ಮಕ್ಕಳನ್ನು ಸತ್ಪ್ರಜೆಯಾಗಿಸುವ ಹೊಣೆ ಪಾಲಕರದ್ದು: ಪ್ರೊ.ಸಿದ್ದು ಆಲಗೂರ

KannadaprabhaNewsNetwork |  
Published : Feb 02, 2026, 03:00 AM IST
ಗೊಲಭಾಂವಿ ಗ್ರಾಮದ ಜೈನಬಸದಿಯಲ್ಲಿ ನಡೆದ ಜೈನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಆಲಗೂರ ಮಾತನಾಡಿದರು. | Kannada Prabha

ಸಾರಾಂಶ

ಇಂದು ತಂತ್ರಜ್ಞಾನದ ಮಿತಿಮೀರಿದ ಬಳಕೆ, ಮೊಬೈಲ್‌ ಬಳಕೆಯ ದುಷ್ಪರಿಣಾಮದಿಂದ ಯುವ ಪೀಳಿಗೆ ನೈತಿಕವಾಗಿ ಅಧಪತನವಾಗುತ್ತಿರುವುದು ಅತ್ಯಂತ ಕಳವಳಕಾರಿ. ಯುವಜನತೆಯನ್ನು ದೇಶದ ಸತ್ಪ್ರಜೆಯಾಗಿಸಲು ಎಲ್ಲ ಪಾಲಕರು ಶಿಕ್ಷಣದ ಜತೆಗೆ ನೈತಿಕ ಮೌಲ್ಯ ಹಾಗೂ ಸನಾತನ ಪರಂಪರೆ ಪಾಲಿಸಬೇಕಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಆಲಗೂರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಇಂದು ತಂತ್ರಜ್ಞಾನದ ಮಿತಿಮೀರಿದ ಬಳಕೆ, ಮೊಬೈಲ್‌ ಬಳಕೆಯ ದುಷ್ಪರಿಣಾಮದಿಂದ ಯುವ ಪೀಳಿಗೆ ನೈತಿಕವಾಗಿ ಅಧಪತನವಾಗುತ್ತಿರುವುದು ಅತ್ಯಂತ ಕಳವಳಕಾರಿ. ಯುವಜನತೆಯನ್ನು ದೇಶದ ಸತ್ಪ್ರಜೆಯಾಗಿಸಲು ಎಲ್ಲ ಪಾಲಕರು ಶಿಕ್ಷಣದ ಜತೆಗೆ ನೈತಿಕ ಮೌಲ್ಯ ಹಾಗೂ ಸನಾತನ ಪರಂಪರೆ ಪಾಲಿಸಬೇಕಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಆಲಗೂರ ಕರೆ ನೀಡಿದರು.

