ಗಣವೇಷಧಾರಿಗಳಿಂದ ತುರುವೇಕೆರೆಯಲ್ಲಿ ಪಥಸಂಚಲನ

KannadaprabhaNewsNetwork |  
Published : Oct 20, 2025, 01:02 AM IST
19 ಟಿವಿಕೆ 1 – ತುರುವೇಕೆರೆಯಲ್ಲಿ ನಡೆದ ಆರ್ ಎಸ್ ಎಸ್ ನ ನೂರನೇ ವರ್ಷದ ಸಂಭ್ರಮಾಚರಣೆ ವೇಳೆ ಗಣವೇಷಧಾರಿಯಾಗಿದ್ದ ಎರಡು ತಿಂಗಳ ಹಸುಗೂಸು ತಕ್ಷ್ ಅಗಸ್ತ್ಯ. | Kannada Prabha

ಸಾರಾಂಶ

ಈ ಪಥಸಂಚಲಕ್ಕೆ ಎರಡು ತಿಂಗಳ ಮಗುವಿನಿಂದ ಹಿಡಿದು ಸುಮಾರು ತೊಂಬತ್ತು ವರ್ಷದ ವಯೋವೃದ್ಧರೂ ಗಣವೇಷಧಾರಿಗಳಾಗಿ ಆಗಮಿಸಿ ಈ ಪಥ ಸಂಚಲನಕ್ಕೆ ಕಳೆ ತಂದುಕೊಟ್ಟರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಆಚರಣೆ ಸಂಬಂಧ ಪಟ್ಟಣದಲ್ಲಿ ನಡೆದ ಗಣವೇಷಧಾರಿಗಳ ಪಥಸಂಚಲನ ಪಟ್ಟಣದಲ್ಲಿ ಸಂಚಲನವನ್ನೇ ಸೂಚಿಸಿತು. ಸಾವಿರಾರು ಯುವಕರು ಗಣವೇಷಧಾರಿಗಳಾಗಿ ಆಗಮಿಸಿ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.

ಈ ಪಥಸಂಚಲಕ್ಕೆ ಎರಡು ತಿಂಗಳ ಮಗುವಿನಿಂದ ಹಿಡಿದು ಸುಮಾರು ತೊಂಬತ್ತು ವರ್ಷದ ವಯೋವೃದ್ಧರೂ ಗಣವೇಷಧಾರಿಗಳಾಗಿ ಆಗಮಿಸಿ ಈ ಪಥ ಸಂಚಲನಕ್ಕೆ ಕಳೆ ತಂದುಕೊಟ್ಟರು.ಪಟ್ಟಣದ ಉಡುಸಲಮ್ಮ ದೇವಾಲಯದ ಆವರಣದಲ್ಲಿ ತಾಲೂಕಿನ ಸಾವಿರಾರು ಸ್ವಯಂ ಸೇವಕ ಸಂಘದ ಗಣವೇಷಧಾರಿಗಳು ತಾಯಿ ಭಾರತಾಂಬೆಗೆ ಪೂಜೆ ಸಲ್ಲಿಸಿ ಧ್ವಜವಂದನೆ ಸಲ್ಲಿಸಿದರು. ನಂತರ ಪಥಸಂಚಲನ ಆರಂಭಗೊಂಡಿತು. ಪುಟಾಣಿಗಳು, ಯುವಕರು, ವಯೋವೃದ್ಧರೂ ಸೇರಿ ಹಲವು ಜನರು ಸ್ವಯಂಪ್ರೇರಿತರಾಗಿ ಗಣವೇಷಧಾರಿಗಳಾಗಿ ಭಾಗವಹಿಸಿದ್ದರು.

ಬೆಳಿಗ್ಗೆ 11.30 ಕ್ಕೆ ಆರಂಭಗೊಂಡ ಪಥಸಂಚಲನ ಸಂತೆ ಮೈದಾನದಿಂದ ಪೋಸ್ಟ್ ಆಫೀಸ್ ರಸ್ತೆ ಮೂಲಕ ಬಾಣಸಂದ್ರ ಸರ್ಕಲ್ ಗೆ ತೆರಳಿ, ನಂತರ ಎಸ್.ಬಿ.ಐ ಬ್ಯಾಂಕ್ ರಸ್ತೆ ಮೂಲಕ ತಿಪಟೂರು ರಸ್ತೆ ಮೂಲಕ ಸಾಗಿದ ಗಣವೇಷಧಾರಿಗಳ ಪಥಸಂಚಲನ ಉಡುಸಲಮ್ಮದೇವಿ ದೇವಾಲಯದ ಆವರಣದಲ್ಲಿ ಮುಕ್ತಾಯಗೊಂಡಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿಗಳು ಪಥಸಂಚಲನ ನಡೆಸುತ್ತಿದ್ದ ಸಂದರ್ಭದಲ್ಲಿ ಹಲವಾರು ಮಂದಿ ಜೆಸಿಬಿ ಮೂಲಕ ಹೂಮಳೆ ಸುರಿಸಿದರು.

