ಪಾಂಡವಪುರ: ಚಿಣ್ಣರ ಜಾಣರ ಜಗುಲಿ, ಪೋಷಕರಿಗೆ ಪಾದಪೂಜೆ ಕಾರ್ಯಕ್ರಮ

KannadaprabhaNewsNetwork |  
Published : Sep 02, 2025, 01:00 AM IST
1ಕೆಎಂಎನ್ ಡಿ30 | Kannada Prabha

ಸಾರಾಂಶ

ಅಕ್ಷಿತ ತಂಡದ ಸದಸ್ಯರು ಹೆಣ್ಣುಮಕ್ಕಳಿಗರ ಹೆಚ್ಚು ತಾಳ್ಮೆ ಇದೆ ಎಂಬುದರ ಕುರಿತು ಪರವಾಗಿ ಚರ್ಚಿಸಿದರೆ, ಜೀವಿತ ತಂಡದ ಸದಸ್ಯರು ಗಂಡರು ಹೆಚ್ಚು ತಾಳ್ಮೆಹೊಂದಿದ್ದಾರೆ ಎಂಬುದಾಗಿ ಚರ್ಚಿಸಿದರು. ಎರಡು ತಂಡಗಳ ಸದಸ್ಯರು ಸಹ ಎಲ್ಲರು ಮೆಚ್ಚುವ ರೀತಿಯಲ್ಲಿ ಚರ್ಚಿಸುವ ಮೂಲಕ ನೆರೆದಿದ್ದ ಪೋಷಕರು, ಪ್ರೇಕ್ಷಕರನ್ನು ರಂಜಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಚಿಣ್ಣರ ಜಾಣರ ಜಗುಲಿ ಹಾಗೂ ಪೋಷಕರಿಗೆ ವಿದ್ಯಾರ್ಥಿಗಳಿಂದ ಪಾದಪೂಜೆ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಶಿವಪ್ಪ ಚಾಲನೆ ನೀಡಿದರು.

ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ನಡೆದ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪರ-ವಿರೋಧ ಚರ್ಜೆ ನಡೆಯಿತು. ತಾಳ್ಮೆಹೆಚ್ಚು ಹೆಂಗಸರಿಗೆ ಎನ್ನುವ ಪರ ಹರ್ಷಿತ, ದೃತಿ, ತ್ರೀಶಾ, ಪ್ರಿಯ,

ಭೂವನ, ತಾಳ್ಮೆಹೆಚ್ಚು ಗಂಡಸರಿಗೆ ಎನ್ನುವ ಪರ ಜೀವಿತ, ಗಾನವಿ, ಶ್ರೀನಿಧಿ, ಐಶ್ವರ್ಯ, ಧನುಷ್‌ರಾಜ್. ಹಾಸ್ಯಕಲಾವಿದ ಮಿಮಿಕ್ರಿ ದಯಾನಂದ್ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಅಕ್ಷಿತ ತಂಡದ ಸದಸ್ಯರು ಹೆಣ್ಣುಮಕ್ಕಳಿಗರ ಹೆಚ್ಚು ತಾಳ್ಮೆ ಇದೆ ಎಂಬುದರ ಕುರಿತು ಪರವಾಗಿ ಚರ್ಚಿಸಿದರೆ, ಜೀವಿತ ತಂಡದ ಸದಸ್ಯರು ಗಂಡರು ಹೆಚ್ಚು ತಾಳ್ಮೆಹೊಂದಿದ್ದಾರೆ ಎಂಬುದಾಗಿ ಚರ್ಚಿಸಿದರು. ಎರಡು ತಂಡಗಳ ಸದಸ್ಯರು ಸಹ ಎಲ್ಲರು ಮೆಚ್ಚುವ ರೀತಿಯಲ್ಲಿ ಚರ್ಚಿಸುವ ಮೂಲಕ ನೆರೆದಿದ್ದ ಪೋಷಕರು, ಪ್ರೇಕ್ಷಕರನ್ನು ರಂಜಿಸಿದರು.

ಹಾಸ್ಯ ಕಲಾವಿದ ದಯಾನಂದ್ ಮಾತನಾಡಿ, ಮನುಷ್ಯನಿಗೆ ಸಮಾಧಾನ, ನೆಮ್ಮದಿ, ತಾಳ್ಮೆ, ಸಹನೆ, ಶಾಂತಿ ಅತಿಮುಖ್ಯ. ಕೋಪ ಮಾಡಿಕೊಂಡಷ್ಟು ನಮಗೆ ಹೆಚ್ಚು ತೊಂದರೆ. ಜಗತ್ತಿಯಲ್ಲಿ ಗುರು ಸ್ಥಾನ ಶ್ರೇಷ್ಠ. ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.

ಸಂಸ್ಥೆ ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿದರು. ಸಮಾರಂಭದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ಅಶೋಕ್, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಅಧ್ಯಕ್ಷ ಧನಂಜಯ್, ಬಿಇಓ ಧರ್ಮಶೆಟ್ಟಿ, ಎಚ್.ಎನ್.ಮಂಜುನಾಥ್, ಎಲ್.ಸಿ.ಮಂಜುನಾಥ್, ವಿಜಿಕುಮಾರ್, ದೀಪು ಸೇರಿದಂತೆ ಹಲವರು ಇದ್ದರು.

PREV

Recommended Stories

ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನೆ!
ಸಿಎಂ ಪುತ್ರನ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