ಗೊಲಭಾಂವಿ ಗ್ರಾಮದ ಜೈನಬಸದಿಯಲ್ಲಿ ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಸಂಘ ತೇರದಾಳ, ರಬಕವಿ-ಬನಹಟ್ಟಿ ಹಾಗೂ ಗ್ರಾಮದ ಜೈನ ಸಮಾಜದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಜೈನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಯುವಪೀಳಿಗೆ ಆಧುನಿಕತೆಯ ಭರಾಟೆಯಲ್ಲಿ ಮೂಲತ್ವ ಕಳೆದುಕೊಂಡು ಭವಿಷ್ಯದ ಬದುಕು ಹಾಳು ಮಾಡಿಕೊಳ್ಳುತ್ತಿದೆ. ಪಾಲಕರು ಮಕ್ಕಳ ನಡೆಯ ಬಗ್ಗೆ ನಿಗಾ ವಹಿಸದೇ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛೆಯಾಗಿ ಬಿಟ್ಟಿರುವುದೇ ಇದಕ್ಕೆಲ್ಲ ಕಾರಣ. ಎಲ್ಲ ತಂದೆ-ತಾಯಂದಿರು ತಮ್ಮ ಪ್ರೌಢ ವಯಸ್ಸಿನ ಮಕ್ಕಳ ಚಲನವಲನ ಗಮನಿಸಬೇಕು. ಶಿಕ್ಷಣ ಜತೆಗೆ ಸಾಂಸ್ಕೃತಿಕ, ಧಾರ್ಮಿಕ ಮೌಲ್ಯಗಳನ್ನು ಬೆಳೆಸಬೇಕೆಂದರು.ಬೆಳಗಾವಿ ಡಿವೈಎಸ್ಪಿ ಭರಮಪ್ಪ ಲೋಕಾಪುರ ಮಾತನಾಡಿ, ಜೈನ ಸಮುದಾಯ ಇಂದು ಅಲ್ಪಸಂಖ್ಯೆಯಲ್ಲಿದ್ದು, ನಮ್ಮ ಆಚಾರ, ವಿಚಾರ, ಧಾರ್ಮಿಕ ನಡಾವಳಿಗಳು ಶಿಕ್ಷಣ ನೀಡುವ ಭರಾಟೆಯಲ್ಲಿ ಕ್ಷೀಣಿಸುತ್ತಿವೆ. ಇದು ಸಮುದಾಯದ ಉಳಿವಿಗೆ ದೊಡ್ಡ ಸವಾಲಾಗಿದ್ದು, ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ನೀಡಿದರೂ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳು, ವಿಧಿ-ವಿಧಾನಗಳು ಮತ್ತು ನೈತಿಕ ಮೌಲ್ಯ ಹೇಳಿಕೊಡದಿದ್ದರೆ ಎಲ್ಲವೂ ವ್ಯರ್ಥ. ಮುಂದಿನ ಪೀಳಿಗೆಯ ಭವಿಷ್ಯ ನಮ್ಮತನದ ಅಡಿಪಾಯದಲ್ಲೇ ನಿರ್ಧರಿತಗೊಂಡರೆ ಎಲ್ಲರ ಭವಿಷ್ಯ ಭದ್ರವಾಗುತ್ತದೆಂದರು.

ವೇದಿಕೆಯಲ್ಲಿ ಜಮಖಂಡಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸುರೇಶಗೌಡ ಪಾಟೀಲ, ಬಸಗೌಡ ಬಾಬಗೊಂಡ, ಅಣ್ಣಪ್ಪ ಹಳಿಂಗಳಿ, ಶ್ರೀಕಾಂತ ಮಗದುಂ, ರಮೇಶ ಸವದಿ, ಸತೀಶ ಹಜಾರೆ, ಪ್ರವೀಣ ನಾಡಗೌಡ, ಸುಕುಮಾರಗೌಡ ಪಾಟೀಲ, ಸುರೇಶ ಅಕ್ಕಿವಾಟ, ಅಜೀತ ಕಾಸರ, ಸುನೀಲ ಆಳಗೊಂಡ, ಧರೆಪ್ಪ ಖವಟಗೊಪ್ಪ, ಕಿರಣ ಕೊತ್ತಲಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರಬಕವಿ-ಬನಹಟ್ಟಿ, ತೇರದಾಳ ತಾಲೂಕ ಧುರೀಣರಾದ ಡಾ.ಧನಪಾಲ ಯಲ್ಲಟ್ಟಿ, ಗಿರೀಶ ಚವಜ, ಭರತೇಶ ಲೋಕಾಪೂರ, ಮಲ್ಲಿನಾಥ ಬಾಬಣ್ಣವರ, ಮಹಾವೀರ ಜಮಖಂಡಿ, ಅಭಯ ಶಿರಗಾರ, ಮಹಾವೀರ ಪಾಟೀಲ, ಅಮೀತ ಯಾಬಣ್ಣವರ, ನೇಮಿನಾಥ ಜಮಖಂಡಿ, ಬಂಡು ಚೌಗಲಾ, ಸುನೀತಾ ಆಳಗೊಂಡ, ಕವಿತಾ ಸಾವಂತನವರ ಸೇರಿದಂತೆ ಸಮುದಾಯದ ಎಲ್ಲ ಪ್ರಮುಖರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