ಪಟ್ಟಣದ ಜನರು ಸಹ ತಮ್ಮ ಮನೆ ಅಂಗಡಿ ಮುಂಭಾಗ ಸಾಗುವ ವೇಳೆ ಗಣವೇಷಧಾರಿಗಳಿಗೆ ಹೂಮಳೆ ಸುರಿಸಿ ಸ್ವಾಗತಿಸಿದರು. ಪಟ್ಟಣದ ಹಲವಾರು ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಹಲವಾರು ರಸ್ತೆಗಳನ್ನು ಮಹಿಳೆಯರು ರಂಗೋಲಿಗಳಿಂದ ಅಲಂಕರಿಸಿದ್ದರು.ಗಣವೇಷಧಾರಿಗಳಾಗಿ ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್, ಮಾಜಿ ಶಾಸಕರಾದ ಮಸಾಲ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಜೆಡಿಎಸ್ ನ ಶಾಸಕ ಎಂ.ಟಿ.ಕೃಷ್ಣಪ್ಪನವರ ಪುತ್ರ ವೆಂಕಟೇಶ್ ಕೃಷ್ಣಪ್ಪ ಸೇರಿದಂತೆ ಆರ್.ಎಸ್.ಎಸ್ ಮುಖಂಡರು ಭಾಗವಹಿಸಿದ್ದರು.ಹುಲ್ಲೇಕೆರೆಯ ಶ್ರೀನಿಧಿ ತನ್ನ ಎರಡು ತಿಂಗಳ ಮಗು ತಕ್ಷ್ ಅಗಸ್ತ್ಯನನ್ನು ಗಣವೇಷಧಾರಿಯನ್ನಾಗಿ ಕರೆ ತಂದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಪಥಸಂಚಲನದ ವೇಳೆ ಪುಟಾಣಿಗಳಾದ ಚಿರಸ್ವಿ ಕೆ. ಶರತ್ ಕಿತ್ತೂರು ರಾಣಿ ಚನ್ನಮ್ಮ ವೇಷಧರಿಸಿದ್ದರೆ, ಶಿವಾನಿ ಕೆ. ಶರತ್ ಶ್ರೀ ಕೋದಂಡರಾಮನ ವೇಷಧರಿಸಿ ವೇಷಧಾರಿಗಳಿಗೆ ಸ್ಪೂರ್ತಿ ನೀಡಿದರು. ಇತ್ತ ಸತ್ಯಗಣಪತಿ ಆಸ್ಥಾನ ಮಂಟಪದ ಬಳಿ ವೈಷ್ಣವಿ ಭಾರತಮಾತೆಗೆ ವೇಷ ಧರಿಸಿದ್ದಳು. 19 ಟಿವಿಕೆ 1 – ತುರುವೇಕೆರೆಯಲ್ಲಿ ನಡೆದ ಆರ್‌ಎಸ್‌ಎಸ್‌ನ ನೂರನೇ ವರ್ಷದ ಸಂಭ್ರಮಾಚರಣೆ ವೇಳೆ ಗಣವೇಷಧಾರಿಯಾಗಿದ್ದ ಎರಡು ತಿಂಗಳ ಹಸುಗೂಸು ತಕ್ಷ್ ಅಗಸ್ತ್ಯ. 19 ಟಿವಿಕೆ 2 - ತುರುವೇಕೆರೆಯಲ್ಲಿ ನಡೆದ ಆರ್ ಎಸ್ ಎಸ್ ನ ನೂರನೇ ವರ್ಷದ ಸಂಭ್ರಮಾಚರಣೆ ವೇಳೆ ಗಣವೇಷಧಾರಿಯಾಗಿದ್ದ ಪುಟಾಣಿ ಮಕ್ಕಳು 19 ಟಿವಿಕೆ 3 - ತುರುವೇಕೆರೆಯಲ್ಲಿ ನಡೆದ ಆರ್ ಎಸ್ ಎಸ್ ನ ನೂರನೇ ವರ್ಷದ ಸಂಭ್ರಮಾಚರಣೆ ವೇಳೆ ಗಣವೇಷಧಾರಿಗಳ ಮೇಲೆ ಜೆ ಸಿ ಬಿ ಯಿಂದ ಹೂಮಳೆ ಸುರಿಸಲಾಯಿತು. 19 ಟಿವಿಕೆ 4 - ತುರುವೇಕೆರೆಯಲ್ಲಿ ನಡೆದ ಆರ್ ಎಸ್ ಎಸ್ ನ ನೂರನೇ ವರ್ಷದ ಸಂಭ್ರಮಾಚರಣೆ ವೇಳೆ ಗಣವೇಷಧಾರಿಗಳಿಗೆ ಶುಭಕೋರಲು ನಿಂತಿದ್ದ ಚಿರಸ್ವಿ ಕೆ ಶರತ್, ಮತ್ತು ಶಿವಾನಿ ಕೆ ಶರತ್. 19 ಟಿವಿಕೆ 5 - ತುರುವೇಕೆರೆಯಲ್ಲಿ ನಡೆದ ಆರ್ ಎಸ್ ಎಸ್ ನ ನೂರನೇ ವರ್ಷದ ಸಂಭ್ರಮಾಚರಣೆ ವೇಳೆ ಗಣವೇಷಧಾರಿಗಳಿಗೆ ಶುಭಕೋರಲು ನಿಂತಿದ್ದ ಭಾರತಾಂಬೆಯ ವೇಷಧಸಿದ್ದ ವೈಷ್ಣವಿ.19 ಟಿವಿಕೆ 6 - ತುರುವೇಕೆರೆಯಲ್ಲಿ ನಡೆದ ಆರ್ ಎಸ್ ಎಸ್ ನ ನೂರನೇ ವರ್ಷದ ಸಂಭ್ರಮಾಚರಣೆ ವೇಳೆ ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಶಾಸಕರಾದ ಮಸಾಲಾ ಜಯರಾಮ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ : ಸಿಎಂ ಸಿದ್ದರಾಮಯ್ಯ
ಸಿಎಂ ರೇಸಲ್ಲಿ ಡಿಕೆ ಒಬ್ಬರೇ ಇಲ್ಲ : ರಾಜಣ್ಣ