಿಲ್ಲಾಧ್ಯಕ್ಷ, ಕರವೇ
- - - -2ಕೆಡಿವಿಜಿ34.ಜೆಪಿಜಿ:ದಾವಣಗೆರೆಯಲ್ಲಿ ಕೆಪಿಎಸ್‌ಸಿ ಲೋಪಗಳ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ರಕ್ತದಲ್ಲಿ ಪತ್ರ ಬರೆಯುವ ಚಳವಳಿ ನಡೆಸಿ, ಸರ್ಕಾರಕ್ಕೆ ಸಲ್ಲಿಸಲಾಯಿತು. -2ಕೆಡಿವಿಜಿ35.ಜೆಪಿಜಿ:
ದಾವಣಗೆರೆಯಲ್ಲಿ ಕರವೇ ಜಿಲ್ಲಾ ಘಟಕದಿಂದ ರಕ್ತದಲ್ಲಿ ಬರೆದ ಅಂಚೆ ಪತ್ರಗಳನ್ನು ಮುಖ್ಯಮಂತ್ರಿ ಅವರಿಗೆ ಕಳಿಸಲಾಯಿತು.